ಭಟ್ಕಳ ಮೋಗೆರ ಸಮಾಜದಿಂದ ಸಹಾಯಕ ಆಯುಕ್ತರಿಗೆ ಮನವಿ.

ಭಟ್ಕಳ; ಭಟ್ಕಳ ತಾಲೂಕಿನಲ್ಲಿ ನಮ್ಮ ಮೋಗೆರ ಸಮೂದಾಯಕ್ಕೆ ಆದಾಯ ಪ್ರಮಾಣ ಪತ್ರದ ಜೊತೆಗೆ ಪ್ರವರ್ಗ ಪ್ರಮಾಣ ಪತ್ರ ಕೊಡುತ್ತಿರುವದು ಗಮನಕ್ಕೆ ಬಂದಿದೆ ನಾವು ಪರಿಶಿಷ್ಠ ವರ್ಗದವರಿಗೆ ಸೇರಿರುವ ಕಾರಣ  ನಮ್ಮ ಜನಾಂಗಕ್ಕೆ ಪ್ರವರ್ಗ ಪ್ರಮಾಣಪತ್ರವನು ಕೊಡುತ್ತಿರುವದನ್ನು ಈ ಕೂಡಲೇ ನಿಲ್ಲಿಸಬೇಕೆಂದು ತಾಲೂಕಾ ಮೋಗೆರ ಸಮಾಜದವರಿಂದ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿಲಾಯಿತು.

ತಾಲೂಕಿನಲ್ಲಿ ಕೆಲವು ಅಂಗನವಾಡಿ ಕಾರ್ಯಕರ್ತರು ಮೋಗರ ಸಮಾಜದ ಮನೆ ಮನೆಗೆ ತೆರಳಿ ಅರ್ಜಿ ಸಲ್ಲಿಸದೆ ಇದ್ದರು ಕೂಡ ಪ್ರವರ್ಗ ಪ್ರಮಾಣ ಪತ್ರ ಕೊಡುತ್ತಿರುವ ವಿಷಯ ಗಮನಕ್ಕೆ ಬಂದಿರುತದೆ. ನಾವು ಮೂಲತ  ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ನಮ್ಮಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಇದ್ದರು ಕೂಡ ಆದಾಯ ಪ್ರಮಾಣ ಪತ್ರ ಸಿಗೂತ್ತಿಲ್ಲಾ ಈ ನಡೆ ಕಾನೂನಿಗೆ ಉಲ್ಲಂಘನೆಯಾಗಿರುತ್ತದೆ .

ಈ ಕೂಡಲೆ ನಮ್ಮ ಜನಾಂಗಕ್ಕೆ ಪ್ರವರ್ಗ ಪ್ರಮಾಣ ಪತ್ರ ಕೊಡುವ ಪ್ರಕ್ರಿಯೆ ನಿಲ್ಲಿಸಿ .ನಮಗೆ ಕೊಡುವುದಾದರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಕೊಟ್ಟು ಸಹಕರಿಸಿ ಎಂದು ಮನವಿ ಮಾಡಿದರು. ಈ ಸಂರ್ಭದಲ್ಲಿ ಮೋಗೆರ ಸಮಾಜದ ಮುಂಖಡರು ಹಾಗೂ ಮೋಗೆರ ಸಮಾಜದ ಸದ್ಯಸರು ಹಾಜರಿದ್ದರು

WhatsApp
Facebook
Telegram
error: Content is protected !!
Scroll to Top