ಬಸವರಾಜ ಹೊರಟ್ಟಿಯವರಿಂದ ಶಿಕ್ಷಕ ನೌಕರ ಸಮುದಾಯದೊಂದಿಗೆ ಸಂವಾದ

ಭಟ್ಕಳ:ವಿಧಾನ ಪರಿಷತ್ತಿನ ಸಭಾಪತಿಯವರಾದ ಶ್ರೀ ಬಸವರಾಜ ಹೊರಟ್ಟಿರವರು ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕ-ನೌಕರ ಸಮುದಾಯದೊಂದಿಗೆ ಶೈಕ್ಷಣಿಕ ಸಂವಾದ ಎಂಬ ಶಿಕ್ಷಕರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಕ್ಷಕರೊಂದಿಗೆ ಸಂವಾದ ನಡೆಸಿದರು

ವಿಧಾನ ಪರಿಷತ್ತಿನ ಸಭಾಪತಿಯವರಾದ ಶ್ರೀ ಬಸವರಾಜ ಹೊರಟ್ಟಿರವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಮಾಧ್ಯಮಿಕ ಶಾಲೆ ನೌಕರರ ಸಂಘದ ಅಧ್ಯಕ್ಷ ಎನ್.ಟಿ.ಗೌಡರವರು ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ, ಈಶ್ವರ ನಾಯ್ಕ, ಸೇರಿ ಕಾರ್ಯಕ್ರಮದಲ್ಲಿ ಸುಮಾರು 50 ರಿಂದ 55 ಜನ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿಯವರಾದ ಬಸವರಾಜ ಹೊರಟ್ಟಿರವರು ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸಮಸ್ಯೆ ಆಲಿಸಿ ಅವರೊಂದಿಗೆ ಸಂವಾದ ನಡೆಸಿ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ಮಾಡಿ ಕೆಲವು ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಮಾತನಾಡಿ ಬಗೆಹರಿಸಲು ಪ್ರಯತ್ನಿಸುವ ಬಗ್ಗೆ ಭರವಸೆ ನೀಡಿದರು. ಅವರು ತಮ್ಮ ಮಾತನ್ನು ಮುಂದುವರಿಸುತ್ತ ನಾನು 19 ಜನ ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಎಲ್ಲರಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮಾಡಿಸಲು ಪ್ರಯತ್ನಿಸಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವಂತಹ ಪ್ರಯತ್ನಗಳೇ ಇಲ್ಲಿಯ ತನಕ ನನ್ನನ್ನು ಅಧಿಕಾರ ದಲ್ಲಿರಿಸಲೂ ಕಾರಣವಾಗಿದೆ. ಯಾವುದೇ ಶಿಕ್ಷಣ ಮಂತ್ರಿಗಳು ಹಿಂದೆ ಮಾಡದಂತಹ ಸಾಧನೆಯನ್ನು ನಾನು ಮಾಡಿದ್ದೇನೆ ‌. ನಾನು ನೇರ ಮಾತಿನ ವ್ಯಕ್ತಿಯಾಗಿದ್ದು ಕೆಲಸ ಸಾಧ್ಯವಿದ್ದಲ್ಲಿ ಮಾತ್ರ ಸಾಧ್ಯವಿದೆ ಎಂದು ಹೇಳುತ್ತೇನೆ ಹೊರತು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ‌ . ಶಿಕ್ಷಕರ ವರ್ಗಾವಣೆಯಲ್ಲಿ ನನ್ನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸುಲಭತೆಯನ್ನು ತರಲು ಪ್ರಯತ್ನಿಸಿದ್ದೇನೆ. ಅತಿಹೆಚ್ಚಿನ ಅಂದರೆ 40000 ಅಧಿಕ ಶಿಕ್ಷಕರ ನೇಮಕಾತಿಗಳನ್ನು ಮಾಡಿಸಿದ್ದೇನೆ. ಅನೇಕ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯಕ್ರಮ ಗಳನ್ನು ಮಾಡಿದ್ದೇನೆ. ಕೇವಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ಇದ್ದ ಬಿಸಿಊಟ ವ್ಯವಸ್ಥೆಯನ್ನು ಇತರೆಡೆ ಕೂಡಾ ತರಲು ಪ್ರಯತ್ನಿಸಿದ್ದೇನೆ ಎಂದರು.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ

▪️ ನೀವು ಶಿಕ್ಷಣ ಮಂತ್ರಿಗಳು ಇರುವಾಗ ಹಿಜಾಬ್ ಧರಿಸಲು ಸಮಸ್ಯೆ ಇರಲಿಲ್ಲ ಈಗ ಸಮಸ್ಯೆ ಉಂಟಾಗಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ*

ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುತ್ತೇನೆ ಹಾಗೂ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಮಕ್ಕಳು ಕೇವಲ ಶಿಕ್ಷಣ ಪಡೆಯಲು ಹೆಚ್ಚು ಒತ್ತು ನೀಡಬೇಕು ಉಳಿದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಇರಬೇಕು ಎಂದು ತಿಳಿಸಿದರು.

▪️ ನಿಮ್ಮ ಜೆ.ಡಿ.ಎಸ್ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕೇಳಿದ ಪ್ರಶ್ನೆಗೆ

ನಾನು ಇಲ್ಲಿ ಯಾವುದೇ ರಾಜಕಾರಣ ಮಾಡುವ ಉದ್ದೇಶದಿಂದ ಬಂದಿಲ್ಲ, ಶಿಕ್ಷಕರ ಸಮಸ್ಯೆ ಬಗೆಹರಿಸಲು ಬಂದಿರುವುದು. ನಾನು ವಿಧಾನ ಪರಿಷತ್ ಸಭಾಪತಿ ಆದ ದಿನವೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಬದಲ್ಲಿ ತಾಲೂಕಿನ ಶಿಕ್ಷಕ ವೃಂದ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top