ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಸದ್ಯ ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಚಿತ್ರ ತೆರೆಕಂಡ ದಿನದಿಂದ ಸತತ 6ನೇ ದಿನವಾದ ಇಂದೂ ಹೌಸ್ಫುಲ್ ಪ್ರದರ್ಶನ ಕಂಡಿದ್ದು, ಆಲಿಯಾ ಭಟ್ ಅಭಿನಯಕ್ಕೆ ಪ್ರೇಕ್ಷಕರು ಔಟ್ ಆಫ್ ಔಟ್ ಮಾರ್ಕ್ಸ್ ನೀಡಿದ್ದಾರೆ

ಐದನೇ ದಿನ ಗಂಗೂಬಾಯಿ ಕಥಿಯಾವಾಡಿ 6.21 ಕೋಟಿ ಕಲೆಕ್ಷನ್ ಮಾಡಿದ್ದು, ಒಟ್ಟು 6 ದಿನಗಳಲ್ಲಿ ಚಿತ್ರ ಬರೋಬ್ಬರಿ 63.53 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಕೆಲವೇ ದಿನಗಳಲ್ಲಿ 100 ಕೋಟಿ ಗಡಿದಾಟುವ ನಿರೀಕ್ಷೆಯಿದೆ.
ಸಿನಿಮಾ ವಿಷ್ಲೇಶಕ ತರುಣ್ ಆದರ್ಶ್ ಗಂಗೂಬಾಯಿ ಕಥಿಯಾವಾಡಿ ಚಿತ್ರದಗಳಿಕೆಯ ಅಂಕಿ ಅಂಶಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಗಂಗೂಬಾಯಿ ಕಥಿಯಾವಾಡಿ ಚಿತ್ರದ ಹಾಡುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.