ಭಾರತವನ್ನು ಹೊಗಳಿ, ಪಾಕ್‌ಗೆ ಉಗಿದ ತಾಲಿಬಾನ್ ನಾಯಕರು..! ಅಸಲಿಗೆ ಅಲ್ಲಿ ಆಗಿದ್ದೇನು ಗೊತ್ತಾ?

ಫ್ಘಾನಿಸ್ತಾನ್: ವಿಶ್ವದ ಎದುರು ಪಾಕಿಸ್ತಾನಕ್ಕೆ ಮತ್ತೆ ಮತ್ತೆ ಮುಖಭಂಗ ಆಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಪಾಕಿಸ್ತಾನದ ಪ್ರಧಾನಿ ರಷ್ಯಾಗೆ ಹೋಗಿ, ಬಳಿಕ ಅಲ್ಲಿಂದಲೇ ಅಪಮಾನಕ್ಕೆ ಈಡಾಗಿದ್ದರು. ಇದೀಗ ಪಕ್ಕದ ಅಫ್ಘಾನಿಸ್ತಾನದಲ್ಲೂ ತಾಲೀಬಾನ್ ನಾಯಕರು ಪಾಕಿಸ್ತಾನಕ್ಕೆ ಮಂಗಳಾರತಿ ಮಾಡಿದ್ದಾರೆ. ಇದೇ ವೇಳೆ ಭಾರತವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ!

ಸದಾ ಭಾರತದ (India) ವಿರುದ್ಧ ಕತ್ತಿ ಮಸೆಯುವ ಪಾಕಿಸ್ತಾನ (Pakistan) ಅಕ್ಕಪಕ್ಕದ ಯಾವ ದೇಶಗಳೊಂದಿಗೂ ಉತ್ತಮ ಸಂಬಂಧ ಹೊಂದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಚೀನಾ (China) ಬಿಟ್ಟರೆ ಬೇರೆ ಎಲ್ಲಾ ದೇಶಗಳೊಂದಿಗೆ ಪಾಕ್ ಸಂಬಂಧ (Relationship) ಅಷ್ಟಕ್ಕಷ್ಟೇ. ಪಕ್ಕದಲ್ಲೇ ಇರುವ ಅಫ್ಘಾನಿಸ್ತಾನವನ್ನು (Afghanistan) ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅಂತ ಪಾಕಿಸ್ತಾನ ಪ್ರಯತ್ನ ಪಡುತ್ತಲೇ ಇದೆ. ಇದೇ ವೇಳೆ ಖುದ್ದು ತಾಲಿಬಾನ್ (Taliban) ನಾಯಕರೇ (Leaders) ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದ ಪರ ಮಾತನಾಡಿದ್ದು, ಭಾರತವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಪಾಕಿಸ್ತಾನದ ವಿರುದ್ಧ ತಾಲಿಬಾನ್ ನಾಯಕರ ಗುಡುಗು

ಅಪ್ಘಾನಿಸ್ತಾನದಲ್ಲಿ ಆಡಳಿತ ನಡುಸುತ್ತಿರುವ ತಾಲಿಬಾನ್ ನಾಯಕರು ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನವನ್ನು ಹೋಲಿಕೆ ಮಾಡಿ, ಪಾಕಿಸ್ತಾನಕ್ಕೆ ಮಹಾ ಮಂಗಳಾರತಿ ಮಾಡಿದ್ದಾರೆ.

ಕಳಪೆ ಗೋಧಿ ಕಳಿಸಿರುವ ಪಾಕಿಸ್ತಾನ

ತಾಲಿಬಾನ್ ನಾಯಕರ ಅಸಮರ್ಥ ಆಡಳಿತ, ಅದಕ್ಕಿಂತ ಮೊದಲಿನ ಅರಾಜಕತೆಯಿಂದ ಅಫ್ಘಾನಿಸ್ತಾನದಲ್ಲಿ ಆಹಾರಕ್ಕೂ ತತ್ವಾರ ಎದುರಾಗಿದೆ. ಅದನ್ನು ಮನಗಂಡ ವಿಶ್ವದ ಕೆಲವು ದೇಶಗಳು ಅಫ್ಘಾನಿಸ್ತಾನಕ್ಕೆ ಗೋಧಿ ಸೇರಿದಂತೆ ಹಲವು ಬಗೆಯ ಆಹಾರ ಪದಾರ್ಥ ಕಳಿಸಿತ್ತು.

ಅದೇ ರೀತಿ ಪಾಕಿಸ್ತಾನ ಸಹ ಗೋಧಿಯನ್ನು ಕಳಿಸಿದೆ. ಆದರೆ ಪಾಕಿಸ್ತಾನ ಕಳಿಸಿದ ಗೋಧಿ ತೀರಾ ಕಳಪೆ ಆಗಿದೆ ಅಂತ ತಾಲಿಬಾನ್ ನಾಯಕರು ಆರೋಪಿಸಿದ್ದಾರೆ. ಇದು ತಿನ್ನುವುದಕ್ಕೂ ಸಾಧ್ಯವೇ ಇಲ್ಲ ಅಂತ ಸುದ್ದಿಗೋಷ್ಠಿಯಲ್ಲಿ ಉಗಿದಿದ್ದಾರೆ.

ಭಾರತದ ಗೋಧಿ ಉತ್ತಮವಾಗಿದೆ ಎಂದ ತಾಲಿಬಾನ್

ಇನ್ನು ಕಳೆದ ವಾರವಷ್ಟೇ ಭಾರತ ಕೂಡ ಅಫ್ಘಾನಿಸ್ತಾನಕ್ಕೆ ಬರೋಬ್ಬರಿ 50 ಟ್ರಕ್‌ಗಳಲ್ಲಿ 50,000 ಮೆಟ್ರಿಕ್ ಟನ್ ಗೋಧಿಯನ್ನು ಕಳಿಸಿತ್ತು. ಈ ಗೋಧಿ ಅತ್ಯುತ್ತಮ ಗುಣಮಟ್ಟದ್ದಾಗಿದೆ ಅಂತ ತಾಲಿಬಾನ್ ನಾಯಕರು ಹೇಳಿದ್ದಾರೆ.

ಭಾರತದ ಸಹಾಯಕ್ಕೆ ಅಡ್ಡಗಾಲಾಗಿದ್ದ ಪಾಕಿಸ್ತಾನ

ವಾಸ್ತವವಾಗಿ, ಕಳೆದ ವರ್ಷದ ಅಕ್ಟೋಬರ್ ಆರಂಭದಲ್ಲಿ ಭಾರತವು ಈ ಗೋಧಿಯ ರವಾನೆಯನ್ನು ಕಳುಹಿಸಲು ಪ್ರಸ್ತಾಪಿಸಿತ್ತು. ಆದರೆ ಇದನ್ನು ಸಾಗಿಸಲು ಪಾಕಿಸ್ತಾನ ತಕರಾರು ಮಾಡಿತು. ಹೀಗಾಗಿ ಭಾರತ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿತು. ಕಳೆದ ವರ್ಷ ನವೆಂಬರ್ 24 ರಂದು ಪಾಕಿಸ್ತಾನವು ಭಾರತದ ಮನವಿಗೆ ಮೊದಲ ಪ್ರತಿಕ್ರಿಯೆಯನ್ನು ನೀಡಿತ್ತು. ಇದಾದ ಬಳಿಕ ಕಳೆದ ವಾರವಷ್ಟೇ ಭಾರತದಿಂದ ಅಫ್ಘಾನಿಸ್ತಾನಕ್ಕೆ ಗೋಧಿ ರವಾನೆಯಾಗಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್

ತಾಲಿಬಾನ್ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ, ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಅದೇ ಸಮಯದಲ್ಲಿ ಭಾರತದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋವನ್ನು ಅಫ್ಘಾನ್ ಪತ್ರಕರ್ತ ಅಬ್ದುಲ್ಹಾಕ್ ಒಮೆರಿ ಅವರು ಟ್ವೀಟ್ ಮಾಡಿದ್ದಾರೆ. ಇದೀಗ ಸಾಕಷ್ಟು ವೈರಲ್ ಆಗಿದೆ.

ಆಫ್ಘಾನ್ ಜನರಿಗೆ ನಿಮ್ಮ ನಿರಂತರ ಬೆಂಬಲಕ್ಕಾಗಿ ಭಾರತಕ್ಕೆ ಧನ್ಯವಾದಗಳು. ನಮ್ಮ ಸಾರ್ವಜನಿಕ ಮತ್ತು ಸಾರ್ವಜನಿಕ ಸ್ನೇಹಿ ಸಂಬಂಧಗಳು ಶಾಶ್ವತವಾಗಿರುತ್ತವೆ. ಜೈ ಹಿಂದ್” ಎಂದು ಹಮ್ದುಲ್ಲಾ ಅರ್ಬಾಬ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ಅಪ್ಘಾನಿಸ್ತಾನಕ್ಕೆ ವಿವಿಧೆಡೆಯಿಂದ ಸಹಾಯ

ಅಫ್ಘಾನಿಸ್ತಾನದಲ್ಲಿ ಹಲವಾರು ಸರಕುಗಳನ್ನು ತಲುಪಿಸಿದೆ ಮತ್ತು ಅದನ್ನು ಜಲಾಲಾಬಾದ್‌ನಲ್ಲಿರುವ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮಕ್ಕೆ (WFP) ಹಸ್ತಾಂತರಿಸಲಾಯಿತು.

ಇದರಂತೆ ಅಫ್ಘಾನಿಸ್ತಾನಕ್ಕೆ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದ್ದು, ಅದರಂತೆ 50,000 ಟನ್ ಗೋಧಿಯನ್ನು ನೀಡಲಾಗಿದೆ. ಇದೀಗ ಭಾರತದ ಗೋಧಿ ಉತ್ತಮವಾಗಿದೆ ಎಂದಿರುವ ತಾಲಿಬಾನ್ ನಾಯಕರು, ಭಾರತದ ಸಹಾಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top