ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಚಿತಾಭಸ್ಮ ಸಂಗ್ರಹ ವೇಳೆ ಕುಟುಂಬಸ್ಥರ ಆಕ್ರಂದನ

ಸದ್ಯ ಕೊಲೆ ನಡೆದ ಬಗೆಗೆ ಪೊಲೀಸರು ಹಂತಹಂತವಾಗಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರನ್ನು ಬಂಧಿಸಲಾಗಿ

  • ಈವರೆಗೆ ಮೂರು ಜನ ಅರೆಸ್ಟ್​: ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಅಧಿಕೃತವಾಗಿ ಮೂರು ಜನ ಅರೆಸ್ಟ್ ಮಾಡಲಾಗಿದೆ. ಉಳಿದವರ ಇಂಟಾಗ್ರೇಷನ್ ಆಗ್ತಿದೆ.  ತನಿಖೆ ನಡೆಯುತ್ತಿದೆ, ಬಳಿಕ ಮಾಹಿತಿ ಸಿಗಲಿದೆ. ಪೊಲೀಸರು ಆಕ್ಷನ್ ತೆಗೆದುಕೊಳ್ಳುತ್ತಾರೆ. ನಾನು ಹೇಳೋದು ಅಧಿಕೃತ. ನಮ್ಮ ಪೊಲೀಸರು ಸಮರ್ಥರಿದ್ದಾರೆ ಅನ್ನೋ ನಂಬಿಕೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
  • ಕುಟುಂಬ ಸದಸ್ಯರಿಂದ ಹರ್ಷ ಚಿತಾಭಸ್ಮ ಸಂಗ್ರಹ ಕಾರ್ಯರುದ್ರಭೂಮಿಯಲ್ಲಿ ಹರ್ಷ ಕುಟುಂಬ ಸದಸ್ಯರಿಂದ ಚಿತಾಭಸ್ಮ ಸಂಗ್ರಹ ಕಾರ್ಯ ನಡೆದಿದೆ.  ಹಿರಿಯ ಸಹೋರಿ ಅಶ್ವಿನಿಯಿಂದ ಶಾಸ್ತ್ರೋಕ್ತವಾಗಿ ಚಿತಾ ಭಸ್ಮ ಸಂಗ್ರಹಿಸಿದ್ದಾರೆ. ರುದ್ರ ಭೂಮಿಯಲ್ಲಿ ತಮ್ಮ ಹರ್ಷಾ ಪೋಟೋ ಮುಂದೆ  ಸಹೋದರಿ ಅಶ್ವಿನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಿನ್ನೆ ನನ್ನ ತಮ್ಮನ ಶವ ತಂದೆ ಇಂದು ಆತನ ಚಿತಾಭಸ್ಮ ಸಂಗ್ರಹಿಸುತ್ತಿದ್ದೇನೆ. ನಮ್ಮ ಜೀವನದ ಕೆಟ್ಟ ಗಳಿಗೆ ಎಂದು ಸಹೋದರಿ ಅಶ್ವಿನಿ ನೋವು ತೋಡಿಕೊಂಡಿದ್ದಾರೆ.  ಹರ್ಷ ತಂದೆ ನಾಗರಾಜ್ ಸೇರಿದಂತೆ ಕುಟುಂಬ ಸದಸ್ಯರಿಂದ ಚಿತಾ ಭಸ್ಮ ಸಂಗ್ರಹ ಕಾರ್ಯ ನಡೆದಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
  • ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆಯ  ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಸುದ್ದಿಗೋಷಿಠಿ ನಡೆಸಿದ್ದಾರೆ.  ಭಾನುವಾರವೇ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ ಆಗಿದೆ. ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರ ಹೊಣೆಯನ್ನು ಗೃಹ ಸಚಿವರೇ ಹೊರಬೇಕು. ನಿಷೇಧಾಜ್ಞೆ ಇದ್ದರೂ ಮೆರವಣಿಗೆಗೆ ಹೇಗೆ ಅವಕಾಶ ಕೊಟ್ಟರು.  ಸಚಿವರ ಎದುರೇ ಕಲ್ಲುತೂರಾಟ, ಬೆಂಕಿ ಹಚ್ಚಿಸುವುದು ಆಗುತ್ತೆ. ಸರ್ಕಾರದಿಂದಲೇ 144 ಸೆಕ್ಷನ್ ಉಲ್ಲಂಘನೆಯಾಗಿದೆ. ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಗೆ ಬಿಜೆಪಿ, RSSನವರು ಬಜರಂಗದಳದವರು ಇವರೆಲ್ಲ ರಸ್ತೆಗಿಳಿದು ಹೋರಾಟ  ಮಾಡಿದ್ದಾರೆ. ಇದು ನಾಗರಿಕ ಸಮಾಜದ ಲಕ್ಷಣವಾ? ಇದನ್ನು ಗೂಂಡಾಗಳ ಸರ್ಕಾರ ಎಂದು ಕರೆಯಬೇಕು. ಸಚಿವರಿಂದಲೇ ಉಲ್ಲಂಘನೆ ಆಗಿದೆ ಅಂದ್ರೆ ಸರ್ಕಾರವೆಲ್ಲಿದೆ. ಇದೆಲ್ಲದಕ್ಕೂ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ. ಸಂಸದ ಬಿ.ವೈ.ರಾಘವೇಂದ್ರ ಇದರ ಹೊಣೆ ಹೊರಬೇಕು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ,

ರಾಜ್ಯದಲ್ಲಿ ಒಂದೆಡೆ ಹಿಜಾಬ್​ ವಿವಾದ ತಾರಕಕ್ಕೇರಿದೆ. ಈ ನಡುವೆ  ಫೆ. 20ರಂದು ಶಿವಮೊಗ್ಗದಲ್ಲಿ  ಹರ್ಷ ಎನ್ನುವ ಯುವಕನ ಬರ್ಬರ ಹತ್ಯೆಯಾಗಿದೆ. ಇದರಿಂದ ತಣ್ಣಗಿದ್ದ ಮಲೆನಾಡು ಬೂದಿ ಮುಚ್ಚಿದ ಕೆಂಡದಂತಾಗಿದೆ. ಫೆ.20ರಂದು ರಾತ್ರಿ ನಡುಬೀದಿಯಲ್ಲಿ ಹರ್ಷ ಎನ್ನುವ ಯುವಕ ಬರ್ಬರವಾಗಿ ಹತ್ಯೆಯಾಗಿದ್ದ, ಇದರಿಂದ ಮಲೆನಾಡು ಮಾತ್ರವಲ್ಲದೆ ಇಡೀ ಕರುನಾಡು ಬೆಚ್ಚಿಬಿದ್ದಿದೆ. ಸದ್ಯ ಕೊಲೆ ನಡೆದ ಬಗೆಗೆ ಪೊಲೀಸರು ಹಂತಹಂತವಾಗಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ.  ಶಿವಮೊಗ್ಗದಲ್ಲಿ 144 ಸೆಕ್ಷನ್​ ಜಾರಿ ಮಾಡಿ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ.

WhatsApp
Facebook
Telegram
error: Content is protected !!
Scroll to Top