ಭಟ್ಕಳ ತಾಲೂಕಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ: ಮತದಾರರು ಇಂದು ಜಾಗ್ರತರಾಗ ಬೇಕಾಗಿದೆ : ಪ್ರಧಾನ ಸಿವಿಲ್‌ ನ್ಯಾಯಾಧೀಶ ಪವಾಜ್‌ ಪಿ ಎ

ಭಟ್ಕಳ: ತಾಲೂಕಿನ ಮಿನಿ ವಿಧಾನಸೌಧ ಎರಡನೆ ಮಹಡಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಭಟ್ಕಳ ತಾಲೂಕಿನ ಜೆ ಎಮ್‌ ಎಪ್‌ ಸಿ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಪವಾಜ್‌ ಪಿ ಎ ಅವರು ಉದ್ಗಾಟಿಸಿದರು.

ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು ನಾನು ಈ ಹಿಂದೆಯು ಕೂಡಾ ಹಲವಾರು ಬಾರಿ ಮತದಾನದ ಜಾಗ್ರತಿ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದೆನೆ ಈ ಮತದಾನ ತುಂಬ ಮಹತ್ವ ಪೂರ್ಣವಾಗಿರುತ್ತದೆ. ನಾವು ನಮ್ಮ ಜನಪ್ರತಿನಿಧಿಗಳನ್ನು ಆರಿಸುವಾಗ ಸಮರ್ಥರನ್ನೇ ಆರಿಸಬೇಕಾಗುತ್ತದೆ. ಸಮರ್ಥ ಜನಪ್ರತಿನಿಧಿಗಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಮತದಾರರು ಜನಪ್ರತಿನಿಧಿಗಳನ್ನು ಆರಿಸುವಲ್ಲಿ ತುಂಬಾ ಎಚ್ಚರವಹಿಸಬೇಕು. ಮತದಾರರು ಜಾಗೃತರಾಗಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ಸಹಾಯಕ ಆಯುಕ್ತರಾದ ಮಮತಾ ದೇವಿ ಮಾತನಾಡಿ ಇಂದು ಪ್ರತಿಯೋಬ್ಬರು ಮತದಾನದ ಗಂಭೀರತೆಯನ್ನು ಅರಿತುಕೊಳ್ಳಬೇಕಾಗಿದೆ. ಮತದಾನ ನಮಗೆ ಸಂವಿಧಾನ ಕೊಟ್ಟ ಒಂದು ಹಕ್ಕಾಗಿರುತ್ತದೆ. ಈ ಹಕ್ಕನ್ನು ನಾವೆಲ್ಲರೂ ಚಲಾಯಿಸುವುದು ನಮ್ಮ ಕರ್ತವ್ಯ. ಉತ್ತಮ ಜನಪ್ರತಿನಿಧಿಗಳೇ ದೇಶದ ಭಧ್ರ ಬುನಾದಿ.

ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಹಾಗೂ ಕಾರ್ಯಕ್ರಮದಲ್ಲಿ ಅತ್ಯುತ್ತಮ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಹಾಗೂ ರಾಷ್ಟೀಯ ಮತದಾರರ ದಿನಾಚರಣೆಯ ನಿಮಿತ ರಸಪ್ರಶ್ನೆ ಸ್ಪರ್ಧೆ, ಕನ್ನಡ ಮತ್ತು ಇಂಗ್ಲೀಷ್‌ ಪ್ರಬಂಧ ಸ್ಪರ್ಧೆ ಹಾಗೂ ಬಿತ್ತಿಚಿತ್ರ ತಯಾರಿಕಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕಾ ತಹಶೀಲ್ದಾರರು ಸ್ವಾಗತಕೋರಿದರೆ ತಾಲೂಕಾ ಪಂಚಾಯತ್‌ ಕಾರ್ಯನಿರ್ವಹಣಾ ಅಧಿಕಾರಿ ವಂದನಾರ್ಪಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ತಾಲೂಕಿನ ವಿವಿಧ ಅಧಿಕಾರಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top