Garuda Purana: ನೀವು ಇಲ್ಲಿ ಈ ತಪ್ಪು ಮಾಡಿದ್ರೆ ನರಕದಲ್ಲಿ ಅನುಭವಿಸಬೇಕಾಗುತ್ತೆ ಘೋರ ಶಿಕ್ಷೆ..!

Hindu religion: ಗರುಡ ಪುರಾಣ ಮನುಷ್ಯ ಬದುಕಿದ್ದಾಗ ಆತ ಮಾಡುವ ಕರ್ಮಗಳು ಆತ ಸತ್ತ ನಂತರ ಯಾವ ರೀತಿಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿವರಣೆ ನೀಡುತ್ತದೆ.. ಅಲ್ಲದೇ ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯ ದೇಹವನ್ನು ಆತ್ಮ ತೊರೆದ ನಂತರ ಆ ವ್ಯಕ್ತಿಯ ಆತ್ಮ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತದೆ

ಗರುಡ ಪುರಾಣ

ಗರುಡ ಪುರಾಣ

ಹಿಂದೂ ಧರ್ಮದಲ್ಲಿರುವ(Hindu Religion) 18 ಪುರಾಣಗಳಲ್ಲಿ(Mythology) ಒಂದಾದ ಗರುಡ ಪುರಾಣಕ್ಕೂ(Garuda Purana) ವಿಶೇಷ ಮಹತ್ವವಿದೆ. ಜೀವನವನ್ನು(Life) ನಡೆಸಲು ಸರಿಯಾದ ಮಾರ್ಗಗಳ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಗರುಡ ಪುರಾಣದಲ್ಲಿನ ನಿಯಮಗಳನ್ನು(Rules) ಅನುಸರಿಸುವ ಮೂಲಕ ನಾವು ನಮ್ಮ ಜೀವನದ ಎಲ್ಲಾ ತೊಂದರೆಗಳನ್ನು(Problem) ತೆಗೆದುಹಾಕಬಹುದು. ಭಗವಂತ ವಿಷ್ಣು(Lord Vishnu) ತನ್ನ ವಾಹನವಾದ ಗರುಡನಿಗೆ ಎದುರಾಗುವ ಎಲ್ಲ ಸವಾಲುಗಳು, ಜಿಜ್ಞಾಸೆಗಳನ್ನು ಪರಿಹರಿಸುತ್ತಾ, ಸವಿಸ್ತಾರ ರೂಪದಲ್ಲಿ ಉತ್ತರಗಳನ್ನು ನೀಡುವುದೇ ಗರುಡ ಪುರಾಣ. ಗರುಡ ಪುರಾಣ ಎಂತಹ ಮಹಾಪುರಾಣ ಅಂದರೆ ಅದರಲ್ಲಿ ಬರುವ ಎಲ್ಲ ಪ್ರಸಂಗಗಳು ಮನುಷ್ಯನ ಉನ್ನತಿಗಾಗಿ ಪ್ರೇರಣದಾಯಕವಾಗಿದೆ. ಗರುಡ ಪುರಾಣದಲ್ಲಿನ ಎಲ್ಲ ನೀತಿಗಳನ್ನು ಚಾಚೂತಪ್ಪದೆ ಪಾಲಿಸಿದರೆ ಮನುಷ್ಯರ ಜೀವನ ಉತ್ತುಂಗದತ್ತ ಸಾಗುತ್ತದೆ. ಇದರಲ್ಲಿ ಕೇವಲ ಮುನುಷ್ಯನ ಜೀವಿತಾವಧಿಯಲ್ಲಿನ ಔನ್ನತ್ಯ ಪ್ರಾಪ್ತಿಯಷ್ಟೇ ಅಲ್ಲ; ಬದುಕಿನ ನಂತರವೂ ಅಂದರೆ ಮರಣ ಪ್ರಾಪ್ತಿಯಾದಾಗ ಸದ್ಗತಿ ದೊರೆಯಲೂ ಸಹ ಈ ಗರುಡ ಪುರಾಣದ ನೀತಿಗಳು ಅಕ್ಷರಶಃ ಮಾರ್ಗದರ್ಶಕವಾಗುತ್ತವೆ.

ಮನುಷ್ಯನ ಪಾಪ ಕರ್ಮಗಳ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖ

ಅದ್ರಲ್ಲೂ ಗರುಡ ಪುರಾಣ ಮನುಷ್ಯ ಬದುಕಿದ್ದಾಗ ಆತ ಮಾಡುವ ಕರ್ಮಗಳು ಆತ ಸತ್ತ ನಂತರ ಯಾವ ರೀತಿಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿವರಣೆ ನೀಡುತ್ತದೆ.. ಅಲ್ಲದೇ ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯ ದೇಹವನ್ನು ಆತ್ಮ ತೊರೆದ ನಂತರ ಆ ವ್ಯಕ್ತಿಯ ಆತ್ಮ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತದೆ. ಅಲ್ಲಿ ಮನುಷ್ಯ ಬದುಕಿದ್ದಾಗ ಯಾವ ಯಾವ ಪಾಪಕರ್ಮ ಮಾಡಿದ್ದಾನೆ ಎಷ್ಟು ಪುಣ್ಯದ ಕೆಲಸ ಮಾಡಿದ್ದಾರೆ ಎಂಬುದರ ಪ್ರಕಾರ ಆತನಿಗೆ ಹಿಂಸೆ ಹಾಗೂ ಆತನ ಸದ್ಗುಣಗಳಿಗೆ ಉತ್ತಮ ಸನ್ಮಾನ ಮಾಡಲಾಗುತ್ತದೆ.. ಆಗಿದ್ರೆ ಗರುಡ ಪುರಾಣದ ಪ್ರಕಾರ ಮನುಷ್ಯ ಬದುಕಿದ್ದಾಗ ಮಾಡುವ ತಪ್ಪುಗಳು ಆದನಂತರ ಯಾವ ರೀತಿಯ ಶಿಕ್ಷಗೆ ಒಳಪಡುತ್ತವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ..

ಹೆಣ್ಣುಮಕ್ಕಳಿಗೆ ಶೋಷಣೆ ಮಾಡುವವರಿಗೆ ಕಠಿಣ ಶಿಕ್ಷೆ
“ಗರುಡ ಪುರಾಣದ ಪ್ರಕಾರ ಯಾವ ವ್ಯಕ್ತಿಯು ಬದುಕಿದ್ದಾಗ ಕನ್ಯೆ ಅಥವಾ ಮಹಿಳೆಯರ ಶೋಷಣೆಯ ಮಾಡುತ್ತಾನೋ ವ್ಯಕ್ತಿಗೆ ಮುಂದಿನ ಜೀವನ ಎಂಬುದು ಬಹಳ ಕಷ್ಟಕರವಾಗಿರುತ್ತದೆ.. ಆತ ಸತ್ತ ನಂತರ ಆತ್ಮ ವಾಗಿದ್ದ ವೇಳೆ ಹಲವಾರು ವರ್ಷಗಳ ಕಾಲ ನರಕ ಯಾತನೆ ಅನುಭವಿಸಿ ಮತ್ತೆ ಮರುಹುಟ್ಟು ಪಡೆದಾಗ ಮನುಷ್ಯನಾಗಿ ಜನ್ಮತಾಳುವ ಬದಲು ಡ್ರ್ಯಾಗನ್ ರೂಪದಲ್ಲಿ ಜನಿಸುತ್ತಾನೆ.

ಗುರುವಿಗೆ ಅಪಮಾನ ಮಾಡಿದವನಿಗೂ ಕಾದಿದೆ ಘೋರ ಶಿಕ್ಷೆ

ಗರುಡ ಪುರಾಣದ ಪ್ರಕಾರ ಯಾರು ಗುರುವಿಗೆ ಅವಮಾನ ಮಾಡುತ್ತಾನೋ ಅಥವಾ ಗುರುವಿನ ಹೆಂಡತಿಯನ್ನು ಕೆಟ್ಟ ಕಣ್ಣುಗಳಿಂದ ನೋಡುತ್ತಾನೋ ಅಂಥವರಿಗೂ ಸಹ ನರಕದಲ್ಲಿ ಘೋರ ಶಿಕ್ಷೆ ಕಾದಿದೆ.. ನರಕದಲ್ಲಿ ಭೀಕರ ಸಂಕಟ ಅನುಭವಿಸಿದ ನಂತರ ಗುರುವಿಗೆ ಅವಮಾನ ಮಾಡಿದ ವ್ಯಕ್ತಿ ಭೂಮಿಯಲ್ಲಿ ಮತ್ತೊಮ್ಮೆ ಜನ್ಮ ತಾಳುತ್ತಾನೆ..ಉಸರವಳ್ಳಿ ಆರೋಪದಲ್ಲಿ ಜನಿಸುವಾತ ಮತ್ತೆ ಕಷ್ಟಪಡಬೇಕಾಗುತ್ತದೆ.ಇನ್ನು ಮತ್ತೊಂದೆಡೆ ತನ್ನ ಸ್ನೇಹಿತನ ಹೆಂಡತಿಯನ್ನು ದೈಹಿಕವಾಗಿ ನಿಂದಿಸುವ ವ್ಯಕ್ತಿಯ ಮುಂದಿನ ಜನ್ಮವು ನಾಯಿಯದ್ದಾಗಿರುತ್ತದೆ.

ಮಹಿಳೆ ಅಪಹರಿಸಿದರೆ ಬ್ರಹ್ಮರಾಕ್ಷಸನುವಾಗುವ ಶಿಕ್ಷೆ

ಇನ್ನು ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವಂತೆ ಯಾವ ವ್ಯಕ್ತಿ ಪರಸ್ತ್ರೀಯನ್ನು ಅಪಹರಣ ಮಾಡಿ ನಿಂದನೆಯನ್ನು ಮಾಡುತ್ತಾನೋ ಅಂತವನಿಗೆ ನರಕದಲ್ಲಿ ಸಾಕಷ್ಟು ಘೋರ ಶಿಕ್ಷೆ ಕಾದಿದೆ.. ನರಕದಲ್ಲಿ ನರಕ ಯಾತನೆಗಳನ್ನು ಅನುಭವಿಸಿದ ನಂತರ ಭೂಮಿಯ ಮೇಲೆ ಬ್ರಹ್ಮರಾಕ್ಷಸನ ರೂಪದಲ್ಲಿ ಮಹಿಳೆಯ ಅಪಹರಣ ಮಾಡಿದ ವ್ಯಕ್ತಿ ಬದುಕಬೇಕಾದ ಪರಿಸ್ಥಿತಿ ಬರುತ್ತದೆ.

ಪರಸ್ತ್ರೀ ಅಥವಾ ಪರಪುರುಷ ಸಂಘ ಮಾಡಿದವರಿಗೂ ಘೋರ ಶಿಕ್ಷೆ

ಗರುಡ ಪುರಾಣದಲ್ಲಿ ಭಗವಾನ್ ವಿಷ್ಣು ತನ್ನ ಗರುಡನಿಗೆ ಹೇಳಿರುವ ಪ್ರಕಾರ ಯಾವ ವ್ಯಕ್ತಿ ನನ್ನ ಗಂಡ ಅಥವಾ ಹೆಂಡತಿ ಯನ್ನು ಹೊರತುಪಡಿಸಿ ಪರರೊಂದಿಗೆ ಸಂಬಂಧ ಬೆಳೆಸುತ್ತಾರೋ ಅಂಥವರಿಗೂ ಕೂಡ ನರಕದಲ್ಲಿ ಸಾಕಷ್ಟು ಉಗ್ರವಾದ ಶಿಕ್ಷೆ ಕಾದಿದೆ… ಇದರ ನಂತರ ಮುಂದಿನ ಜನ್ಮದಲ್ಲಿ ಇಂತಹವರು ಹಾವು, ಬಾವಲಿಗಳು ಅಥವಾ ಊಸರವಳ್ಳಿಗಳ ರೂಪದಲ್ಲಿ ಜನ್ಮತಾಳಿ ಸಂಕಟಗಳನ್ನು ಎದುರಿಸಬೇಕಾಗುತ್ತದೆ

WhatsApp
Facebook
Telegram
error: Content is protected !!
Scroll to Top