ಮುರ್ಡೆಶ್ವರ ಬ್ರಹ್ಮರಥೋತ್ಸಕ್ಕೆ ಕ್ಷಣಗಣನೆ: 200 ಜನರಿಗಷ್ಟೆ ರಥೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಟ ತಾಲೂಕಾಡಳಿತ

ಭಟ್ಕಳ : ತಾಲೂಕಿನಲ್ಲಿ ಕೊರೊನಾ ಕಾರಣದಿಂದ ಮುರ್ಡೆಶ್ವರ ರಥೋತ್ಸಕ್ಕೆ ಬ್ರೇಕ್‌ ಹಾಕಲಾಗಿತ್ತು ಆದರೆ ಭಕ್ತಾಧಿಗಳ ಬಾವನೆಯನ್ನು ಗಣನೆಗೆ ತೆಗೆದುಕೊಂಡು 200 ಜನ ಭಕ್ತಾದಿಗಳು ಪಾಸಿನೊಂದಿಗೆ ಪಾಲ್ಗೋಳ್ಳಬಹುದೆಂದು ತಾಲೂಕ ತಹಶಿಲ್ದಾರ್‌ ರವಿಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ತಾಲೂಕಿನ ಮುರ್ಡೆಶ್ವರ ಬ್ರಹ್ಮರಥೋತ್ಸವಕ್ಕೆ ಕೊರೊನಾ ಕಾರ್ಮೋಡವೆ ಕವಿದಿತ್ತು ಎಂದು ಹೆಳಬಹುದಾಗಿತ್ತೆನೋ ಆದರೆ ಶ್ರೀ ದೇವರ ಅಭಯ ಹಸ್ತವೋ ಭಕ್ತಾಧಿಗಳ ಅಪೆಕ್ಷೆಯೋ ಎಂಬಂತೆ ಮುರ್ಡೇಶ್ವರ ಬ್ರಹ್ಮರಥೋತ್ಸಕ್ಕೆ ಕೋನೆಗೂ ಗ್ರಿನ್‌ ಸಿಗ್ನಲ್‌ ದೊರೆತಿದೆ ತಾಲೂಕಿ ತಹಶಿಲ್ದಾರರಾದ ರವಿಚಂದ್ರರವರು ಪ್ರಕಟಣೆಯಲ್ಲಿ ಜನವರಿ ೨೦ ರಂದು ನಡೆಯಲಿರುವ ಬ್ರಹ್ಮರಥೋತ್ಸಕ್ಕೆ ಪಾಸ್‌ ಹೊಂದಿರುವ 200 ಜನರಿಗೆ ಅವಕಾಶ ಕಲ್ಪಿಸಲಾಗುವುದ್ದು 200 ಜನರನ್ನು ಬಿಟ್ಟು ಬೇರಾರಿಗೂ ಅವಕಾಶವಿಲ್ಲಾ ರಥೋತ್ಸವ ಕೊರೊನಾ ನಿಯಮಾವಳಿಯಲ್ಲೆ ನಡೆಯಲಿದೆ ಸಾಂಪ್ರದಾಯಿಯ ವಿದಿವಿದಾಗಳೆಲ್ಲವು ನಡೆಸಲು ಅವಕಾಶವಿದೆ 200 ಜನರು ಆರ್‌ ಟಿ ಪಿ‌ ಸಿ ಆರ್ ನೆಗೆಟಿವ್‌ ರಿಪೋರ್ಟ ಹೊಂದಿರ ಬೇಕಾಗುತ್ತದೆ ಇನ್ನು ಭಕ್ತಾಧಿಗಳು ಮನೆಯಲ್ಲೆ ಕುಳಿತು ರಥೋತ್ಸವವನ್ನು ವಿಕ್ಷಿಸ ಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಒಟ್ಟಾರೆ ರಥೋತ್ಸಕ್ಕೆ ಬ್ರೇಕ್‌ ಬಿದ್ದಿದೆ ಎಂದುಕೊಂಡಿದ್ದ ಭಕ್ತಾಧಿಗಳು ರಥೋತ್ಸವ ನಡೆಯಲಿದೆ ಎಂಬ ಸುದ್ದಿಯನ್ನು ತಿಳಿದು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ

WhatsApp
Facebook
Telegram
error: Content is protected !!
Scroll to Top