ಭಟ್ಕಳ ರಂಜನ್‌ ಇಂಡೆನ್‌ ಗ್ಯಾಸ್‌ ಏಜನ್ಸಿಯ ವತಿಯಿಂದ ಶಿವರಾತ್ರಿ ಪಾದಯಾತ್ರೆ ಸಂಪನ್ನ

ಪಾದಯಾತ್ರೆಯಲ್ಲಿ ಭಾಗವಹಿಸಿದ ಭಕ್ತಾಧಿಗಳಿಗೆ ತುಂಬು ಹೃದಯದ ಧನ್ಯವಾದಗಳು‌ ****************** ರಂಜನ್‌ ಇಂಡೆನ್‌ ಗ್ಯಾಸ ಮಾಲಕಿ ಶಿವಾನಿ ಶಾಂತರಾಮ್ ಹೇಳಿಕೆ

ಭಟ್ಕಳ ತಾಲೂಕಿನ ಪ್ರತಿಷ್ಟೀತ ರಂಜನ್‌ ಇಂಡೆನ್‌ ಗ್ಯಾಸ್‌ ಏಜೆನ್ಸಿಯ ವತಿಯಿಂದ ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಭಟ್ಕಳ ಚೋಳೆಶ್ವರ ದೇವಸ್ಥಾನದಿಂದ ಪುರಾಣ ಪ್ರಸಿದ್ದ ಸ್ಥಳವಾದ ಮುರ್ಡೆಶ್ವರ ಶಿವನ ಸನ್ನಿದಿಗೆ ಸಾವಿರಾರು ಭಕ್ತರನ್ನೊಳಗೊಂಡಂತೆ ಪಾದಯಾತ್ರೆಯನ್ನು ನಡೆಸಿ ಪೂಜಾ ಕೈಂಕರ್ಯವನ್ನು ನಡೆಸಲಾಯಿತು

ತಾಲೂಕಿನ ರಂಜನ್‌ ಇಂಡೆನ್‌ ಗ್ಯಾಸ್‌ ಏಜೇನ್ಸಿಯು ಪ್ರತಿ ವರ್ಷ ಶಿವರಾತ್ರಿಯಂದು ಮುರ್ಡೆಶ್ವಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುತ್ತದೆ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಪಾದಯಾತ್ರೆಯನ್ನು ನಡೆಸಲಾಯಿತು ಪಾದಯಾತ್ರೆಯು ತಾಲೂಕಿನ ಚೋಳೆಶ್ವರ ದೇವಸ್ಥಾನದಿಂದ ಅಂದಾಜು ೩.೪೫ ರಿಂದ ಪಾರಂಬಿಸಿ ಮುರ್ಡೆಶ್ವರಕ್ಕೆ 6.45 ಕ್ಕೆ ತಲುಪಿ ಮಹಾ ಶಿವನಿಗೆ ಪೂಜೆಯನ್ನು ಸಲ್ಲಿಸಲಾಯಿತು ನೆರೆದ ಭಕ್ತರಿಗೆ ಬೆಳಗಿನ ಉಪಾಹಾರವನ್ನು ಒದಗಿಸಲಾಗಿತ್ತು

ಪಾದಯಾತ್ರೆಯ ಸಂದರ್ಬದಲ್ಲಿ ಶಿರಾಲಿಯಲ್ಲಿ ಭಟ್ಕಳ ಕ್ರೀಯಾಶೀಲ ಗೆಳೆಯರ ಬಳಗದ ವತಿಯಿಂದ ಪಾದಯಾತ್ರಿಗಳಿಗೆ ಪಾನಿಯ ವ್ಯವಸ್ಥೆಯನ್ನು ಒದಗಿಸಲಾಗಿತ್ತು , ಈ ಸಂದರ್ಬದಲ್ಲಿ ಉದ್ಯಮಿ ಶಿವಾನಿ ಶಾಂತರಾಮ್‌ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ನಮ್ಮ ರಂಜನ್‌ ಇಂಡೆನ್‌ ಗ್ಯಾಸ್‌ ಏಜೇನ್ಸಿಯ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಈ ಬಾರಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿರುತ್ತಾರೆ ಪಾದಯಾತ್ರೆಯಲ್ಲಿ ಪೋಲಿಸ್‌ ಇಲಾಖೆ ಆರೋಗ್ಯ ಇಲಾಖೆ ಕ್ರಿಯಾಶೀಲ ಗೆಳೆಯರ ಬಳಗ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಸಹಕಾರ ನೀಡಿದ್ದಾರೆ ಸಹಕರಿಸಿದ ಎಲ್ಲರಿಗೂ ನಾವು ಧನ್ಯವಾದವನ್ನು ಅರ್ಪಿಸುತ್ತೆವೆ ಎಂದು ಹೇಳಿದರು .

ಪಾದಯಾತ್ರೆಗೆ ತಾಲೂಕ ಡಿ ವೈ ಎಸ್‌ ಪಿ ಬೆಳ್ಳಿಯ ಅವರ ನಾಯಕತ್ವದಲ್ಲಿ ಬೀಗಿ ಪೋಲಿಸ್‌ ಬಂದೋಬಸ್ತ ನಿಡಲಾಗಿತ್ತು

ಈ ಸಂದರ್ಬದಲ್ಲಿ ಉದ್ಯಮಿ ಶಾಂತರಾಮ್‌ ,ಗುರು ಕ್ರಪಾಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಕುಮಾರ್‌ ನಾಯ್ಕ, ಕರ್ನಾಟಕ ಜರ್ನಲಿಷ್ಟ ಅಸೋಶಿಯೇಷನ್‌ ಜಿಲ್ಲಾ ಅಧ್ಯಕ್ಷ ಮೋಹನ್‌ ನಾಯ್ಕ , ವಿವಿದ ಸಂಘಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top