ಸಂಚಾರಿ ಜಂಟಿ ಪೊಲೀಸ್ ಆಯಕ್ತರ ಕಚೇರಿಯಲ್ಲೇ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ಬೆಂಗಳೂರು: ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯಕ್ತರ ಕಚೇರಿಯಲ್ಲೇ ಕಳ್ಳತನ ಮಾಡಲಾಗಿದೆ. ಟಿಎಂಸಿ ಕಚೇರಿಯಲ್ಲಿರುವ ಜನರೇಟರ್​ಗೆ ಅಳವಡಿಸಿದ್ದ ಬ್ಯಾಟರಿ ಕಳ್ಳತನ ಮಾಡಲಾಗಿದೆ.

ಫೆಬ್ರವರಿ 21ರ ರಾತ್ರಿ 1.30 ಸುಮಾರಿಗೆ ಬಂದು 20 ಸಾವಿರ ಮೌಲ್ಯದ ಎಕ್ಸೈಡ್ ಕಂಪನಿಯ 2 ಬ್ಯಾಟರಿ ಕಳ್ಳತನ ಮಾಡಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಈ ಹಿಂದೆ ಪೊಲೀಸರ ಮೇಲಿನ‌ ದ್ವೇಷದಿಂದ ದಂಪತಿ ಸಿಗ್ನಲ್ ಸಿಸಿಟಿವಿಗಳ ಬ್ಯಾಟರಿ ಕದ್ದಿದ್ದರು. ಇದೀಗ ಅದೇ ರೀತಿ ಸಂಚಾರಿ ಕೇಂದ್ರ ಕಚೇರಿಯಲ್ಲಿಯೇ ಕಳ್ಳತನ ನಡೆದಿದೆ.

WhatsApp
Facebook
Telegram
error: Content is protected !!
Scroll to Top