ಭಟ್ಕಳ: ನಾಗಶ್ರೀ ನಾಯ್ಕ ಕರಾಟೆ ಕ್ರೀಡೆಯಲ್ಲಿ ಯುನಿವರ್ಸಿಟಿ ಬ್ಲೂ.

ಭಟ್ಕಳ : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಕರಾಟೆ ಕ್ರೀಡೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಯಾದ ಕುಮಾರಿ . ನಾಗಶ್ರೀ ನಾಯ್ಕ ಇವಳು ಯುನಿವರ್ಸಿಟಿ ಬ್ಲೂ ಆಯ್ಕೆಯಾಗಿ ಹರಿಯಾಣಾ ರಾಜ್ಯದ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಜರುಗುತ್ತಿರುವ ಅಂತರ ವಿಶ್ವವಿದ್ಯಾಲಯ – ರಾಷ್ಟ್ರಮಟ್ಟದ ಕರಾಟೆ ಕ್ರೀಡೆಯಲ್ಲಿ ಉತ್ತರವಲಯವನ್ನು ಪ್ರತಿನಿಧಿಸಿ , ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ಹೆಚ್ಚಿಸಿದ್ದಾರೆ.

ಇವರ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಆಡಳಿತ ಮಂಡಳಿ , ಪ್ರಾಂಶುಪಾಲರು , ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವಿನಾಯಕ ನಾಯ್ಕ , ಉಪನ್ಯಾಸಕರು , ಸಿಬ್ಬಂದಿವರ್ಗ , ಕರಾಟೆ ತರಬೇತುದಾರರು , ಪಾಲಕರಾದ ಶ್ರೀಮತಿ ಪದ್ಮಾವತಿ ಹಾಗೂ ಶ್ರೀ ವೆಂಕಟೇಶ ನಾಯ್ಕ ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗಳಿಸಲೆಂದು ಶುಭ ಹಾರೈಸಿದರು.

WhatsApp
Facebook
Telegram
error: Content is protected !!
Scroll to Top