ನೌಕರಿ ಸಿಗಲಿಲ್ಲ ಎಂದು ಮನನೊಂದು ಸಾವಿಗೆ ಶರಣಾದಳೇ ಯುವತಿ ? ಇಲಿ ಪಾಷಾಣ ಸೇವಿಸಿ, ಜಾತ್ರೆಗೆ ಹೋಗಿದಳು.!


ಅಂಕೋಲಾ:
ಇಲಿ ಪಾಷಾಣ ಸೇವಿಸಿ ನಿತ್ರಾಣಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ 3 – 4 ದಿನದಿಂದ ಚಿಕಿತ್ಸೆಗೆ ಒಳಪಡಿಸಲಾಗಿದ್ದರೂ, ಚಿಕಿತ್ಸೆಗೆ ಸ್ವಂದಿಸದೇ ಯುವತಿ ಮೃತಪಟ್ಟ ಬಗ್ಗೆ ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಳಾ ಬಂದರ್ ನಿವಾಸಿ ನಾಗವೇಣಿ ನಾಗೇಶ ಪಡ್ತಿ (27) ಮೃತ ದುರ್ದೈವಿಯಾಗಿದ್ದು, ಈಕೆ ತನಗೆ ನೌಕರಿ ಸಿಗುತ್ತಿಲ್ಲ ಎಂದು ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದವಳು ಎನ್ನಲಾಗಿದ್ದು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾರ್ಚ್ 3 ರಂದು ಯಾರಿಗೂ ತಿಳಿಯದಂತೆ ತನ್ನ ಮನೆಯಲ್ಲಿ ಇಟ್ಟಿದ್ದ ಇಲಿ ಪಾಷಾಣ ಸೇವಿಸಿದ್ದಾಳೆ.
ನಂತರ ತನ್ನ ಸಹೋದರಿ ಜೊತೆಯಲ್ಲಿ ಗೋಕರ್ಣ ಜಾತ್ರೆಗೆ ಹೋಗಿ ಜಾತ್ರೆ ಮುಗಿಸಿ ಮರಳಿ ಬರುತ್ತಿರುವಾಗ ದಾರಿಮಧ್ಯೆ ವಾಂತಿ ಮಾಡಿಕೊಂಡು, ಕಾರಣ ವಿಚಾರಿಸಲಾಗಿ ತಾನು ಇಲಿ ವಿಷ ಸೇವಿಸಿದ್ದನ್ನು ತಿಳಿಸಿದ್ದಳು ಎನ್ನಲಾಗಿದೆ. ನಂತರ ಅವಳನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಣಿಪಾಲ ಆಸ್ಪತ್ರೆಯಲ್ಲಿ 2-3 ದಿನ ಚಿಕಿತ್ಸೆ ನೀಡಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಜೀವನ್ಮರಣದ ನಡುವೆ ಹೋರಾಡುವಂತೆ ಆಗಿತ್ತು. ಕೊನೆ ಕ್ಷಣದಲ್ಲಿ ಬದುಕಬಹುದೇ ಎಂಬ ಆಸೆಗಣ್ಣುಗಳಿಂದ ಕುಟುಂಬಸ್ಥರು ಅವಳನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರಾದರೂ , ಸೋಮವಾರ ರಾತ್ರಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

WhatsApp
Facebook
Telegram
error: Content is protected !!
Scroll to Top