ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಮಾಡಿದ ನರ ರಾಕ್ಷಸರು.!

ಅಸ್ಸೋಂ: ರಾಜಧಾನಿ ಗುವಾಹಟಿಯಲ್ಲಿ ಅಪ್ರಾಪ್ತೆ (Minor girl) ಮೇಲೆ ನಿರಂತರ ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ ಆರೋಪ ಕೇಳಿಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಐವರು ಯುವಕರ ಪತ್ತೆಗೆ ಅಸ್ಸೋಂ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ಫೆಬ್ರವರಿ 19ರಂದು ನಡೆದಿದ್ದರೂ ಸಂತ್ರಸ್ತೆ ಮತ್ತು ಆಕೆಯ ಕುಟುಂಬವು ಮಾರ್ಚ್ 8ರಂದು ಪ್ರಕರಣ ದಾಖಲಿಸಿದೆ. 

ಐವರು ಆರೋಪಿಗಳಾದ ಬಿಕಿ ಅಲಿ, ಫೈಜುಲ್ ಅಲಿ, ಪಿಂಕು ಅಲಿ, ಪೋನಾ ಅಲಿ ಮತ್ತು ರಾಜಾ ಅಲಿ ಈ ಕುಟುಂಬಕ್ಕೆ ಬೆದರಿಕೆ (Blackmail) ಹಾಕಿದ್ದರು ಎಂದು ತಿಳಿದು ಬಂದಿದೆ. 

ಗುವಾಹಟಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ (Pocso) ಮತ್ತು ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

WhatsApp
Facebook
Telegram
error: Content is protected !!
Scroll to Top