ಮೀನುಗಾರರ ಬಲೆಗೆ ಅಪರೂಪದ ಹಾರುವ ಮೀನು; ವಿಶೇಷ ದೇಹ ರಚನೆ ಯುಳ್ಳ ಫೈಯಿಂಗ್ ಫಿಶ್…!

ದಕ್ಷಿಣಕನ್ನಡ(ಮಂಗಳೂರು):ಎರಡು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳೂ ಸಿಕ್ಕಿವೆ . ಆಂಗ್ಲ ಭಾಷೆಯಲ್ಲಿ ಫೈಯಿಂಗ್ ಫಿಶ್ ಹಾಗೂ ಏಳುವಲ್ಲಿ ಪಕ್ಕಿಮೀನ್ ಎಂದು ಕರೆಯಲ್ಪಡುವ ಈ ಮೀನು ಹೆಚ್ಚಾಗಿ ಆಳಸಮುದ್ರದಲ್ಲಿರುವಂಥ ಮತ್ಯ ಪ್ರಭೇದ .

ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ . ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲೆ ಎಗರಿ ಕೆಲ ಹೊತ್ತು ಹಕ್ಕಿಗಳಂತೆಯೇ ಹಾರುವ ಸಾಮರ್ಥ್ಯ ಹೊಂದಿವೆ . ಸುಮಾರು 15 ರಿಂದ 45 ಸೆಂ.ಮೀ ವರೆಗೆ ಉದ್ದವಾಗುವ ಈ ಮೀನುಗಳು ಬಲೆಗೆ ಬೀಳುವುದು ಬಲು ಅಪರೂಪ ಅಂತ ಮೀನುಗಾರರು ಹೇಳಿದ್ದಾರೆ .

WhatsApp
Facebook
Telegram
error: Content is protected !!
Scroll to Top