ಭಟ್ಕಳ:ಮನೆಗೆ ಬಂದು ವೃದ್ದೆಯ ಮೇಲೆ‌ ಏಕಾಏಕಿ ದಾಳಿ‌ಮಾಡಿದ ಮಂಗ..!


ಭಟ್ಕಳ: ಮನೆಯ ಹೊರಗಡೆ ಬಂದ ವೃದ್ಧೆಯೋರ್ವರ ಮೇಲೆ ಮಂಗವೊಂದು ಏಕಾಏಕಿ ದಾಳಿ ನಡೆಸಿ ಪರಾರಿಯಾ ಗಿರುವ ಘಟನೆ ತಾಲೂಕಿನ ಗುಡ್‌ಲಕ್‌ ರೋಡ್ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ಬೀಬಿ ಅಮೀನಾ ಎಂದು ಗುರುತಿಸಲಾಗಿದೆ. ಈಕೆಯ ಕೈ ಭಾಗದಲ್ಲಿ ಮಂಗ ಕಚ್ಚಿ ಗಾಯಗೊಳಿಸಿರುವುದು ಕಂಡು ಬಂದಿದೆ.


ವೃದ್ಧಿಗೆ ಹೆಚ್ಚು ಓಡಾಡಲು ಸಾಧ್ಯವಾಗದ ಕಾರಣ ವೈದ್ಯರೇ ಮಹಿಳೆಯ ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದಾರೆ. ಕಳೆದ 3 ತಿಂಗಳಿನಿಂದ ಮಂಗ ಗುಡ್‌ಲಕ್‌ ರೋಡ್ ಭಾಗದಲ್ಲಿ ಹುಚ್ಚಾಟ ನಡೆಸಿದೆ, ಈಗಾಗಲೇ 14 ಜನರು ಮಂಗನ ದಾಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಈಗಾಗಲೇ ಅರಣ್ಯ ಇಲಾಖೆಗೆ ತಿಳಿಸಿದ್ದರೂ ಮಂಗನನ್ನು ಓಡಿಸಲು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ

WhatsApp
Facebook
Telegram
error: Content is protected !!
Scroll to Top