ಬಳ್ಳಾರಿ ಕೂಡ್ಲಗಿ ನ್ಯಾಯಾಲಯದಲ್ಲಿ ವಿಶ್ವ ಸಾಮಾಜಿಕ ನ್ಯಾಯದಿನ

ಬಳ್ಳಾರಿ:ವಿಜಯನಗರ ಜಿಲ್ಲೆ ಕೂಡ್ಲಿಗಿ ನ್ಯಾಯಾಲಯದಲ್ಲಿ, ಫೆ21ರಂದು ಕೂಡ್ಲಿಗಿ ನ್ಯಾಯಾಲಯ ಇಲಾಖೆ,ಕಾನೂನು ಸೇವೆಗಳ ಸಮಿತಿ. ತಾಲೂಕು ವಕೀಲರ ಸಂಘ ಹಾಗೂ ತಾಲೂಕಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ.ವಿಶ್ವ ಸಾಮಾಜಿಕ ನ್ಯಾಯದಿನ ಆಚರಿಸಲಾಯಿತು,

ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತೃತೀಯ ಲಿಂಗಿಗಳಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಮಾಡಿದೆ. ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು,ಎಲ್ಲರೂ ಶೈಕ್ಷಣಿಕಾಭಿವೃದ್ಧಿ ಹೊಂದಿ ಸ್ವಾವಲಂಭಿಗಳಾಗಬೇಕೆಂದು ಕರೆ ನೀಡಿದರು. ಪ್ಯಾನಲ್ ವಕೀಲರಾದ ಸಿ. ವಿರುಪಾಕ್ಷಪ್ಪ, “ವಿಶ್ವ ಸಾಮಾಜಿಕ ನ್ಯಾಯ ದಿನ” ಕುರಿತು ಉಪನ್ಯಾಸ ನೀಡಿದರು.ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ ರವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. “ಮೈತ್ತಿಯೋಜನೆಯಡಿಯ ಫಲಾನುಭವಿಗಳಿಗೆ, ಕಂದಾಯ ಇಲಾಖೆಯಿಂದ ನೀಡಲ್ಪಡುವ,ಮೈತ್ರಿ ಯೋಜನೆಯ ಮಂಜೂರು ಪತ್ರ ನೀಡಲಾಯಿತು.ಸಹಾಯಕ ಸರ್ಕಾರಿ ಅಭಿಯೋಜಕರಾದ ಹೊಸವಡ್ರು ಅಣ್ಣೇಶ,ವಕೀಲರ ಸಂಘ ಕಾರ್ಯದರ್ಶಿ ಬಿ.ಸಿದ್ದಲಿಂಗಪ್ಪ,ಉಪ ತಹಶಿಲ್ದಾರರಾದ ಹಿರಿಯ ಮಹಿಳಾ ವಕೀಲರಾದ ಜಿ.ಎನ್.ಕುಮಾರಸ್ವಾಮಿ ಮತ್ತು ಶ್ರೀಮತಿ ಅರುಂಧತಿ ನಾಗವಿ, ಸಿಡಿಪಿಓ ನಾಗನಗೌಡ ವೇದಿಕೆಯಲ್ಲಿದ್ದರು.ಹಿರಿಯ ಮಹಿಳಾ ವಕೀಲರಾದ ಕೆ.ಹೆಚ್.ಎಮ್.ಶೈಲಜಾ ಸ್ವಾಗತಿಸಿದರು.ಪ್ಯಾನಲ್ ವಕೀಲರಾದ ಟಿ.ಮಲ್ಲಿಕಾರ್ಜುನ ನಿರೂಪಿಸಿದರು, ಜಿ.ಎಮ್.ಮಲ್ಲಿಕಾರ್ಜುನಸ್ವಾಮಿ ವಂದಿಸಿದರು. ಕಾನೂನು ಸೇವಾಸಮಿತಿಯ ಸಿಬ್ಬಂದಿ ಹಾಗೂ ನ್ಯಾಯಾಲಯ ಸಿಬ್ಬಂದಿ,ಪಟ್ಟಣ ಸೇರಿದಂತೆ ವಿವಿದೆಡೆಗಳಿಂದ ಆಗಮಿಸಿದ್ದ ತೃತೀಯಲಿಂಗಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿದ್ದರು.

WhatsApp
Facebook
Telegram
error: Content is protected !!
Scroll to Top