ಭಟ್ಕಳ; ಸಾಮಾಜಿಕ ಜಾಲತಾಣದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಕೊಲೆ ಬೇದರಿಕೆ..!

ಸೂಕ್ತ ಮುಜಾಗ್ರತ  ಕ್ರಮ ಕೈ ಗೊಳ್ಳುವಂತೆ ಶ್ರೀರಾಮ ಸೇನೆಯಿಂದ ಮನವಿ.

ಭಟ್ಕಳ ; ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅಹಿತರ ಘಟನೆ ನಡೆಯದರೀತಿಯಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಶ್ರೀರಾಮ ಸೇನೆಯಿಂದ ಸಹಯಕ ಆಯ್ತುತರ  ಮೂಲಕ ಬೆಂಗಳೂರು ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ನೀಡಿದ್ದರು.

ಸ್ವಾಮೀಜಿಗಳು ಅನ್ಯಾಯ ಭಷ್ರಾಚಾರ ಹೋರಾಡುವ ಜೊತೆಗೆ ಸಾಮಾಜಿಕ ಪಿಡುಗಗಳ ಬಗ್ಗೆ ಧ್ವನಿ ಎತ್ತಿ ನೃಶ್ಯ , ಅಸ್ಪೃಶ್ಯ ನಿವಾರಿಸಲು ಸಾಕಷ್ಟು ಕಾರ್ಯ ಮಾಡುತ್ತಿದ್ದಾರೆ . ಜೊತೆಗೆ ದೇಶದ್ರೋಹಿಗಳ , ಮಹಾಂಧರನ್ನು ಬಯಲಿಗೆಳೆಯುತ್ತಿದ್ದಾರೆ . ರಾಜ್ಯ , ಹೊರ ರಾಜ್ಯಗಳಲ್ಲಿ ಓಡಾಡಿ ಪ್ರಚಾರ ದೇಶಭಕ್ತಿ , ಸನಾತನ ಹಿಂದೂ ಧರ್ಮದ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

ಹೀಗಾಗಿ ಕೆಲವರು ಇವರ ವಿರುದ್ಧ ಮಾರಣಾಂತಿಕ ಹಲ್ಲೆ ನಡೆಸುವ ಮಾಹಿತಿಯಿದ್ದು ಸ್ವಾಮೀಜಿಗೆ ಪ್ರಾಣಭಯವಿದೆ . ಈಗಾಗಲೇ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಮುಸ್ಲಿಂ ಮುಖಂಡ ಮುಕ್ರಮ್ ಖಾನ್ ಅನ್ನುವ ವ್ಯಕ್ತಿ ಪೂಜ್ಯರನ್ನು ಕೊಚ್ಚುತ್ತೇನೆ ಅನ್ನುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಕೇಸ್ ದಾಖಲಾದ್ರೂ ಬಂಧನವಾಗಿಲ್ಲ.

ಮಾರ್ಚ್ 1 ರಂದು ಆಳಂದ ಚಲೋ ಕಾರ್ಯಕ್ರಮ ಹಮ್ಮಿಕೊಂಡಾಗ ಆಳಂದದ ಕೋಮುವಾದಿಗಳು ಶ್ರೀಗಳನ್ನು ಮುಗಿಸಲು ಸಂಚು ರೂಪಿಸಿದ್ದು ಆದರೆ ಕಲಬುರಗಿ ಪೊಲಿಸರು ಬಯಲಿಗೆಳದಿದ್ದಾರೆ ಅಂತಹ ದುಷ್ಪ ವ್ಯಕ್ತಿಗಳನ್ನು ಕೂಡ ಬಂಧಿಸಿದ್ದಾರೆ . ಇದನ್ನು ಖಂಡಿಸಿ ಕಲಬುರಗಿಯಲ್ಲಿ SDPI ನವರು ಪ್ರತಿಭಟನೆನಡೆಸಿದ ಸಂದರ್ಭದಲ್ಲಿ ಪೂಜ್ಯರನ್ನು ಮುಗಿಸುವ ಭಾಷಣದ ತುಣುಕುಗಳು , ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದು ಜೊತೆಗೆ ಇಂತಹ ವ್ಯಸತ್ಯದ ಪರಾಕಾಷ್ಠೆಯಾಗಿ ಪೂಜ್ಯರ ಮಠದ ಜಮೀನಿನಲ್ಲಿ ಬೆಳೆದ ಫಸಲನ್ನು ಕೆಲವು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ .  

ಈಘಟನೆ ಆದರಿಸಿ ತಕ್ಷಣವೇ ಸೂಕ್ತ ರಕ್ಷಣೆ , ಅಂಗರಕ್ಷಕರನ್ನು ನಿಯೋಜಿಸಬೇಕು ಹಾಗೂ ಏನಾದ್ರೂ ಅವಘಡ ನಡೆದರೆ ತಮ್ಮ ಇಲಾಖೆಯೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ, ಜಿಲ್ಲಾಧ್ಯಕ್ಷ ರಾಜು ನಾಯ್ಕ , ಭಟ್ಕಳ ತಾಲೂಕು ಅಧ್ಯಕ್ಷ ಉದಯ ಮೊಗೇರ ಹಾಗೂ ಶ್ರೀರಾಮ ಸೇನೆಯ ಸದ್ಯಸರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top