ಪ್ರೇಮ್ ಹಾಗೂ ರಾಣಾಗೆ ಬಹುಪರಾಕ್ ಎಂದ ಪ್ರೇಕ್ಷಕರು ;ರಿಲೀಸ್ ಆಯ್ತು ‘ಏಕ್ ಲವ್ ಯಾ’ ಸಿನಿಮಾ.

ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ‘ಏಕ್ ಲವ್ ಯಾ’. ‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾ ಇಂದು ರಿಲೀಸ್ ಆಗಿದೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ಚೊಚ್ಚಲ ಬಾರಿಗೆ ನಾಯಕನಾಗಿ ಆಭಿನಯಿಸಿರುವ ‘ಏಕ್ ಲವ್ ಯಾ’ ಸಿನಿಮಾ ತೆರೆಗೆ ಬಂದಿದೆ. ‘ಏಕ್ ಲವ್ ಯಾ’ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಮುಕ್ತಾಯಗೊಂಡಿದೆ. ‘ಏಕ್ ಲವ್ ಯಾ’ ಸಿನಿಮಾದ ಮೊದಲ ದಿನದ ಮೊದಲ ಶೋವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಚಿತ್ರದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್‌ನಲ್ಲಿ ಹೊರಹಾಕುತ್ತಿದ್ದಾರೆ. ಹಾಗಾದ್ರೆ, ಪ್ರೇಕ್ಷಕರು ಕಂಡಂತೆ ‘ಏಕ್ ಲವ್ ಯಾ’ ಹೇಗಿದೆ..? ನೀವೇ ನೋಡಿ….

ಫಸ್ಟ್ ಹಾಫ್ ಚೆನ್ನಾಗಿದೆ
‘’’ಏಕ್ ಲವ್ ಯಾ’ ಚಿತ್ರದ ಫಸ್ಟ್ ಹಾಫ್ ಚೆನ್ನಾಗಿದೆ. ಪ್ರೇಮ್ ಅವರ ಮಾಮೂಲಿ ಶೈಲಿಗೆ ಹೋಲಿಸಿದರೆ ಇದು ಕೊಂಚ ವಿಭಿನ್ನ. ಆದರೆ, ಸಿನಿಮಾ ಖಂಡಿತ ಫ್ರೆಶ್ ಆಗಿದೆ. ಕಾಮಿಡಿ, ಹಾಡುಗಳು ಮತ್ತು ಬಿಜಿಎಂ ಚಿತ್ರದ ಹೈಲೈಟ್‌ಗಳು. ರಾಣಾ ಹೊಸಬರು ಅಂತ ಅನಿಸುವುದೇ ಇಲ್ಲ’’

ಹಿಟ್ ಸಿನಿಮಾ
‘’’ಏಕ್ ಲವ್ ಯಾ’ ಹಿಟ್ ಸಿನಿಮಾ. ದಶಕದ ನಂತರ ಪ್ರೇಮ್ ಹಿಟ್ ಕೊಟ್ಟಿದ್ದಾರೆ’’

ರಾಣಾ ಅಭಿನಯ ಚೆನ್ನಾಗಿದೆ
‘’ಏಕ್ ಲವ್ ಯಾ’ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರದ ಮೂಲಕ ಹೊಸ ಪ್ರೇಮ್ ನಮಗೆ ಸಿಕ್ಕಿದ್ದಾರೆ. ಉದಯೋನ್ಮುಖ ನಟನಾಗಿ ರಾಣಾ ಉತ್ತಮ ಅಭಿನಯ ನೀಡಿದ್ದಾರೆ. ಶಾಲೆಯ ಸೀನ್‌ಗಳು ಹಾಗೂ ಅರ್ಜುನ್ ಜನ್ಯ ಅವರ ಬಿಜಿಎಂ ತುಂಬಾ ಇಷ್ಟ ಆಯ್ತು. ಒಟ್ಟಾರೆಯಾಗಿ ಉತ್ತಮ ಸಿನಿಮಾ’’ ಎಂದು ಅರುಣ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಸೂಪರ್
‘’ಏಕ್ ಲವ್ ಯಾ’ ಚಿತ್ರದ ಫಸ್ಟ್ ಹಾಫ್ ಸೂಪರ್ ಆಗಿದೆ. ಸಾಂಗ್ಸ್, ರೀ-ರೆಕಾರ್ಡಿಂಗ್ ಅದ್ಭುತವಾಗಿದೆ. ಕಾಮಿಡಿ ಹಾಗೂ ಎಮೋಷನ್ ಸೀನ್ಸ್ ಚೆನ್ನಾಗಿ ವರ್ಕ್ ಆಗಿದೆ’’ ಎಂದು ಯಶವಂತ್ ರಾವ್ ಎಂಬುವರು ಟ್ವೀಟಿಸಿದ್ದಾರೆ.

ಬ್ಯೂಟಿಫುಲ್ ಲವ್ ಸ್ಟೋರಿ
‘ಏಕ್ ಲವ್ ಯಾ’ ಚಿತ್ರದ ಮೊದಲ ಶೋ ವೀಕ್ಷಿಸಿದೆ. ಸೂಪರ್ ಸಿನಿಮಾ. ಬ್ಯೂಟಿಫುಲ್ ಲವ್ ಸ್ಟೋರಿ ಇದೆ. ಎಲ್ಲಾ ಹಾಡುಗಳು ಹಾಗೂ ಸಂಭಾಷಣೆ ಇಷ್ಟವಾಯಿತು’’ ಎಂದು ಪಲ್ಲವಿ ಎಂಬುವರು ಟ್ವೀಟ್ ಮಾಡಿದ್ದಾರೆ.

‘ಏಕ್ ಲವ್ ಯಾ’ ಹಾಡುಗಳ ವಿಶೇಷ
‘’ಸಾಮಾನ್ಯರು ಕೂಡ ಗುನುಗುವಂತಹ ಸಂಗೀತವೇ ‘ಏಕ್ ಲವ್ ಯಾ’ ಸಿನಿಮಾದ ವಿಶೇಷ. ಎಲ್ಲಾ ಹಾಡುಗಳಲ್ಲಿಯೂ ಮೆಲೋಡಿ ಇದೆ. ಯಾವುದೇ ರೆಫರೆನ್ಸ್‌ ಇಟ್ಟುಕೊಳ್ಳದೆ ಸಂಗೀತ ಸಂಯೋಜನೆ ಮಾಡಿದ್ದೇನೆ. ಜನರೇ ನಮ್ಮ ರೆಫರೆನ್ಸ್‌. ಅವರಿಗೆ ಹಾಡುಗಳು ಇಷ್ಟವಾದರೆ ಸಾಕು. ಲಂಡನ್‌ನ ಸಿಂಫೋನಿ ಆರ್ಕೆಸ್ಟ್ರಾವನ್ನು ಈ ಸಿನಿಮಾಗಾಗಿ ರೆಕಾರ್ಡ್‌ ಮಾಡಿಸಿದ್ದೇವೆ. ಚಿತ್ರಮಂದಿರದಲ್ಲಿ ಇದು ಅದ್ಭುತವಾಗಿ ಕೇಳಿಸುತ್ತದೆ. ಅಲ್ಲಿಯೇ ಹೋಗಿ ಮಾಡಿಸಿರುವುದರಿಂದ ಕ್ವಾಲಿಟಿ ಬಹಳ ಚೆನ್ನಾಗಿ ಇದೆ’’ ಎಂದು ಇತ್ತೀಚೆಗಷ್ಟೇ ಸಂದರ್ಶನಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದರು.

WhatsApp
Facebook
Telegram
error: Content is protected !!
Scroll to Top