ಎಸ್ಎಫ್​​ಜೆ ನಂಟು ಇರುವ ಪಂಜಾಬ್ ಪಾಲಿಟಿಕ್ಸ್ ಟಿವಿಯ ಆ್ಯಪ್, ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಕೇಂದ್ರ ನಿಷೇಧ

ದೆಹಲಿ:ಗುಪ್ತಚರ ಮಾಹಿತಿಗಳ ಆಧಾರದ ಮೇರೆಗೆ ಮತ್ತು ಕಳೆದ ವರ್ಷ ಹೊರಡಿಸಲಾದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ನೀಡಲಾದ ತುರ್ತು ಅಧಿಕಾರಗಳನ್ನು ಅನ್ವಯಿಸಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I&B) ವಿದೇಶಿ ಮೂಲದ ‘ಪಂಜಾಬ್ ಪಾಲಿಟಿಕ್ಸ್ ಟಿವಿ’ಯ ಡಿಜಿಟಲ್ ಮಾಧ್ಯಮ ಸಂಪನ್ಮೂಲಗಳನ್ನು ನಿಷೇಧಿಸಿದೆ. ಇದು ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆ ಜತೆ ನಂಟು ಹೊಂದಿದೆ ಮತ್ತು ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಲು ಪ್ರಯತ್ನಿಸುತ್ತಿದೆ ಎಂದು ಸಚಿವಾಲಯ ಹೇಳಿದೆ.

WhatsApp
Facebook
Telegram
error: Content is protected !!
Scroll to Top