ಹೊಸ ಫಿಲ್ಮ್ ಇಷ್ಟವಾಗಿಲ್ಲ ಅಂದ್ರಂತೆ ದೀಪಿಕಾ ಮನೆಯವರು..!

ಬಾಲಿವುಡ್ ಚಿತ್ರ ‘ಗೆಹ್ರೈಯಾನ್’ (Gehraiyaan) ಬಿಡುಗಡೆಗೂ ಮೊದಲೇ ಟ್ರೈಲರ್‌ನಿಂದ ಸಾಕಷ್ಟು ಸುದ್ದಿಯಾಗಿತ್ತು. ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಅಭಿನಯದ ಚಿತ್ರ ಸಾಕಷ್ಟು ಬೋಲ್ಡ್ ಸೀನ್‌ಗಳನ್ನು ಒಳಗೊಂಡಿದ್ದು, ಚಿತ್ರ ಬಿಡುಗಡೆಯ ನಂತರವೂ ಸುದ್ದಿಯಾಗ್ತಿದೆ. ಚಿತ್ರದಲ್ಲಿ ಜೋಡಿಗಳ ಬೋಲ್ಡ್, ಹಾಟ್ ಲುಕ್ (Hotlook), ಬಿಕಿನಿ, ಲಿಪ್ ಲಾಕ್ ಮೊದಲಾದ ದೃಶ್ಯಗಳು ವೈರಲ್ ಆಗಿವೆ. ಈ ಚಿತ್ರ ದೀಪಿಕಾ ಮನೆಯವರಿಗೇ ಇಷ್ಟವಾಗಿಲ್ವಂತೆ. ಇಂತಹ ಕ್ಯಾರೆಕ್ಟರ್‌ಗಳನ್ನು ಒಪ್ಪಿಕೊಳ್ಳಬೇಡ ಎಂದು ಹೇಳಿದ್ದಾರಂತೆ!

ಬಾಲಿವುಡ್‌ (Bollywood)ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ದೀಪಿಕಾ ಪಡುಕೋಣೆ (Deepika Padukone) ಮೊದಲ ಬಾರಿಗೆ ಹಿಂದೆಂದೂ ಕಾಣಿಸಿಕೊಂಡಿರದಷ್ಟು ಬೋಲ್ಡ್ ಅವತಾರದಲ್ಲಿ  ‘ಗೆಹ್ರೈಯಾನ್’ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ಹಲವು ವರ್ಷಗಳ ಬಳಿಕ ದೀಪಿಕಾ ಬಿಕಿನಿಯನ್ನು ಕೂಡಾ ಧರಿಸಿದ್ದಾರೆ. ಅಷ್ಟೇ ಅಲ್ಲ ಸಂಪೂರ್ಣ ಚಿತ್ರದಲ್ಲಿ ಕಡಿಮೆ ಬಟ್ಟೆ ಮಾತ್ರ ಇದೆ. ಲಿಪ್ ಲಾಕ್, ರೋಮ್ಯಾಂಟಿಕ್ ಸೀನ್‌ಗಳು ಹೆಚ್ಚಾಗಿವೆ ಎಂಬ ಟೀಕೆ ಕೇಳಿ ಬರ್ತಿದೆ.

WhatsApp
Facebook
Telegram
error: Content is protected !!
Scroll to Top