ಕರಾವಳಿ ಸಮಾಚಾರದ ವರದಿಗೆ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ: ಬಸ್‌ಸ್ಟ್ಯಾಂಡ್‌ ನಂದಿನಿ ಪಾರ್ಲರ್‌ ಗೂಡಂಗಡಿ ಸ್ಥಳಾಂತರ ಮಾಡುವ ಭರವಸೆ

ಭಟ್ಕಳ: ರಾತ್ರಿ ಬೆಳಗಾಗುವುದರೊಳಗೆ ಭಟ್ಕಳ ಬಸ್‌ಸ್ಟಾಂಡ್ ನಲ್ಲಿ ಗೂಡ ಅಂಗಡಿ ನಿಲಿಸಿ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಹೊಸದಾಗಿ ಇಟ್ಟಿರುವ ನಂದಿನಿ ಪಾರ್ಲರ್ ಗೂಡಾ ಅಂಗಡಿಯನ್ನು ಶಾಶ್ವತವಾಗಿ ಸ್ಥಳಾಂತರ ಮಾಡಿಕೊಡುವಂತೆ ಬಸ್‌ ಸ್ಟಾಂಡ್ ಅಂಗಡಿಕಾರರು ಪ್ರತಿಭಟನೆ ನಡೆಸಿ  ಕೆ.ಎಸ್‌.ಆರ್.ಟಿಸಿ ಅಧಿಕಾರಿಗಳಿಗೆ ಮಾಧ್ಯಮ ಮೂಲಕ ಮನವಿ ಮಾಡಿದ್ದರು. ಈ ಬಗ್ಗೆ ನಮ್ಮ ಕರಾವಳಿ ಸಮಾಚಾರದ ವರದಿ ಮಾಡಿತ್ತು ಈ ವರದಿಯ ಬಳಿಕ ನಿನ್ನೆ ಗುರುವಾರ ಸಾರಿಗೆ ಇಲಾಖೆಯ ಡಿ.ಸಿ ರಾಜ್‌ಕುಮಾರ್‌ ತಾಲೂಕಿನ ಬಸ್‌ಸ್ಟಾಂಡ್ ಗೆ ಬಂದು ಪರಿಸಿಲಿಸಿ ಸೂಕ್ತ ಪರಿಹಾರ ಒದಗಿಸಿವುದ್ದಾಗಿ ಆಶ್ವಾಸನೆ ನೀಡಿದ್ದಾರೆ.

ಈ ಬಗ್ಗೆ ಬಸ್‌ ಸ್ಟಾಂಡ್ ಅಂಗಡಿ ಮಾಲಿಕರಲ್ಲೊಬ್ಬರಾದ ರಾಘವೇಂದ್ರ ನಾಯ್ಕ ಮಾತನಾಡಿ ವರದಿಗೆ ಸೂಕ್ತ ಸ್ವಂದನೆ ತೊರೆತ್ತಿದೆ ಹಾಗೂ ಖುಷಿ ತಂದಿದ್ದೆ ವರದಿ ಮಾಡಿದ ಎಲ್ಲಾ ಮಾಧ್ಯಮ ಮಿತ್ರರಿಗೂ ಧನ್ಯವಾದ ತಿಳಿಸಿದ್ದರು.

ಒಟ್ಟಾರೆ ಭಟ್ಕಳ ತಾಲೂಕ ಬಸ್‌ಸ್ಟ್ಯಾಂಡ ಅಂಗಡಿಕಾರರು ಮಾಡಿದ ಪ್ರತಿಭಟನೆಗೆ ಫಲ ದೊರೆತಿರುವುದಂತು ಸತ್ಯ ಆದರೆ ಈಗ ಸ್ತಳಕ್ಕೆ ಬೇಟಿಕೊಟ್ಟ ಕೆ ಎಸ್‌ ಆರ್‌ ಟಿ ಸಿ ಡಿ ಸಿ ಕೊಟ್ಟ ಆಶ್ವಾಸನೆ ಎಷ್ಟರಮಟ್ಟಿಗೆ ನೇರವೇರಲಿದೆ ಅದು ಸಾರ್ವಜನಿಕರಿಗೆ ಹಾಗು ಅಂಗಡಿಕಾರರಿಗೆ ತೃಪ್ತಿ ನೀಡಲಿದೆಯಾ ಎನ್ನುವುದು ಕಾದು ನೋಡಬೇಕಾಗಿದೆ

ReplyForward
WhatsApp
Facebook
Telegram
error: Content is protected !!
Scroll to Top