ನಾವೆಲ್ಲರೂ ಸುರಕ್ಷಿತವಾಗಿದ್ದೇವೆ: ಉಕ್ರೇನ್‍ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳು..‌!

ವಿದೇಶ:ನಾವು ಉಕ್ರೇನ್‍ನಲ್ಲಿ ಇದ್ದೇವೆ. ಇಲ್ಲಿ ಭಯ ಇದ್ದರೂ, ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. ಇಲ್ಲಿ ಊಟ ಮತ್ತು ನೀರಿಗೆ ಜನರ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ದಿನಸಿ ಅಂಗಡಿ ಮುಂದೆ ತುಂಬಾ ಜನರು ನಿಂತಿದ್ದಾರೆ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.

ಎಲ್ಲರೂ ಸುರಕ್ಷಿತವಾಗಿದ್ದೇವೆ. ನಾವು ಮಾರುಕಟ್ಟೆ ಮುಂದೆ ಇದ್ದೇವೆ. ಇಲ್ಲಿ ತುಂಬಾ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಸಾಲಾಗಿ ನಿಂತಿದ್ದಾರೆ. ಅಲ್ಲದೆ ನೀರಿಗೆ ಇಲ್ಲಿ ತುಂಬಾ ಸಮಸ್ಯೆಯಾಗಿತ್ತು ಎಂದು ತಿಳಿಸಿದರು. 

ನಾವು ಇರುವ ಜಾಗದಲ್ಲಿ 200ಕ್ಕೂ ಹೆಚ್ಚು ಕರ್ನಾಟಕದವರು ಇದ್ದಾರೆ. ಬೇರೆ ಕಡೆಯೂ ತುಂಬಾ ಜನರಿದ್ದಾರೆ. ಇಲ್ಲಿರುವ ಹಲವು ವಿದ್ಯಾರ್ಥಿಗಳು ಮೆಡಿಕಲ್ ಓದುತ್ತಿದ್ದಾರೆ. ಒಂದು ವಾರದಿಂದಲೂ ಇಲ್ಲಿಂದ ಹೋಗಿ ಎಂದು ತಿಳಿಸಲಾಗಿತ್ತು. ಸೂಚನೆ ಕೊಟ್ಟ ಕೆಲವು ದಿನಗಳಲ್ಲಿ ಹಲವು ಮಂದಿ ತಮ್ಮ ದೇಶಕ್ಕೆ ಹೋಗಿದ್ದಾರೆ. ಆದರೆ ಈ ವಾರ ಹೋಗಬೇಕು ಎಂದುಕೊಂಡವರು ಇಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು.

ವಿಮಾನದ ಟಿಕೆಟ್ ಬುಕ್ ಮಾಡಿಕೊಂಡಿದ್ದು, ಈಗ ರದ್ದಾಗಿದೆ. ಕಳೆದ ವಾರ ಹೇಳಿದ್ರಿಂದ ಎಷ್ಟೋ ಜನರಿಗೆ ಇವತ್ತು ಟಿಕೆಟ್ ಸಿಕ್ಕಿತ್ತು. ಕಳೆದ ವಾರ ಟಿಕೆಟ್ ಸಿಕ್ಕಿರಲಿಲ್ಲ. ಅಲ್ಲದೆ ದುಡ್ಡು ಸಹ ಹೆಚ್ಚಿತ್ತು ಎಂದು ತಿಳಿಸಿದರು.

. ಪ್ರಸ್ತುತ ನಾವು ಇರುವ ಜಾಗದಲ್ಲಿ ಯಾವುದೇ ರೀತಿಯ ತೊಂದರೆ ಆಗಿಲ್ಲ. ದಾಳಿಯು ಗಡಿ ಪ್ರದೇಶದಲ್ಲಿ ನಡೆಯುತ್ತಿದೆ. ನಮಗೂ ದಾಳಿ ನಡೆಯುತ್ತಿರುವ ಜಾಗಕ್ಕೂ 300 ಕಿ.ಮೀ ದೂರ ಇದೆ ಎಂದರು.

ನಾವಿರುವ ಪ್ರದೇಶದ ಗಡಿ ರಷ್ಯಾ ಗಡಿಗೆ ಹತ್ತಿರವಿದೆ. ಇದು ಉತ್ತರದಲ್ಲಿ ಬರುತ್ತೆ. ನಮ್ಮ ಸ್ನೇಹಿತರೆಲ್ಲ ಒಂದೇ ಕಡೆ ಇದ್ದೇವೆ. ಇಲ್ಲಿನ ಸರ್ಕಾರ ಹೆಚ್ಚು ಹೊರಗಡೆ ಓಡಾಡಬೇಡಿ. ನಿಮಗೆ ಬೇಕಿರುವ ವಸ್ತುಗಳನ್ನು ತೆಗೆದುಕೊಳ್ಳಿ ಎಂದು ತಿಳಿಸಿದೆ ಎಂದು ವಿವರಿಸಿದರು.

ನಮ್ಮ ಸ್ನೇಹಿತರ ಜೊತೆ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿ ಇದ್ದೇವೆ. ಗುಂಪಿನಲ್ಲಿ ಇರಬೇಕು ಎಂದು ಹೇಳುತ್ತಿಲ್ಲ. ಬದಲಿಗೆ ಎಲ್ಲೇ ಇದ್ರೂ ಸುರಕ್ಷಿತವಾಗಿ ಇರಬೇಕೆಂದು ಹೇಳುತ್ತಿದ್ದಾರೆ. ಹೊರಗೆ ಹೆಚ್ಚು ಬರಬಾರದು ಎಂದು ಹೇಳಿದ್ದಾರೆ. ಭಯಪಡಬೇಡಿ ಎಂದು ಹೇಳಿದ್ದಾರೆ ಎಂದರು.

ಇಲ್ಲಿ ಇರುವ ಎಷ್ಟೋ ಪ್ರಜೆಗಳು ಬೇರೆ ಕಡೆ ಹೋಗಲು ಸಿದ್ಧರಾಗಿ ನಿಂತಿದ್ದಾರೆ. ಅಲ್ಲದೆ ತಮ್ಮ ಬಟ್ಟೆಗಳನ್ನು ತುಂಬಿಕೊಂಡು ಬಂದು ಬೇರೆ ಕಡೆ ಹೋಗಲು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾರೆ ಎಂದು ಹೇಳಿದರು.

WhatsApp
Facebook
Telegram
error: Content is protected !!
Scroll to Top