ಪಶ್ಚಿಮಘಟ್ಟ ಕೂಗು ಪತ್ರಿಕೆಯ ಸಂಪಾದಕ  ಪತ್ರಕರ್ತ ಕೃಷ್ಣ ಬಳೆಗಾರ ಮೇಲೆ ದೌರ್ಜನ್ಯ ಹಲ್ಲೆ ಮತ್ತು ಜೀವ ಬೆದರಿಕೆ

 
ಶಿರಸಿ- ರಿಯಾಜ್ ಹಾಗೂ ರಜಾಕ್ ಎನ್ನುವ ವ್ಯಕ್ತಿಗಳಿಂದ ಸಿರ್ಸಿಯ ಪತ್ರಕರ್ತ ಕೃಷ್ಣ ಬಳೆಗಾರ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆಯನ್ನು ಸಾಮಾಜಿಕ ಹೋರಾಟಗಾರ ಮತ್ತು ಭಟ್ಕಳದ ಪತ್ರಕರ್ತ ಕುಮಾರ ನಾಯ್ಕ ತೀವ್ರವಾಗಿ  ಖಂಡಿಸಿದ್ದಾರೆ ಸಂಬಂಧಪಟ್ಟ  ಶಿರಸಿ ಪೊಲೀಸ್ ಇಲಾಖೆ ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.      

ಶಿರಸಿ ನಗರದ ನಗರಸಭೆ ಡಂಪಿಂಗ್ ಯಾರ್ಡ್ ಬಳಿ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿದೆ ಆ ಮಣ್ಣಿನ ಧೂಳಿನಿಂದ ತೊಂದರೆಯಾಗುತ್ತಿದೆ ಎನ್ನುವ ಸಾರ್ವಜನಿಕರ ಮಾಹಿತಿಯ ಹಿನ್ನೆಲೆಯಲ್ಲಿ ವರದಿ ಮಾಡಲು ಹೋಗಿದ್ದ ಪಶ್ಚಿಮಘಟ್ಟ ಕೂಗು ಪತ್ರಿಕೆಯ ಸಂಪಾದಕರಾದ ಪತ್ರಕರ್ತ ಕೃಷ್ಣ ಬೆಳೆಗಾರರ ಮೊಬೈಲ್ ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಂಧನದಲ್ಲಿ ಇಟ್ಟುಕೊಂಡು ಬಿಡುಗಡೆ ಮಾಡಿದ ಘಟನೆ ಇಂದು ನಡೆದಿದೆ.     ಈ ಕುರಿತು ಮದ್ಯಮದವರ  ಜೊತೆ ಮಾತನಾಡಿದ ಕೃಷ್ಣ ಬೆಳೆಗಾರರು ತಮಗೆ ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ವರದಿ ಮಾಡಲು ತಾವು ಸ್ಥಳಕ್ಕೆ ಹೋಗಿದ್ದು ಈ ಸಂದರ್ಭದಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ರಿಯಾಜ್ ಹಾಗೂ ರಜಾಕ್ ಎನ್ನುವವರು ತಮ್ಮ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ವಿಡಿಯೋ ಡಿಲೀಟ್ ಮಾಡಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಈ ಕುರಿತು ತಾವು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು  ನೀಡುತ್ತಿರುವುದಾಗಿ ತಿಳಿಸಿದ್ದಾರೆ.ಶಿರಸಿ ಭಾಗದಲ್ಲಿ ಅಕ್ರಮ ಅವ್ಯವಹಾರಗಳು ಹೆಚ್ಚಾಗಿದ್ದು ಪೊಲೀಸ್ ಇಲಾಖೆ ಇಂತಹ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಪತ್ರಕರ್ತರ ಮೇಲೆ ದಾಳಿ ಮಾಡುವಂತಹ ಪ್ರಕರಣದಲ್ಲಿ ಪ್ರತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಕೃಷ್ಣ ಬಳೆಗಾರ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಪತ್ರಕರ್ತ ಆಗ್ರಹಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top