ನಂದಿ ಬೆಟ್ಟದಲ್ಲಿ ಸಿಲುಕಿದ್ದ ಯುವಕ, ಹೆಲಿಕಾಪ್ಟರ್ ಮೂಲಕ ರಕ್ಷಣೆ.!

ರಾಜ್ಯ(ಚಿಕ್ಕಬಳ್ಳಾಪುರ): ಕಳೆದ ವಾರ ಕೇರಳ ಬೆಟ್ಟವೊಂದರಲ್ಲಿ ಸಿಲುಕಿ ಹಾಕಿಕೊಂಡು ಪ್ರಾಣಾಪಾಯ ಸ್ಥಿತಿಯಲ್ಲಿದ್ದ ಯುವಕನ ರಕ್ಷಣಾ ಕಾರ್ಯಾಚರಣೆ ಹರಸಾಹಸ ಪಟ್ಟು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಅಂತಹ ಘಟನೆಯೇ ನಂಧಿಗಿರಿಧಾಮದಲ್ಲಿ ನಡೆದಿದ್ದು ಆ ಕುರಿತು ವರದಿ ಇಲ್ಲಿದೆ ನೋಡಿ

ಹೀಗೆ ವಿಶುವಲ್ಸ್ ಕಾಣುತ್ತಿರುವ ದೃಶ್ಯಗಳು ಬೇರೆ ಎಲ್ಲೂ ಅಲ್ಲ. ಬೆಂಗಳೂರಿಗೆ ಹತ್ತಿರದಲ್ಲೇ ಇರುವ ನಂದಿ ಗಿರಿಧಾಮ ಬೆಟ್ಟಕ್ಕೆ ವೀಕೆಂಡ್ ಮೋಜಿಗಾಗಿ ದೆಹಲಿ ಮೂಲದ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಶಾಂತ್ ಗುಲ್ಲಾ(19) ಎಂಬ ಯುವಕ ಇಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆ ನಂಧಿಗಿರಿಧಾಮದ ಪಕ್ಕದಲ್ಲೇ ಇರುವ ಬ್ರಹ್ಮಗಿರಿ ಬೆಟ್ಟದಲ್ಲಿ‌ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ

ನಂತರ ತನ್ನ ಮೊಬೈಲ್‌ನಲ್ಲಿ ತಾನು ಬಿದ್ದಿರುವ ಲೊಕೇಷನ್ ಅನ್ನು ಪೋಲೀಸ್ ಇಲಾಖೆಯ ಕಂಟ್ರೋಲ್ ರೂಂ ಗೆ ಕಳಿಸಿದ್ದಾನೆ. ನಂತರ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ನಂತರ ಕುಟುಂಬಸ್ಥರು ಸ್ಥಳೀಯ ನಂದಿಗ್ರಾಮ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೋಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಆತನನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಬೆಟ್ಟದಲ್ಲಿ ಆಳ ಹೆಚ್ಚು ಇದ್ದ ಕಾರಣ ಸ್ಥಳೀಯ ಪೋಲೀಸರಿಗೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.

ದ್ವಿಚಕ್ರ ವಾಹನದಲ್ಲಿ ಒಬ್ಬನೇ ಬಂದಿದ್ದ ಯುವಕ, ನಂದಿಗೆ ಬಿಡುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಬೈಕ್ ಅನ್ನು ಬೆಟ್ಟದ ತಪ್ಪಲಿನಲ್ಲಿಯೇ ಹಾಕಿ ಟ್ರಕ್ಕಿಂಗ್‌ಗೆ ಹೊರಟಿದ್ದಾನೆ. ಈ ವೇಳೆ ಬೆಟ್ಟದ ಅರ್ಧ ಭಾಗಕ್ಕೆ ತೆರಳಿ, ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ನಂತರ ಎಲ್ಲರಿಗೂ ಮಾಹಿತಿ ನೀಡಿದ ಕಾರಣ ಸ್ಥಳೀಯ ಪೋಲೀಸ್ ಇಲಾಖೆ ಏರ್‌ಫೋರ್ಸ್‌ಗೆ ಮಾಹಿತಿ ನೀಡಿ ಹೆಲಿಕಾಪ್ಟರ್ ಮತ್ತು ಎನ್ ಡಿ ಆರ್ ಎಫ್, ಅಗ್ನಿಶಾಮಕ ದಳ, ಸಿಬ್ಬಂದಿ ಎಲ್ಲರೂ ಆಗಮಿಸಿ ರಕ್ಷಣಾ ಕೆಲಸಕ್ಕೆ ಮುಂದಾಗಿದ್ದಾರೆ. ಸತತ ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ರಕ್ಷಣಾ ತಂಡ ಕೊನೆಗೆ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಆತನನ್ನು ಹೆಲಿಕಾಪ್ಟರ್ ಮೂಲಕ ಯಲಹಂಕ ಏರ್‌ಫೋರ್ಸ್‌ಗೆ ಕಳಿಸಿ ಅಲ್ಲಿಂದ ಸ್ಥಳೀಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಈ ವೇಳೆಗೆ ಆಗಲೇ ಬೆಟ್ಟದ ಮೇಲಿಂದ ಬಿದ್ದಿದ್ದ ಯುವಕನಿಗೆ ಬೆನ್ನು ಮತ್ತು ದೇಹದ ಕೆಲವೊಂದು ಭಾಗಗಳಿಗೆ ಗಾಯಗಳಾಗಿವೆ.

ನಂದಿ ಗಿರಿಧಾಮಕ್ಕೆ ವೀಕೆಂಡ್‌ನಲ್ಲಿ ಎಂಜಾಯ್ ಮಾಡಲು ಬರುವ ಪ್ರವಾಸಿಗರ ಹುಚ್ಚಾಟಕ್ಕೆ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಗಿರಿಧಾಮಕ್ಕೆ ಬರುವ ಪ್ರವಾಸಿಗರು ಜಾಗರೂಕತೆಯಿಂದ ವರ್ತಿಸಿ ತಮ್ಮ ಪ್ರಾಣದ ಜೊತೆಗೆ ಇತರರ ಪ್ರಾಣವನ್ನೂ ಉಳಿಸಿಬೇಕಿದೆ.

WhatsApp
Facebook
Telegram
error: Content is protected !!
Scroll to Top