ಕಾರವಾರ: ಅವೈಜ್ಞಾನಿಕ ಸ್ಪೋಟಕ ವಸ್ತು ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರ ಬಂಧನ.!

ಉತ್ತರಕನ್ನಡ(ಕಾರವಾರ): ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸ್ಟೋಟಕ ವಸ್ತುಗಳನ್ನು ಕಾರವಾರ ನಗರದ ಲಂಡನ್ ಬ್ರಿಡ್ಜ್ ಸಮೀಪ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

84 ಜಿಲೆಟಿನ್ ಕಡ್ಡಿಗಳು, 4 ಇಲಕ್ಟ್ರಿಕ್ ಡಿಟೋನೆಟರ್ ವಶಕ್ಕೆ ಪಡೆಯಲಾಗಿದ್ದು
ಬಾಲಮುರುಗನ್, ಆನಂದ ನಾಯ್ಕ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಅಂಕೋಲ ದಿಂದ ದಾಖಲೆ ಇಲ್ಲದೇ ಅವೈಜ್ಞಾನಿಕ ರೀತಿಯಲ್ಲಿ ಕಾರಿನಲ್ಲಿ ಕಾರವಾರಕ್ಕೆ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಕಾರವಾರ ನಗರ ಪೊಲೀಸರು ದಾಳಿ ನಡೆಸಿದ್ದಾರೆ.ಘಟನೆ ಸಂಬಂಧ ಕಾರವಾರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp
Facebook
Telegram
error: Content is protected !!
Scroll to Top