ವಿಧಾನಸಭೆ ಕಲಾಪಕ್ಕೆ ಸಚಿವರು ಗೈರು – ಸ್ಪೀಕರ್ ಗರಂ

ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗಿ 4 ದಿನ ಆಗಿದೆ. ನಿನ್ನೆ ಮೊನ್ನೆಯಿಂದ ನಾನು ಗಮನಿಸ್ತಿದೀನಿ ಸದನಕ್ಕೆ ಬಂದರೂ, ಬರದೇ ಹೋದರೂ ಅಡ್ಡಿ ಇಲ್ಲ ಎಂಬ ಭಾವನೆ ಕೆಲವು ಸಚಿವರಲ್ಲಿ ಇದೆ. ಇದು ಶೋಭೆ ತರಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದರು.

ಸದನದಲ್ಲಿ ಮಾತನಾಡಿದ ಅವರು, ಸದನ ಪ್ರಾರಂಭವಾಗಿ ಇಂದಿಗೆ ನಾಲ್ಕು ದಿನ ಆಯಿತು. ಪ್ರಶೋತ್ತರ ಮತ್ತು ಇತರ ಸಂದರ್ಭಗಳಲ್ಲಿ ಸದನದಲ್ಲಿ ಸಚಿವರು ಕಡ್ಡಾಯವಾಗಿ ಇರಬೇಕೆಂದು ಇದೆ. ಆದರೆ ನಿನ್ನೆ ಮೊನ್ನೆ ಮತ್ತು ಇಂದಿನ ಪರಿಸ್ಥಿತಿ ನೋಡಿದರೆ, ಸದನಕ್ಕೆ ಬಂದರೂ ತೊಂದರೆ ಇಲ್ಲ, ಬರದಿದ್ದರೂ ತೊಂದರೆ ಇಲ್ಲ ಎಂಬ ಮನಸ್ಥಿತಿ ಸದಸ್ಯರಲ್ಲಿ, ಸಚಿವರಲ್ಲಿ ಬಂದರೆ ಈ ವ್ಯವಸ್ಥೆ ಕುಸಿತ ಕಾಣುತ್ತದೆ. ಸಚಿವರಿಗೆ ಇದಕ್ಕಿಂತ ಇನ್ನಿತರ ಕಾರ್ಯಕ್ರಮ ಮುಖ್ಯವೆನಿಸಿದೆ. ಈ ಭಾವನೆಯಿಂದ ಹೊರಬನ್ನಿ. ಸಚಿವರು ಗೆಸ್ಟ್ ಅಪಿಯರೆನ್ಸ್ ಥರ ಬರ್ತಾರೆ. ಯಾವುದೋ ಒಂದು ಸಂದರ್ಭದಲ್ಲಿ ಸದನಕ್ಕೆ ಬಂದು ಹೋಗ್ತಾರೆ ಎಂದು ಸಚಿವರ ಮೇಲೆ ಅಸಮಾಧಾನಗೊಂಡರು. ‌

ಈ ವೇಳೆ ಸಚಿವರು ಸದನಕ್ಕೆ ಬರುವಂತೆ ನೀವೇ ಏನಾದ್ರೂ ರೂಲಿಂಗ್ ಕೊಡಬೇಕು ಸಚಿವರು ಇಲ್ಲದಿದ್ದ ಮೇಲೆ ಮತ್ಯಾಕೆ ಸದನ ನಡೆಸ್ತೀರಿ ಎಂದು ಸ್ಪೀಕರ್‌ಗೆ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದರು.

WhatsApp
Facebook
Telegram
error: Content is protected !!
Scroll to Top