ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮಗು ಪ್ರಾಣ ಉಳಿಸಿದ ವೈದ್ಯರಿಗೆ ಸನ್ಮಾನ..!

ಕಾರವಾರ:- ತುಂಬು ಗರ್ಭಿಣಿಯೊಬ್ಬರು ಹೈ ಬಿಪಿ ಹಾಗೂ ಶುಗರ್ ನಿಂದ ಬಳಲುತಿದ್ದು, ತಾಯಿ ಮಗು ಉಳಿಯುವುದೇ ಅಪಾಯದಲ್ಲಿ ಇದ್ದಿದ್ದರಿಂದ ಕಾರವಾರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ನಿರಾಕರಿಸಿ ಮಂಗಳೂರಿಗೆ ತೆರಳುವಂತೆ ಹೇಳಿ ಕೈಚಲ್ಲಿದ್ದರು. ಆದರೇ ಕಾರವಾರದ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ತಾಯಿ ಮಗುವನ್ನು ರಕ್ಷಿಸಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮಗುವನ್ನು ಉಳಿಸುವುದರಲ್ಲಿ ಸಫಲವಾಗಿದ್ದು ಇಡೀ ಕುಟುಂಬ ವೈದ್ಯರು ಹಾಗೂ ಸಿಬ್ಬಂದಿಗೆ ಸನ್ಮಾನ ಮಾಡುವ ಮೂಲಕ ಇಂದು ಕೃತಜ್ಞತೆ ಸಲ್ಲಿಸಿದರು.

ಘಟನೆ ಏನು?
ಕಾರವಾರ ಮೂಲದ ಜ್ಯೋತಿ ಬಾನವಾಳಿಕರ್ ರವರು ಈ ಹಿಂದೆ ಗರ್ಭಿಣಿಯಾಗಿದ್ದಾಗ ಷುಗರ್ ,ಬಿಪಿಯಿಂದಾಗಿ ಗರ್ಭದಲ್ಲಿ ಮಗು ತೀರಿಹೋಗಿತ್ತು. ನಂತರ ಎರಡನೇ ಬಾರಿ ಗರ್ಭ ಧರಿಸಿದ್ದಾಗ ಷುಗರ್ ,ಬಿಪಿ ಹೆಚ್ಚಿದ್ದರಿಂದ ಎಂಟು ತಿಂಗಳಲ್ಲೇ ಹೆರಿಗೆ ನೋವು ಕಾಣಿಸಿದೆ.ಈ ವೇಳೆ ಕಾರವಾರದ ಖಾಸಗಿ ಆಸ್ಪತ್ರೆಗೆ ತೆರಳಿದ್ದ ಅವರಿಗೆ ಷುಗರ್ ,ಬಿಪಿ ಹೆಚ್ಚಿದ್ದರಿಂದ ಹೆರಿಗೆ ಮಾಡಿಸಲು ಸಾಧ್ಯವಿಲ್ಲ, ಮಣಿಪಾಲ್ ಅಥವಾ ಮಂಗಳೂರಿಗೆ ತೆರಳುವಂತೆ ತಿಳಿಸಿ ಕೈ ಚಲ್ಲಿದ್ದರು. ಈಕೆಯ ಕುಟುಂಬದವರು ಅಸ್ಟೊಂದು ಸ್ಥಿತಿವಙತರಾಗಿರದ ಕಾರಣ ಹಾಗೂ ತಕ್ಷಣದಲ್ಲಿ ಮಂಗಳೂರಿಗೆ ತೆರಳಲು ಸಾಧ್ಯವಾಗದ ಕಾರಣ ಸರ್ಕಾರಿ ಆಸ್ಪತ್ರೆಗೆ ಕರೆತಂದು ಸಹಾಯ ಬೇಡಿದ್ದರು‌ . ಈ ವೇಳೆ ಈಕೆಯ ಮೆಡಿಕಲ್ ರಿಪೋರ್ಟ ನೋಡಿದ ವೈದ್ಯರ ತಂಡ ತುಂಬಾ ಸೂಕ್ಷವಾಗಿರುವ ಕೇಸ್ ಇದಾಗಿದ್ದು ರಿಸ್ಕ್ ತೆಗೆದುಕೊಂಡು ಹೆರಿಗೆ ಮಾಡಿಸಿತು. ವೈದ್ಯ ತಂಡದ ಮುತುವರ್ಜಿಯಿಂದಾಗಿ ತಾಯಿ,ಮಗು ಯಾವುದೇ ಅಪಾಯವಿಲ್ಲದೇ ಬದುಕುಳಿದರೂ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಈ ಕಾರಣದಿಂದ ಮಗುವನ್ನು ಎನ್.ಐ.ಸಿ.ಯುನಲ್ಲಿ ಇಟ್ಟು ಮುತುವರ್ಜಿಯಿಂದ ಬದುಕುಳಿಯುಂತೆ ಮಾಡಿದರು.

ಕ್ಲಿಷ್ಟಕರ ಸನ್ನಿವೇಶದಲ್ಲಿ ತಾಯಿ,ಮಗುವನ್ನು ರಕ್ಷಿಸಿದ
ಡಿಸ್ಟಿಕ್ ಸರ್ಜನ್ ಶಿವಾನಂದ ಕುಡ್ತರಕರ್, ಹೆರಿಗೆ ತಜ್ಞರಾದ ಡಾ.ರಾಜಕುಮಾರ್ ,ಡಾ.ಅಂಮೃತ ಪೆಡಿಯಾಟ್ರಿಕ್ ವೈದ್ಯರಾದ ಡಾ.ಪವನ್,ಡಾ.ತೇಜಸ್ವಿನಿ ,ಡಾ.ಸ್ಪಂದನಾ ಹಾಗೂ ವೈದ್ಯಕೀಯ ಸಿಬ್ಬಂದಿಗಳಾದ ಡೈನಾ.ಶ್ರೀಧರ್
ಲಕ್ಷ್ಮ,ಕಲಾ,ರಾಕಿ ತೃಪ್ತಿ ರವರಿಗೆ ಈ ಕುಟುಂಬ ಸನ್ಮಾಸಿತು. ಈ ಸಂದರ್ಭದಲ್ಲಿ ಜನಶಕ್ತಿ ವೇದಿಕೆ ಅಧ್ಯಕ್ಷರಾದ ಮಾಧವ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top