ಪುನೀತ್ ರಾಜ್ ಕುಮಾರ್ ಕೊನೆಯ ಜೇಮ್ಸ್ ಚಿತ್ರದ ಹೊಸ ಫೋಟೋಸ್..!

ಕನ್ನಡ ರತ್ನ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ಸಿನಿಮಾ ತಂಡದಿಂದ ಎರಡು ಹೊಸ ಸುದ್ದಿಗಳು ಹೊರ ಬಂದಿವೆ. ಅಪ್ಪು ಹುಟ್ಟಿದ ದಿನದಂದೇ ಈ ಸಿನಿಮಾ ರಿಲೀಸ್ ಪಕ್ಕಾ ಎಂದು ಘೋಷಣೆ ಮಾಡಿದೆ. ಅದಕ್ಕೂ ಮುನ್ನ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಜೇಮ್ಸ್ ಸಿನಿಮಾದ ಕುರಿತಾಗಿ ಒಂದೆರಡು ಫೋಟೋಗಳ ಹೊರತಾಗಿ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಂಡಿರಲಿಲ್ಲ. ಇದೀಗ ಪುನೀತ್ ರಾಜ್ ಕುಮಾರ್ ಅವರ ವಿವಿಧ ಗೆಟಪ್ ಗಳ ಫೋಟೋಗಳನ್ನು ರಿಲೀಸ್ ಮಾಡಿದೆ. ಆ ಫೋಟೋದಲ್ಲಿ ಪುನೀತ್ ರಾಜ್ ಕುಮಾರ್ ಸೈನಿಕ ಉಡುಪಿನಲ್ಲಿ ಮತ್ತು ಹಾಡುಗಳ ಚಿತ್ರೀಕರಣದ ಫೋಟೋ ಮತ್ತು ಇತರ ಸನ್ನಿವೇಶದ ಭಾವಚಿತ್ರಗಳು ಸದ್ಯ ಅಭಿಮಾನಿಗಳಿಗೆ ಲಭ್ಯವಾಗಿವೆ.

ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಜತೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದರಿಂದ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೂವರು ಸಹೋದರರನ್ನು ನೋಡುವ ಭಾಗ್ಯ ನೋಡುಗರಿಗೆ ಸಿಕ್ಕಿದೆ. ಇದು ಪುನೀತ್ ಅವರ ಡ್ರೀಮ್ ಕೂಡ ಆಗಿತ್ತು. ಈ ಸಿನಿಮಾದ ಮೂಲಕ ಈಡೇರಿದ್ದರಿಂದ ಸಿನಿಮಾ ಮತ್ತಷ್ಟು ಕುತೂಹಲ ಮೂಡಿಸಿದೆ.

ನಿರ್ದೇಶ ಚೇತನ್ ಕುಮಾರ್ ಜೇಮ್ಸ್ ಸಿನಿಮಾವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರಂತೆ. ಇದೇ ಮೊದಲ ಬಾರಿಗೆ ಪುನೀತ್ ಅವರು ಅಂಥದ್ದೊಂದು ಪಾತ್ರ ಮಾಡಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

WhatsApp
Facebook
Telegram
error: Content is protected !!
Scroll to Top