ಹರ್ಷ ಕೊಲೆ ಪ್ರಕರಣ ಖಂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಭಟ್ಕಳ ಹಿಂದು ಪರ ಕಾರ್ಯಕರ್ತ ರಿಂದ ಮುಖ್ಯಮಂತ್ರಿಗಳಿಗೆ ಆಗ್ರಹ ಪತ್ರ..!

ಭಟ್ಕಳ :  ಶಿವಮೊಗ್ಗ ಜಿಲ್ಲೆಯ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಅವರನ್ನು ನಡುರಸ್ತೆಯಲ್ಲಿ ದಾರುಣವಾಗಿ ಕೊಲೆಗೈದ ಕೊಲೆಗಡುಕ ಮತಾಂಧರ ಮೇಲೆ ಉತ್ತರಪ್ರದೇಶ ಸರ್ಕಾರದ ಮಾದರಿಯಲ್ಲಿ ನಿರ್ದಾಕ್ಷಿಣ್ಯ ನೇರ ಕ್ರಮಕ್ಕೆ ಆಗ್ರಹಿಸಿ ಭಟ್ಕಳ ಹಿಂದು ಪರ ಸಂಘಟನೆಗಳು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಆಗ್ರಹ ಪತ್ರ ನೀಡಿದರು.

ಈ ಘಟನೆಯ ವಿರುದ್ಧ ನಮ್ಮೆಲ್ಲಾ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ . ಈಗಾಗಲೇ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಹಿಂದೂ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸಂಚನ್ನು ರೂಪಿಸಿ ಕೊಲೆಗೈಯುವ ಮೂಲಕ ವ್ಯವಸ್ಥಿತವಾಗಿ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಷಡ್ಯಂತ್ರವನ್ನು ಪಟ್ಟಭದ್ರ ಮತಾಂಧ ಸಂಘಟನೆಗಳು ಮಾಡುತ್ತ ಬಂದಿದ್ದು ಹಲವು ಪ್ರಕರಣಗಳಲ್ಲಿ ಇದು ಕಾನೂನು ಕ್ರಮ ಸಾಭೀತಾಗಿದ್ದರೂ ಸಹ ಅವರ ಮೇಲೆ ಪರಿಣಾಮಕಾರಿಯಾದ ಶಿಕ್ಷೆಗೆ ಒಳಪಡಿಸಿಲ್ಲಾ.

ಕೇರಳದಲ್ಲಿ ಎಸ್.ಡಿ.ಪಿ.ಐ. ಸಂಘಟನೆಗಳು ಹಿಂದೂ ಕಾರ್ಯಕರ್ತರನ್ನು ಇದೆ ರೀತಿಯ ಕೊಲೆ ಮಾಡುವಲ್ಲಿ ಯಶಸ್ವಿಯಾಗಿದ್ದು ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಂದುವರಿಸಿದ್ದು .ಈಗಾಗಲೇ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಉದ್ದೇಶದಿಂದ ವ್ಯವಸ್ಥಿತವಾಗಿ ಹಲವು ಹಿಂದೂ ಕಾರ್ಯಕರ್ತರನ್ನು ಕರ್ನಾಟಕದ ಹಲವು ಭಾಗಗಳಲ್ಲಿ ದಾರುಣವಾಗಿ ಕೊಲೆಗೈದಿರುವುದು ಗಮನಕ್ಕಿದ್ದರೂ ಸಹ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಅಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇದಿಸುವಲ್ಲಿ ವಿಫಲರಾಗುತ್ತಿರುವುದು ಇನ್ನಷ್ಟು ಹಿಂದೂಕಾರ್ಯಕರ್ತರ ಕಗ್ಗೋಲೆಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ .

ಮತಾಂಧ ಕೊಲೆಗಡುಕರು ಹಾಗೂ ಗೂಂಡಾಗಳಿಂದ ತುಂಬಿದ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಶ್ರೀ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದಾಗಿನಿಂದ ಅವರ ಧಕ್ಷ ಹಾಗೂ ನೇರ ಕ್ರಮದ ಆಡಳಿತದಿಂದಾಗಿ , ವಿರೋಧಿಗಳ ಯಾವುದೇ ಟೀಕೆ ಟಿಪ್ಪಣಿಗಳಿಗೆ ಜಗ್ಗದೇ ಮತಾಂಧ ಕೊಲೆಗಡುಕರು ಹಾಗೂ ಗೂಂಡಾಗಳ ಮೇಲೆ ನಿರ್ದಾಕ್ಷಿಣ್ಯ ನೇರ ಕಠಿಣ ಕ್ರಮ ಕೈಗೊಂಡು ಅವರನ್ನು ಹುಡುಕಿ ಬುಡಸಮೇತ ಕಿತ್ತು ಹಾಕಿದ್ದರ ಪರಿಣಾಮವಾಗಿ ಇಂತಹ ಗೂಂಡಾ ಹಾಗೂ ಮತಾಂಧ ಪ್ರವೃತ್ತಿಯ ಕೊಲೆಗಡುಕರು ಮಣ್ಣಲ್ಲಿ ಮಣ್ಣಾಗಿರುವುದು ಸುಶಾಸನ ಭರಿತ ಆಡಳಿತ ವ್ಯವಸ್ಥೆಯ ದಕ್ಷತೆಯನ್ನು ಎತ್ತಿ ತೋರಿಸುತ್ತದೆ .

ನೇರ ಹಾಗೂ ಕಠಿಣ ಕ್ರಮದ ಪರಿಣಾಮವಾಗಿ ಇಂದಿನ ದಿನಗಳಲ್ಲಿ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ಮತಾಂಧ ಶಕ್ತಿಗಳು ಹಾಗೂ ಕೊಲೆಗಡುಕರು ಹಿಂದೂ ಕಾರ್ಯಕರ್ತರನ್ನು ಹಾಗೂ ಅಮಾಯಕರನ್ನು ಕೊಲೆಗೈಯ್ಯಲು ಸಾವಿರ ಬಾರಿ ಯೋಚಿಸುವಂತೆ ಮಾಡಿದೆ .

ಆದ ಕಾರಣ ಕರ್ನಾಟಕದ ಘನ ಸರ್ಕಾರವು ಸಹ ಉತ್ತರಪ್ರದೇಶದ ಮಾದರಿಯಲ್ಲಿ ದುಷ್ಟ ಜೊತೆಗೆ ಮತಾ೦ಧ ಶಕ್ತಿ ಹಾಗೂ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸ ಬೇಕು ಕೊಲೆಗಡುಕರನ್ನು ನೇರ ಹಾಗೂ ನಿರ್ದಾಕ್ಷಿಣ್ಯ ಕ್ರಮದ ಮೂಲಕ ಅವರನ್ನು ಹತ್ತಿಕ್ಕಿ ಇನ್ನೂ ಮುಂದಿನ ದಿನಗಳಲ್ಲಿ ಯಾವುದೇ ಹಿಂದೂ ಕಾರ್ಯಕರ್ತರ ಹಾಗೂ ಅಮಾಯಕರ ಕಗ್ಗೋಲೆಯಾಗದಂತೆ ನೋಡಿಕೊಳ್ಳುಬೇಕು ಎಂದು ಈ ಸಂಘಟನೆಗಳ ಮನವಿ ಮಾಡಿದ್ದರು.

ಒಂದೊಮ್ಮೆ ಈ ಮೇಲಿನ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹಿಂದೂಪರ ಕಾರ್ಯಕರ್ತರಿಂದ ವ್ಯತಿರಿಕ್ತ ಪರಿಣಾಮ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಬಹುದು , ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿಟ್ಟ ಕ್ರಮ  ತಗೆದುಕೊಂಡು ನ್ಯಾಯ ಒದಗಿಸುವಂತೆ ಮನವಿ ನೀಡಿದರು.

ಈ ಸಂರ್ಭದಲ್ಲಿ ಹಿಂದು ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಗವಾಳಿ, ತಾಲೂಕು ಅಧ್ಯಕ್ಷ ವಾಸು ನಾಯ್ಕ ,ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ವಿಶ್ವ ಹಿಂದು ಪರಿಷತ್‌ ಪ್ರಮುಖ ಶಂಕರ ಶೆಟ್ಟಿ, ರಾಮ ಕೃಷ್ಣ ನಾಯ್ಕ , ಬಿಜೆಪಿ ತಾಲೂಕಾಧ್ಯಾಕ್ಷ ಸುಬ್ರಾಯ ದೇವಡಿಗ, ಜಿಲ್ಲಾ ಬಿಜೆಪಿ ಕಾರ್ಯಾದರ್ಶಿ ಶಿವಾನಿ ಶಾಂತಾರಾಮ, ತಾಲೂಕು ಬಿಜೆಪಿ ಪ್ರಮುಖ ಕೃಷ್ಣ ನಾಯ್ಕ ಆಸರಕೇರಿ , ರವಿ ನಾಯ್ಕ ಜಾಲಿ, ಮೋಹನ ಕೆ.ನಾಯ್ಕ , ಭಾಸ್ಕರ ದೈಮನೆ,, ಬಿಜೆಪಿ ಸ್ಥಳೀಯ ಸದ್ಯಸರು ಮುಂತಾದವರು ಇದ್ದರು.

WhatsApp
Facebook
Telegram
error: Content is protected !!
Scroll to Top