ಪೀಣ್ಯದಲ್ಲಿ ಹೆಚ್ಚಿದ ಹಾಲುಗಳ್ಳರ ಹಾವಳಿ; ಹಾಲಿನ ಪ್ಯಾಕ್ ಇಟ್ಟ ಐದೇ ನಿಮಿಷಕ್ಕೆ ಹಾಲಿನ ಪ್ಯಾಕನ್ನೇ ಎಗರಿಸಿ ಹೊತ್ತೋಯ್ತಾರೆ.!

ಬೆಂಗಳೂರು: ಬೈಕು-ಕಾರು ಕದಿಯುವ ಖದೀಮರನ್ನ ನೋಡಿರುತ್ತೀರಿ ಆದರೆ ಬೆಂಗಳೂರಿನಲ್ಲಿ ಮನೆಮುಂದೆ ಇಟ್ಟಿರುವ  ಹಾಲನ್ನೂ ಬಿಡಲ್ಲ ಸ್ವಾಮಿ. ಹಾಲುಗಳ್ಳನ ಕೈಚಳಕದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ

ಪೀಣ್ಯದ ಎಚ್ಎಂಟಿ ಲೇಔಟ್ ಬಳಿಯ ಮನೆಯೊಂದರ ಬಳಿ  ಹಾಲು ಸರಬರಾಜು ಮಾಡುವವರು ಮನೆ ಮುಂದೆ ಹಾಲಿನ ಪ್ಯಾಕ್ ಅನ್ನು ಇಟ್ಟು ಹೋಗುತ್ತಾರೆ. ಆ ಹಾಲಿನ ಪ್ಯಾಕ್ ಇಟ್ಟ ಐದೇ ನಿಮಿಷಕ್ಕೆ ಕಳ್ಳನೊಬ್ಬ ತಲೆಗೊಂದು ಮಂಕಿ ಕ್ಯಾಪ್ ಹಾಕ್ಕೊಂಡು ಹಾಲಿನ ಪ್ಯಾಕನ್ನೇ ಎಗರಿಸಿ ಹೊತ್ತೊಯ್ದಿದ್ದಾನೆ. ಹಾಲಿನ ಬ್ಯಾಗನ್ನೇ ಹೊತ್ತೋಯ್ದ ಕಳ್ಳ. ಇತ್ತೀಚೆಗೆ ಪೀಣ್ಯ ಭಾಗದಲ್ಲಿ  ಹಾಲಿನ ಪ್ಯಾಕ್ ಕದಿಯೋ ಗ್ಯಾಂಗ್ ಹೆಚ್ಚಾಗಿದ್ದಾರೆ. ಸದ್ಯ ಪೀಣ್ಯ ಪೊಲೀಸರಿಗೆ ಹಾಲುಗಳ್ಳರ ಗ್ಯಾಂಗ್ ತಲೆನೋವಾಗಿದೆ

WhatsApp
Facebook
Telegram
error: Content is protected !!
Scroll to Top