ಕಾನೂನು ಬಾಹಿರವಾಗಿ ಡ್ಯಾನ್ಸರ್‌ ಬಾರ್‌ ನಡೆಸುತ್ತಿದ್ದ ಆರೋಪಿಗಳ ಸಂಬಂಧ; 28 ಮಹಿಳೆಯರ ರಕ್ಷಣೆ..!

ರಾಜ್ಯ(ಬೆಂಗಳೂರು):  ಅಕ್ರಮವಾಗಿ ನಡೆಯುತ್ತಿದ್ದ ಡ್ಯಾನ್ಸರ್‌ ಬಾರ್‌ವೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 28 ಮಹಿಳೆಯರನ್ನು ರಕ್ಷಿಸಿ ಮೂವರನ್ನು ಬಂಧಿಸಿದ್ದಾರೆ.

ಕೋರಮಂಗಲದ 6ನೇ ಹಂತದ 80 ಅಡಿ ರಸ್ತೆಯ ಸಿಕ್ಸಿದೇಸಿ ಪಬ್‌ ಮತ್ತು ರೆಸ್ಟೋರೆಂಟ್‌ನ ಕ್ಯಾಶಿಯರ್‌ಗಳಾದ ಸುಹಾಸ್‌, ನವೀನ್‌ ಹಾಗೂ ಮೇಲ್ವಿಚಾರಕ ವಿಜಯ್‌ ಪೂಜಾರಿ ಬಂಧಿತರಾಗಿದ್ದು(Arrest), ದಾಳಿ ವೇಳೆ ತಪ್ಪಿಸಿಕೊಂಡಿರುವ ಬಾರ್‌ ಪರವಾನಿಗೆದಾರ ಎಂ.ಬಸವರಾಜ್‌, ವಿಕಾಸ್‌ ಹೆಗಡೆ ಹಾಗೂ ಅಶ್ವಿನ್‌ ಶೆಟ್ಟಿ ಪತ್ತೆಗೆ ತನಿಖೆ ನಡೆದಿದೆ. ಹಲವು ದಿನಗಳಿಂದ ಕಾನೂನು ಬಾಹಿರವಾಗಿ ಆರೋಪಿಗಳು(Accused) ಡ್ಯಾನ್ಸರ್‌ ಬಾರ್‌ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ನಡೆಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಪರವಾನಿಗೆ ಪಡೆದಿದ್ದ ಬಸವರಾಜು ಅವರಿಂದ ಬಾಡಿಗೆ ಪಡೆದ ವಿಕಾಸ್‌ ಹೆಗಡೆ ಹಾಗೂ ಅಶ್ವಿನ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಹೆಸರಿನಲ್ಲಿ ಡ್ಯಾನ್ಸರ್‌ ಬಾರ್‌ ನಡೆಸುತ್ತಿದ್ದರು. ಇದಕ್ಕಾಗಿ ವಿವಿಧ ರಾಜ್ಯಗಳಿಂದ ಉದ್ಯೋಗಾದಾಸೆ ತೋರಿಸಿ ಮಹಿಳೆಯರನ್ನು ಆರೋಪಿಗಳು ಕರೆದಿದ್ದರು. ಈ ದಾಳಿ ವೇಳೆ 28 ಮಹಿಳೆಯರನ್ನು ರಕ್ಷಿಸಲಾಗಿದೆ. ದಾಳಿ ವೇಳೆ ಬಾರ್‌ನಲ್ಲಿದ್ದ ಕ್ಯಾಷಿಯರ್‌ಗಳು ಹಾಗೂ ಮೇಲ್ವಿಚಾರಕನನ್ನು ಬಂಧಿಸಲಾಯಿತು. ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top