ಭಟ್ಕಳ ಜ್ಞಾನೇಶ್ವರಿ ಮಹಿಳಾ ಮಂಡಲದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಜ್ಞಾನೇಶ್ವರಿ ಮಹಿಳಾ ಮಂಡಳಿ(ರಿ ) ಸೋನಾರ ಕೇರಿ ಭಟ್ಕಳ್ ಇವರ ಆಶ್ರಯದಲ್ಲಿ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೈವಜ್ಞ ಸಭಾಭವನದಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು


ಉದ್ಘಾಟಕರಾಗಿ ಆಗಮಿಸಿದ ಶ್ರೀಮತಿ ಪ್ರೇಮ ರಾಮಮೂರ್ತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿ ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಯಾವುದೇ ಶೋಷಣೆಗೆ ಒಳಪಡದೆ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎದ್ದು ನಿಂತರೆ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು.
ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರಾಧಿಕಾ. ಎಸ್. ಏನ್ ಮಾತನಾಡಿ ಪ್ರತಿಯೊಂದು ಪುರುಷನ ಹಿಂದೆ ಒಂದು ಹೆಣ್ಣು ಇರುವ ಹಾಗೆ ಜೀವನದಲ್ಲಿ ಹೆಣ್ಣು ಈಗಿನ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ, ಹಾಗು ಸಮಾಜದ ಸಹಕಾರ ಅಷ್ಟೇ ಮುಖ್ಯ ಎಂದು ಹೇಳಿದರು
ಇನ್ನೊಬ್ಬ ಮುಖ್ಯ ಅತಿಥಿ ಪಿಎಸ್ಐ ಸುಮಾ ಆಚರ್ಯ ಅವರು ಸಮಾಜದಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ಮಾಡದೆ ಸಮಾನವಾದ ಶಿಕ್ಷಣವನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಶ್ರೀಮತಿ ಪರಿಮಳ ರಾಜಶೇಖರ ಶೇಟ್ ರವರು ಮಹಿಳಾ ಸಂಘ ಮುಂದಿನ ಯೋಜನೆ ಬಗ್ಗೆ ತಿಳಿಸಿದರು ಹಾಗು ಮುಖ್ಯ ಅತಿಥಿ ಆಗಮಿಸಿದ ಶ್ರೀಮತಿ ಅಶ್ವಿನಿ ಶೇಟ್ , ಶ್ರೀಮತಿ ಸವಿತಾ ಸಾನು, ಹಾಗು ಶ್ರೀಮತಿ ಶಕುಂತಲಾ ಶೇಟ್. ಈ ಸಂದರ್ಭದಲ್ಲಿ ಮಾತನಾಡಿದರು. ವೇದಿಕೆ ಮೇಲೆ ವೆಂಕಟೇಶ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಧಾಕರ್ ಪಾಂಡುರಂಗ ಶೇಟ್ ಮತ್ತು ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಕೊಗ್ಗ ಶೇಟ್ ಇವರು ಉಪಸ್ಥಿತರಿದ್ದರು.
ಶ್ರೀಮತಿ ಪ್ರೇಮ ಮಾರುತಿ ಶೇಟ್ ರವರಿಗೆ ದೈವಜ್ಞಾ ವೀರ ಮಹಿಳೆ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.
ಶ್ರೀಮತಿ ಸೌಮ್ಯ ದಿನೇಶ್ ಶೇಟ್ ಪ್ರಾರ್ಥನೆಯನ್ನು ಹಾಡಿದರು
ಶ್ರೀಮತಿ ಸವಿತಾ ರತ್ನಕರ್ ಶೇಟ್ ಸ್ವಾಗತಿಸಿದರು,
ಶ್ರೀಮತಿ ದೀಪಾ ಸಂದೀಪ ಕೊಲ್ಲೆ ವರದಿ ವಾಚನ ಮಾಡಿದರು.
ಶ್ರೀಮತಿ ಸುಪ್ರಿಯ ಉದಯ ಮಾನಕಾಮೆರವರು ವಂದನಾರ್ಪಣೆಗೈದರು. ಶ್ರೀಮತಿ ಸವಿತಾ ರತ್ನಾಕರ್ ಶೇಟ್ ಮತ್ತು ಶ್ರೀಮತಿ ಸುಪ್ರಿಯ ಉದಯ ಮಾನಕಾಮೆ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ನಂತರ ದೈವಜ್ಞ ಮಹಿಳಾ ಮಂಡಳಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಈ ಕಾರ್ಯಕ್ರಮಕ್ಕೆ ಸಂದೀಪ್ ಕೊಲ್ಲೆ ಹಾಗೂ ಸಮಾಜದ ಬಾಂಧವರು ಹಾಜರಿದ್ದರು

WhatsApp
Facebook
Telegram
error: Content is protected !!
Scroll to Top