1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ..!

ವಿದೇಶ(ಲಿಮಾ): 1,200 ವರ್ಷದಷ್ಟು ಹಳೆಯ ಮಕ್ಕಳ ಮತ್ತು ವಯಸ್ಕರ ಅವಶೇಷಗಳು ಲಿಮಾದಲ್ಲಿ ಪತ್ತೆಯಾಗಿವೆ.

ಪೆರುವಿಯನ್ ಪುರಾತತ್ತ್ವ ಶಾಸ್ತ್ರಜ್ಞರು 800-1,200 ವರ್ಷಗಳ ಹಿಂದೆ ಸಮಾಧಿ ಮಾಡಲಾಗಿದ್ದ ಎಂಟು ಮಕ್ಕಳು ಮತ್ತು 12 ವಯಸ್ಕರ ದೇಹವನ್ನು ಪತ್ತೆ ಮಾಡಿದ್ದಾರೆ. ಶೋಧ ಕಾರ್ಯವನ್ನು ಮಾಡಿ ನಿನ್ನೆ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಪೂರ್ವ-ಇಂಕಾನ್ ಕಾಜಮಾಕ್ರ್ವಿಲ್ಲಾದ ಲಿಮಾ ಪೂರ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ. 

ಈ ಅವಶೇಷಗಳು ಸಮಾಧಿಯಿಂದ ಮೇಲೆ ಬಂದಿದ್ದವು. ಈ ಹಿನ್ನೆಲೆ ಕಳೆದ ವರ್ಷ ನವೆಂಬರ್‍ನಲ್ಲಿ ಪೆರುವಿನ ಸ್ಯಾನ್ ಮಾರ್ಕೋಸ್ ವಿಶ್ವವಿದ್ಯಾಲಯದ ತಂಡವು ಈ ಕುರಿತು ಶೋಧ ಕಾರ್ಯ ಮಾಡಲು ಪ್ರಾರಂಭಿಸಿತು. ಭ್ರೂಣವನ್ನು ಹಗ್ಗಗಳಿಂದ ಸುತ್ತಲ್ಪಟ್ಟಿದ್ದು, ಪ್ರಾಚೀನ ಕಾಲದ ಮಮ್ಮಿಗಳಂತೆ ಕಂಡುಬಂದಿದೆ.

ಪುರಾತತ್ವಶಾಸ್ತ್ರಜ್ಞ ಪೀಟರ್ ವ್ಯಾನ್ ಡೇಲೆನ್ ಈ ಕುರಿತು ಮಾತನಾಡಿದ್ದು, ಕೆಲವು ಪುರಾತನ ಮಮ್ಮಿಗಳನ್ನು ರಕ್ಷಿಸಲಾಗಿದೆ. ಇತರ ಅಸ್ಥಿಪಂಜರಗಳನ್ನು ಪ್ರಾಚೀನ ಪೂರ್ವ-ಹಿಸ್ಪಾನಿಕ್ ಆಚರಣೆಯ ಭಾಗವಾಗಿ ಬಟ್ಟೆಗಳ ವಿವಿಧ ಪದರಗಳಲ್ಲಿ ಸುತ್ತಿಡಲಾಗಿತ್ತು. ಇನ್ನೂ ಹೆಚ್ಚು ಮಮ್ಮಿಗಳು ನಾಪತ್ತೆಯಾಗಿರಬಹುದು ಎಂದು ತಿಳಿಸಿದ್ದಾರೆ.

ಅವರಿಗೆ ಸಾವು ಅಂತ್ಯವಲ್ಲ. ಅವರ ಪ್ರಕಾರ, ಸತ್ತವರು ಜಗತ್ತಿಗೆ ಪರಿವರ್ತನೆಯಾಗುತ್ತಾರೆ. ಸತ್ತವರ ಆತ್ಮಗಳು ಜೀವಂತ ರಕ್ಷಕರಂತಿರುತ್ತವೆ ಎಂದು ನಂಬಲಾಗಿದೆ. 1,700 ವರ್ಷಗಳ ಹಿಂದಿನ ಆಡಳಿತಗಾರನಾದ ಲಾರ್ಡ್ ಆಫ್ ಸಿಪಾನ್‍ನ ಸಮಾಧಿಯನ್ನು ಉಲ್ಲೇಖಿಸಿರುವ ವ್ಯಾನ್ ಡೇಲೆನ್, ಸಿಪಾನ್ ಸಮಾಧಿ ಮಾದರಿಯಲ್ಲಿ ಈ ಸಮಾಧಿ ಇದೆ ಎಂದು ವಿವರಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top