ಭಟ್ಕಳ ತಾಲೂಕ ಹೀಲ್ ಹ್ಯೂಮ್ಯಾನಿಟಿ ಸರ್ವಿಸ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ:ಮಾಸ್ಟರ್‌ ಅಬ್ದು ಶಮಿ

ಭಟ್ಕಳ: ತಾಲೂಕ ಗುಡ್ ಲಕ್ ರೋಡಿನಲ್ಲಿರುವ ಹೀಲ್ ಹ್ಯೂಮ್ಯಾನಿಟಿ ಸರ್ವಿಸ್ ಸಂಸ್ಥೆಯಲ್ಲಿ ದಿನಾಂಕ 10 ಗುರುವಾರ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ ಎಂದು ಮಾಸ್ಟರ್ ಅಬ್ದು ಶಮಿ ಹೇಳಿದರು.

ಗುರುವಾರ ನಡೆಯಲಿರುವ ವೈದ್ಯಕಿಯ ಶಿಬಿರದ ಹಿನ್ನೆಲೆಯಲ್ಲಿ ಮಾಸ್ಟರ್ ಅಬ್ದು ಶಮಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ ನಮ್ಮ. ಹೀಲ್ ಹ್ಯೂಮ್ಯಾನಿಟಿ ಸಂಸ್ಥೆಯ ವತಿಯಿಂದ ದಿನಾಂಕ 10/2/2022 ಗುರುವಾರ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ . ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ನಡೆಯಲಿದೆ. ಈ ಶಿಬಿರದಲ್ಲಿ ಎನಪೋಯಾ ಆಸ್ಪತ್ರೆಯ ವೈದ್ಯಕೀಯ ತಂಡ ಮುಖ್ಯವಾಗಿ ಡಾ: ಇಬ್ರಾಹಿಮ್, ಹಾಗು ಗೈನಾಕೊಲೆಜಿಷ್ಟ ಶ್ರೀಮತಿ ಅಂಜುಂ ಮತ್ತು ಕ್ಯಾನ್ಸರ್ ಸ್ಪೇಷಾಲಿಷ್ಟ , ದಂತ ವೈದ್ಯರುಗಳ ತಂಡ ಪಾಲ್ಲೊಳ್ಳಲಿದೆ ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ಸಂಸ್ಥೆಯ ಹಿದಾಯತ್ ಉಲ್ಲಾ, ಬಶಾರ್ ಹಾಗು ಇನ್ನಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top