ಅರಣ್ಯ ಅತಿಕ್ರಮಣದಾರರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರೋಧಿಸಿ ಭಟ್ಕಳದಲ್ಲಿ ಮಾರ್ಚ 10 ರಂದು ಬೃಹತ ಪ್ರತಿಭಟನ ಮೆರವಣಿಗೆ.

ಅರಣ್ಯ ಅತಿಕ್ರಮಣದಾರರ ಮೇಲಿನ ದಬ್ಬಾಳಿಕೆ ನಾವು ಸಹಿಸೆವು ;ರವೀಂದ್ರ ನಾಯ್ಕ ಹೇಳಿಕೆ!

ಭಟ್ಕಳ :ಅರಣ್ಯವಾಸಿಗಳ ಪರವಾಗಿ ಸತತ 30 ವರ್ಷಗಳ ಹೋರಾಟದ ಫಲವಾಗಿ ಫೆ .22 ರಂದು ಸರಕಾರದ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಲಾದ ಸಭೆಯಲ್ಲಿ ಪ್ರವಾಹದಿಂದ  ಹಾನಿಗೊಳಗಾದ ಮನೆ ಪುನರ್ ನಿರ್ಮಾಣಕ್ಕೆ ಅವಕಾಶ ಹಾಗೂ ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಸರಕಾರದ ನಿರ್ಧಾರ ಕೈಗೊಳ್ಳಬೇಕು ಹಾಗೂ ಪ್ರತಿ ಸೋಮವಾರದಂದು ಒಕ್ಕಲೆಬ್ಬಿಸುವ ಪ್ರಕ್ರಿಯೆ ಆದೇಶವನ್ನು ಸ್ಥಗಿತಗೊಳಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾಗೊಷ್ಠಿಯಲ್ಲಿ ಆಗ್ರಹಿಸಿದ್ದರು.

ಅವರು ಭಟ್ಕಳದಲ್ಲಿ ಕರೆದ ಪತ್ರಿಕಾಗೊಷ್ಠಿ ಉದೇಶಿಸಿ ಮಾತನಾಡಿ ಜಿಲ್ಯಾದ್ಯಾಂತ ಅರಣ್ಯ ಅತಿಕ್ರಮಣದಾರರಿಗೆ ತುಂಬಾ ತೊಂದರೆ ಆಗುತ್ತಿತು ಅತಿಕ್ರಮಣದಾರರು ಸಂಕಷ್ಠದಲ್ಲಿದ್ದಾರೆ ದಶಕಗಳಿಂದ ಅರಣ್ಯ ಅತಿಕ್ರಮಣದಾರರು ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ ಆದರೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲಾ. ಆದರೆ ಅತಿಕ್ರಮಣದಾರರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಾ ಬಂದಿದೆ

ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ದಾರರ 85757 ಅರ್ಜಿಗಳ ಪೈಕಿ 74274 ಅರ್ಜಿಗಳು ತಿರಸ್ವತವಾಗಿದೆ . ಅಂದರೆ ಒಟ್ಟು ಅರ್ಜಿಗಳಲ್ಲಿ ಶೇ 74 ರಷ್ಟು ಅರ್ಜಿ ತಿರಸ್ಕರಿಸಲಾಗಿದೆ . 2855 ಅರ್ಜಿಗಳಿಗೆ ಹಕ್ಕು ಪತ್ರ ಲಭಿಸಿರುವುದು ಬೇಸರದ ಸಂಗತಿಯಾಗಿದೆ . ವೇದಿಕೆಯ ಹೋರಾಟದ ಎಲ್ಲಾ ಮಾದರಿಯ ಯಶಸ್ವಿನ  ಹಾಗೂ ಹೋರಾಟದ ಮಾರ್ಗದ  ಕುರಿತಾಗಿ ಅರಣ್ಯ ಭೂಮಿ ಹಕ್ಕುಗಳ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಇದು ಅರಣ್ಯವಾಸಿಗಳಲ್ಲಿ ಹೋರಾಟದ ಜೊತೆ ಜೊತೆಗೆ ಅವರಲ್ಲಿ ಜಾಗ್ರತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಹಾಗೂ ಸರ್ಕಾರವೆ ರಚಿಸಿದ ಆದೇಶವನ್ನು ರದ್ದುಪಡಿಸುವ ಹಂತಕ್ಕೆ ಹಾಗೂ ನಮ್ಮ ಅರಣ್ಯವಾಸಿಗಳ ಬೇಡಿಕೆ ಈಡೇರಿಕೆಗೆ ಸರಕಾರ ಮುಂದಾಗಿರುವುದು ವೇದಿಕೆಯ ಹೋರಾಟದ ಸಂಘಟನೆಯ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದ್ದರು .

ನಂತರ ಮಾತನಾಡಿದ ವೇದಿಕೆಯ ಮುಖಂಡ ಇನಾಯತ್ ಉಲ್ಲಾ ಶಬಂದ್ರಿ ಅವರು ಮಾರ್ಚ್ 10 ರಂದು ಅರಣ್ಯವಾಸಿಗಳನ್ನು ಉಳಿಸಿ- ಜಾಥಾದ ಬೃಹತ್ ರಾಲಿಯು 10 ಗಂಟೆಗೆ ಇಲ್ಲಿನ ಪ್ರವಾಸಿ ಮಂದಿರದ ಪ್ರವೇಶ ದ್ವಾರದಿಂದ ಭಟ್ಕಳದ ಪ್ರಮುಖ ಬೀದಿಯಲ್ಲಿ ಸಂಚರಿಸಿ ತಾಲೂಕು ಕ್ರೀಡಾಂಗಣದಲ್ಲಿನ ಅಲಾಲ್ ಹಾಲ್‌ನಲ್ಲ ಕಾರ್ಯಕ್ರಮ ಜರುಗಲಿದೆ, ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ  ವಕೀಲರಾದ ರವೀಂದ್ರ ನಾಯ್ಕ,  ಜಿಲ್ಲಾ ಸಂಚಾಲಕ ದೇವರಾಜ  ಗೊಂಡ ,  ಪಾಂಡುರಂಗ ನಾಯ್ಕ ಬೆಳಕೆ , ಕಯುಂ ಸಾಬ್ , ರಿಜ್ವಾನ್ , ಚಂದ್ರ ನಾಯ್ಕ , ಕರ್‌ ಶೇಕ್ , ಮಹಮ್ಮದ್ ನತಾರ್‌ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top