ಇಂದು ಕೇಂದ್ರ ಬಜೆಟ್ ಮಂಡನೆ, ಇಳಿಕೆಯಾದ ಚಿನ್ನದ ಬೆಲೆ, .Budget 2022: ಇಂದು ಕೇಂದ್ರ ವಿತ್ತ ಸಚಿವರಿಂದ ಬಜೆಟ್​ ಮಂಡನೆ;

Union Budget 2022: ಹಲವು ನಗರಗಳಿಗೆ ವಂದೇ ಭಾರತ್ ರೈಲು ಸಂಚಾರ ಸಾಧ್ಯತೆ: ಈ 5 ಪ್ರಮುಖ ಘೋಷಣೆಗಳು ಆಗುತ್ತಾ?

Union Budget 2022: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಇಂದು ದೇಶದ ಸಾಮಾನ್ಯ ಬಜೆಟ್ (Aam Budget) ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹಣಕಾಸು ಸಚಿವರು ಏನು ಘೋಷಣೆ ಮಾಡುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿ ಜನರ ಕಣ್ಣು ಕೂಡ 2022ರ ರೈಲು ಬಜೆಟ್‌ (Railway Budget) ಮೇಲೆ ಇರುತ್ತದೆ. ಈ ಬಜೆಟ್‌ನಲ್ಲಿ ಹಲವು ಹೊಸ ರೈಲುಗಳ (New Railway) ಆರಂಭವನ್ನು ರೀಕ್ಷಿಸಲಾಗಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ರೈಲ್ವೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಆದರೆ ಈ ಬಜೆಟ್‌ನಲ್ಲಿ, ರೈಲ್ವೆಯಲ್ಲಿ ಇನ್ನೂ ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ಹೇಳಲಾಗುತ್ತದೆ. ಈ ಬಾರಿ ರೈಲ್ವೇ ಬಜೆಟ್ ನಲ್ಲಿ ಐದು ಘೋಷಣೆಗಳು ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲೂ ಕಡಿಮೆಯಾದ ಹಳದಿ ಲೋಹದ ದರ
Gold Rate on Feb 1st, 2022: ದೇಶದಲ್ಲಿಂದು 22 ಕ್ಯಾರೆಟ್‌ ಚಿನ್ನದ ಬೆಲೆ (Gold Price)ಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಕೊಂಚ ಇಳಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 44,900 ರೂ. ಇತ್ತು. ಇಂದು ಸಹ ಅದೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,990 ರೂ. ಇತ್ತು. ಇಂದು 10 ರೂ. ಕಡಿಮೆಯಾಗಿ 48,980 ರೂ. ಆಗಿದೆ.

WhatsApp
Facebook
Telegram
error: Content is protected !!
Scroll to Top