53 ವರ್ಷಗಳ ವಯಸ್ಸಿನ ಅಂತರದ ಅಪರೂಪದ ಜೋಡಿ! 24 ರ ಯುವಕನ ಜೊತೆ 77ರ ವೃದ್ಧೆ ಮದುವೆ..!

24 ರ ಯುವಕನೋರ್ವ ಮತ್ತು 77 ರ ವಯಸ್ಸಿನ ಮಹಿಳೆಯನ್ನು ವರಿಸಿದ ಘಟನೆ ನಡೆದಿದೆ. ತಮ್ಮ ಸಂಬಂಧವನ್ನು ತಪ್ಪು ಎಂದು ಅನೇಕರು ಕರೆದರೂ ಅವರು ಮುಜುಗರ ಪಟ್ಟಿಲ್ಲ ಎಂದು ಇವರು ಹೇಳಿದ್ದಾರೆ

ಅಕ್ಟೋಬರ್ 2015 ರಲ್ಲಿ ಮದುವೆಯಾದ 53 ವರ್ಷಗಳ ವಯಸ್ಸಿನ (Wedding) ಅಂತರವಿರುವ ಈ ದಂಪತಿಗಳು ತಮ್ಮ ಮದುವೆ “ಅತ್ಯುತ್ತಮ” ಮತ್ತು “ಸ್ಥಿರವಾಗಿದೆ” ಎಂದು ಹೇಳಿದ್ದಾರೆ.

2015 ರಲ್ಲಿ ಅಲ್ಮೆಡಾ ಎಂಬ ವೃದ್ಧೆ ಅವರ ಮಗನ ಅಂತ್ಯಕ್ರಿಯೆಯಲ್ಲಿ (Funeral) ಗ್ಯಾರಿ ಎಂಬ ಯುವಕನನ್ನು ಭೇಟಿಯಾದರು. ಆ ನಂತರ ಇವರಿಬ್ಬರು ಎರಡು ವಾರಗಳ ಬಳಿಕ ವಿವಾಹವಾದರು. ಆ ಸಮಯದಲ್ಲಿ, ಗ್ಯಾರಿ ಕೇವಲ 17 ವರ್ಷ ವಯಸ್ಸಿನವರಾಗಿದ್ದರು.  

“ನಾವು ಯಾವಾಗಲೂ ಅತ್ಯುತ್ತಮವಾದ, ಸ್ಥಿರವಾದ ದಾಂಪತ್ಯವನ್ನು ಹೊಂದಿದ್ದೇವೆ” ಎಂದು ಗ್ಯಾರಿ ಹೇಳುತ್ತಾರೆ. ಇವರಿಬ್ಬರ ನಡುವೆ 53 ವರ್ಷಗಳ ವಯಸ್ಸಿನ ಅಂತರವಿದೆ. ಗ್ಯಾರಿ ಮತ್ತು ಅಲ್ಮೆಡಾ (Gary & Almeda) ಅವರ ದಾಂಪತ್ಯ ಜೀವನ ಸಂತಸದಿಂದ ತುಂಬಿದೆ.

WhatsApp
Facebook
Telegram
error: Content is protected !!
Scroll to Top