ಅಶ್ಲೀಲವಾಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಬೆದರಿಕೆ:ನೊಂದ ಬಾಲಕಿ ದೂರು ದಾಖಲು.!


ಯಲ್ಲಾಪುರ: ಅಪ್ರಾಪ್ತ ಬಾಲಕಿಯೊಂದಿಗೆ ಯುವಕನೊಬ್ಬ ಸಲುಗೆ ಬೆಳೆಸಿಕೊಂಡಿದ್ದು, ಅಶ್ಲೀಲವಾಗಿ ತೆಗೆದುಕೊಂಡಿದ್ದ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಬೆದರಿಕೆಹಾಕಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ನಗರದಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಈ ಬಾಲಕಿಗೆ ಯಲ್ಲಾಪುರ ತಾಲೂಕಿನ ಹೊಸಳ್ಳಿಯ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ.


ಈ ವೇಳೆ ಇಬ್ಬರೂ ಖಾಸಗಿಯಾಗಿ ತೆಗೆದುಕೊಂಡಿದ್ದ ಫೊಟೊಗಳನ್ನು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸುತ್ತಿದ್ದು, ಆ ಫೋಟೋವನ್ನು ಬಾಲಕಿಯ ವಾಟ್ಸಪ್‌ಗೂ ಕೂಡ ಕಳುಹಿಸಿ ಹೆದರಿಸುತ್ತಿದ್ದ ಎಂದು ಬಾಲಕಿ ತಿಳಿಸಿದ್ದಾಳೆ. ನೊಂದ ಬಾಲಕಿಯು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

WhatsApp
Facebook
Telegram
error: Content is protected !!
Scroll to Top