ರಟಕಲ್ ಗ್ರಾಮವನ್ನ ಹೋಬಳಿ ಮಾಡುವಂತೆ ರಕ್ತದಲ್ಲಿ ಪತ್ರ ಬರೆದ ಗ್ರಾಮಸ್ಥರು..!

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮವನ್ನು ಹೋಬಳಿ ಒತ್ತಾಯಿಸಿ ಗ್ರಾಮಸ್ಥರು ರಕ್ತದಲ್ಲಿ ಪತ್ರ ಬರೆದು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರವಾನಿಸಿದ್ದಾರೆ.

ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ರಕ್ತದಿಂದ ಪತ್ರ ಬರೆದು ಸಭಾಪತಿಗೆ ಕಳುಹಿಸಿದ್ದಾರೆ. ರಟಕಲ್ ಗ್ರಾಮದಲ್ಲಿ ಎಲ್ಲಾ ಮೂಲ ಸೌಲಭ್ಯಗಳಿದ್ದರೂ ಕೂಡ ಸರ್ಕಾರ ಹೋಬಳಿಯಾಗಿ ಘೋಷಣೆ ಮಾಡಿಲ್ಲ. ಗ್ರಾಮಸ್ಥರು ಹೋಬಳಿಗಾಗಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು. ರಟಕಲ್​ನಿಂದ ಕಲಬುರಗಿಗೆ 56 ಕಿಲೋ ಮೀಟರ್ ಪಾದಯಾತ್ರೆಯನ್ನ ನಡೆಸಲಾಗಿತ್ತು.

ಪಾದಯಾತ್ರೆ ಫಲಿಸದ ಕಾರಣ ಇದೀಗ ರಕ್ತದಲ್ಲಿ ಪತ್ರ ಬರೆದು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ರವಾನಿಸಿದ್ದಾರೆ. ಕಾಳಗಿ ತಾಲೂಕಿನಿಂದ 15 ಕಿಲೋ ಮೀಟರ್ ದೂರದಲ್ಲಿರುವ ರಟಕಲ್ ಗ್ರಾಮ ಎಲ್ಲ ಮೂಲ ಸೌಕರ್ಯ ಹೊಂದಿದೆ.

WhatsApp
Facebook
Telegram
error: Content is protected !!
Scroll to Top