ರೈಲು ಹಳಿಗೆ ಬಿದ್ದಿದ್ದ ಬಾಲಕಿಯನ್ನ ರಕ್ಷಿಸಿದ ಲೋಕೋ ಪೈಲಟ್…!

ಬೆಳಗಾವಿ: ರೈಲು ಹಳಿಗೆ ಬಿದ್ದಿದ್ದ ಬಾಲಕಿಯನ್ನ ರಕ್ಷಿಸಿ ಲೋಕೋ ಪೈಲಟ್ (ರೈಲು ಚಾಲಕ) ರಕ್ಷಿಸಿರುವ ಘಟನೆ ಬೆಳಗಾವಿಯ ಕೇಂದ್ರ ರೈಲು ನಿಲ್ದಾಣದಲ್ಲಿ ನಡೆದಿದೆ.

ಬಾಲಕಿ ಸೂರತ್‍ನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದಳು. ತಿನಿಸುಗಳನ್ನು ಖರೀದಿಸಲು ಬೆಳಗಾವಿ ನಿಲ್ದಾಣದ ಮಳಿಗೆಯೊಂದಕ್ಕೆ ಹೋಗಿದ್ದಾಳೆ. ರೈಲು ಚಲಿಸುತ್ತಿದ್ದುದನ್ನು ಗಮನಿಸಿದ ಆಕೆ ಏರಲು ಯತ್ನಿಸಿ ಜಾರಿ ಬಿದ್ದು, ರೈಲು ಹಾಗೂ ಪ್ಲಾಟ್‍ಫಾರ್ಮ್ ನಡುವೆ ಸಿಲುಕಿದ್ದಳು. 

ಇತ್ತ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಬರುತ್ತಿದ್ದ ಅನಿರ್ಬನ್ ಕೂಡಲೇ ಧಾವಿಸಿ ಬಾಲಕಿಯನ್ನು ಮೇಲೆತ್ತಿದ್ದಾರೆ. ಈ ವೇಳೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇತ್ತ ರೈಲು ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕರು, ರೈಲು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top