Fake Job: ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ಪಂಗನಾಮ ಹಾಕಿದ ಭೂಪ ಪೊಲೀಸರ ವಶಕ್ಕೆ

Fake Promise For Job: ಇವನ ಮಾತನ್ನು ನಂಬಿ ಲಕ್ಷಾಂತರ ರೂಪಾಯಿ ನೀಡಿದವರು ದೂರು ನೀಡಿದ್ದ ಕಾರಣ  ಈಗ ವಿಧಾನಸೌಧ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಕೆಲಸ (Job) ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಕೆಎಸ್​ ಆರ್​ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿಯನ್ನು ಬಂಧಿಸಲಾಗಿತ್ತು. ಈ ಬೆನ್ನಲ್ಲೆ ಇದೀಗ ಗ್ರಾಮಲೆಕ್ಕಿಗ (Village Accountant) ಕೆಲಸಕೊಡಿಸುವುದಾಗಿನಂಬಿಸಿವಂಚಿಸಿದಪ್ರಕರಣಕ್ಕೆಸಂಬಂಧಿಸಿದಂತೆಆರೋಪಿಈರಣ್ಣನನ್ನುವಿಧಾನಸೌಧಪೊಲೀಸರುವಶಕ್ಕೆ ಪಡೆದಿದ್ದಾರೆ.  

ಉತ್ತರ ಕರ್ನಾಟಕದವರನ್ನೇ ಟಾರ್ಗೆಟ್​ ಮಾಡ್ತಿದ್ದ

ಉತ್ತರ ಕರ್ನಾಟಕ ಮೂಲದ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಆರೋಪಿ ಹಣ ಪಡೆದು ವಂಚನೆ ಮಾಡುತ್ತಿದ್ದ ಈರಣ್ಣ ತುಮಕೂರು ಜಿಲ್ಲೆಯ ಕಂಪನಹಳ್ಳಿ ನಿವಾಸಿಯಾಗಿದ್ದು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಲ್ಲಿ ನೌಕರ ಅಂತ ಜನರಿಗೆ ಪರಿಚಯ ಮಾಡಿಕೊಂಡು ಜನರನ್ನು ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.

ಆರೋಪಿ ಈರಣ್ಣ ವಿಧಾನಸೌಧದ ಬಳಿಯೇ ಕೂಳಿತು ಕೆಲಸ ಕೇಳಿ ಬರುತ್ತಿದ್ದ ಅಭ್ಯರ್ಥಿಗಳನ್ನ ತನ್ನ ಜಾಲದಲ್ಲಿ ಸಿಲುಕಿಸಿಕೊಳ್ಳುತ್ತಿದ್ದ, ಗ್ರಾಮಲೆಕ್ಕಿಗನ ಕೆಲಸ ಕೊಡಿಸ್ತೀನಿ, ಅದಕ್ಕಾಗಿ ಪಿಯುಸಿಯಲ್ಲಿ ಹೆಚ್ಚು ಮಾರ್ಕ್ಸ್​ ಗಳಿಸಿರಬೇಕು. ಹೀಗಾಗಿ ನಕಲಿ ಮಾರ್ಕ್ಸ್​ ಕಾರ್ಡ್​ ತಯಾರಿಸಿಕೊಳ್ಳಿ ಎಂದು ಹೇಳಿ ನಂಬಿಸುತ್ತಿದ್ದ.

WhatsApp
Facebook
Telegram
error: Content is protected !!
Scroll to Top