ಕೆಲಸಕ್ಕೆ ಹೋಗಿ ಬರುವುದಾಗಿ ತೆರಳಿಗ ಮಗ ಮರಳಿ ಬರಲೆ ಇಲ್ಲಾ ನಾಪತ್ತೆ: ಪೊಲೀಸ್ ಠಾಣೆಗೆ ತೆರಳಿದ್ರೆ ಸಿಕ್ತು ಪುತ್ರನ ಶವದ ಚಿತ್ರ

Kalaburagi:ಮಂಗಳವಾರ ಬೆಳಗ್ಗೆ ತಮ್ಮ ಊರಿಗೆ ಹೋಗಿ ಸಂಜೆಯವರೆಗೂ ಮನೆಯವರ ಜೊತೆ ಕಾಲ ಕಳೆದಿದ್ದಾನೆ. ಬಳಿಕ ಸಂಜೆ ತನ್ನ ಸಹೋದರನ ಬೈಕ್ (Bike) ಮೇಲೆ ಕಲಬುರಗಿಗೆ ಬಂದಿದ್ದಾನೆ. ಮಗ ಸೇಫ್ ಆಗಿ ಹೋಗಿದ್ದಾನ ಅಂತಾ ವಿಚಾರಿಸೋದಕ್ಕೆ ಹೆತ್ತವರು ಮಗನಿಗೆ ಕಾಲ್ (Call) ಮಾಡಿದ್ದಾರೆ. ಆದ್ರೆ ಮಗನ ಮೊಬೈಲ್ ಸ್ವಿಚ್ ಆಫ್ (Mobile Switch Off) ಆಗಿತ್ತು

ಈ ಯುವಕ ಫೋಟೋಗ್ರಾಫರ್ (Photographer) ಆಗಿ ಕಳೆದ ನಾಲ್ಕೈದು ವರ್ಷಗಳಿಂದ‌ ಕಲಬುರಗಿ(Kalaburagi)ಯಲ್ಲಿ ಕೆಲಸ ಮಾಡ್ತಿದ್ದನು. ವಾರಕ್ಕೆ ಒಂದೆರೆಡು ಬಾರಿ ಊರಿಗೆ ಹೋಗಿ ಹೆತ್ತವರನ್ನ ಭೇಟಿಯಾಗಿ ಬರ್ತಿದ್ದನು. ಅದರಂತೆ ಮಂಗಳವಾರ ಬೆಳಗ್ಗೆ ತಮ್ಮ ಊರಿಗೆ ಹೋಗಿ ಸಂಜೆಯವರೆಗೂ ಮನೆಯವರ ಜೊತೆ ಕಾಲ ಕಳೆದಿದ್ದಾನೆ. ಬಳಿಕ ಸಂಜೆ ತನ್ನ ಸಹೋದರನ ಬೈಕ್ (Bike) ಮೇಲೆ ಕಲಬುರಗಿಗೆ ಬಂದಿದ್ದಾನೆ. ಮಗ ಸೇಫ್ ಆಗಿ ಹೋಗಿದ್ದಾನ ಅಂತಾ ವಿಚಾರಿಸೋದಕ್ಕೆ ಹೆತ್ತವರು ಮಗನಿಗೆ ಕಾಲ್ (Call) ಮಾಡಿದ್ದಾರೆ. ಆದ್ರೆ ಮಗನ ಮೊಬೈಲ್ ಸ್ವಿಚ್ ಆಫ್ (Mobile Switch Off) ಆಗಿತ್ತು. ಸರಿ ಅಂತಾ ಸುಮ್ಮನಾಗಿದ್ದ ಪೊಷಕರು ಮರುದಿನ ಬೆಳಗ್ಗೆ ಮತ್ತೆ ಕಾಲ್ ಮಾಡಿದ್ದಾರೆ ಆಗಲು ಮೊಬೈಲ್ ಸ್ವಿಚ್ ಆಫ್. ಎರಡ್ಮೂರು ದಿನಗಳವರೆಗೆ ಹೆತ್ತವರ ಸಂಪರ್ಕಕ್ಕೆ ಬಾರದೆ ಇದ್ದಾಗ ಅನುಮಾನ ಬಂದ‌ ಪೋಷಕರು ದೂರು ಕೋಡೊಕೆ ಹೋಗಿದ್ದಾರೆ. ಆದ್ರೆ ಅಷ್ಟರಲ್ಲೇ ಹೆತ್ತವರ ಕಿವಿಗೆ ಮಗ ಬರ್ಬರವಾಗಿ ಕೊಲೆಯಾಗಿರೋ ಸುದ್ದಿ ಬಂದು ಅಪ್ಪ

ಕೊಲೆಯಾಗಿರುವ ಯುವಕನ ಹೆಸರು ಶಿವಕುಮಾರ್. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಶ್ರೀಚಂದ ಗ್ರಾಮದ ನಿವಾಸಿ. ಶಿವಕುಮಾರ್ ಕಳೆದ ನಾಲ್ಕೈದು ವರ್ಷಗಳಿಂದ ಫೋಟೊಗ್ರಾಫರ್ ಆಗಿ ಕೆಲಸ ಮಾಡಿಕೊಂಡು ಕಲಬುರಗಿಯ ಕನಕನಗರದಲ್ಲಿ ಒಂಟಿಯಾಗಿ ವಾಸವಿದ್ದನು.

ವಾರಕ್ಕೆ ಒಂದೆರೆಡು ಬಾರಿಯಂತೆ ಶ್ರಿಚಂದ ಗ್ರಾಮಕ್ಕೆ ಹೋಗಿ ಹೆತ್ತವರನ್ನ ಭೇಟಿಯಾಗಿ ಬರ್ತಿದ್ದನು. ಮಂಗಳವಾರ ಸಂಜೆ ಹೋದ ಮಗ ಎರಡ್ಮೂರು ದಿನವಾದ್ರೂ ಸಂಪರ್ಕಕ್ಕೆ ಸಿಗದಿದ್ದಾಗ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದರು. ಆಗ ಬಬಲಾದ ಮತ್ತು ಸಾವಳಗಿ ಮಾರ್ಗ ಮಧ್ಯೆ ಪತ್ತೆಯಾಗಿದ್ದ ಶವದ ಫೋಟೋ ತೋರಿಸಿದ್ದಾರೆ. ಫೋಟೋ ನೋಡಿದ ಪೋಷಕರು ಶವವನ್ನು ಗುರುತಿಸಿದ್ದಾರೆ.

ಮಗನನ್ನು ಯಾರು ಕೊಲೆ ಮಾಡಿದ್ದು? ಯಾಕೆ ಎಂಬುದರ ಬಗ್ಗೆ ಶಿವಕುಮಾರ್ ಪೋಷಕರು ಪ್ರಶ್ನೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಷಕರು ತನಿಖೆ ನಡೆಸುತ್ತಿದ್ದಾರೆ.

WhatsApp
Facebook
Telegram
error: Content is protected !!
Scroll to Top