ಭಟ್ಕಳ: ತಾಲೂಕಿನ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇದ್ದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ಹುದ್ದೆಗೆ ಪ್ರಭಾರೆಯಾಗಿ ರಾಮು ಅರ್ಗೆಕರ ಅಧಿಕಾರ ವಹಿಸಿಕೊಂಡಿದ್ದಾರೆ.
ಅಂಕೋಲಾದ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಹಲವಾರು ವರ್ಷಗಳಿಂದ ಅಲ್ಲಿನ ಜನರ ಪ್ರೀತಿಯನ್ನು ಗಳಿಸಿದವರಾಗಿದ್ದಾರೆ. ಮೂಲತ ಅಂಕೋಲಾದ ಹಾರವಾಡ ಹಳ್ಳಿಯಿಂದ ಬಂದ ಅವರು ಸಾರ್ವಜನಿಕರೊಂದಿಗೆ ಬೆರೆಯುವುದ ರಿಂದ ಅವರನ್ನು ಅರ್ಗೆಕರ ಇಂಜಿನೀಯರ್ ಎಂದು ಕರೆಯುತ್ತಾರೆ.
ಭಟ್ಕಳಕ್ಕೆ ಅವರ ಸೇವೆ ಒದಗಿಸುವಂತೆ ಶಾಸಕರಾದ ಸುನೀಲ ಅವರ ಶಿಫಾರಸ್ಸಿನಂತೆ ಅವರನ ಧಾರವಾಡ ವೃತ್ತದ ಅಧೀಕ್ಷಕ ಅಭಿಯಂತರರು ಅವರನ್ನು ಇಲ್ಲಿಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ.

ಭಟ್ಕಳ: ಲೋಕೋಪಯೋಗಿ ಇಲಾಖೆ ಸಹಾಯಕರಾಗಿ ರಾಮು ಅರ್ಗೆಕರ ಅಧಿಕಾರ ಸ್ವೀಕಾರ.
WhatsApp
Facebook
Telegram