Weekend Curfew: ಮದ್ಯಪ್ರಿಯರಿಗೆ ಶಾಕ್- ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ

Liquor: ಇಂದು 8 ಗಂಟೆಯಿಂದ ಮದ್ಯ ಮಾರಾಟ ಬಂದ್ ಆಗಲಿದೆ. ಅಲ್ಲದೆ ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಪಾರ್ಸೆಲ್ ಗೂ ಅನುಮತಿ ಇಲ್ಲ. ಕದ್ದು ಮುಚ್ಚಿ ಮಾರಾಟ ಮಾಡುವ ಬಾರ್ ಗಳಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಸಜ್ಜಾಗಿದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಆದೇಶ ಮಾಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ(State) ದಿನದಿಂದ ದಿನಕ್ಕೆ ಕೊರೊನಾ(Corona) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು 5000 ಗಡಿ ತಲುಪಿದೆ. ಹೀಗಾಗಿ ರಾಜ್ಯ ಸರ್ಕಾರ(State Government) ಆರಂಭದಲ್ಲಿ ಸೋಂಕು ನಿಯಂತ್ರಣ ಮಾಡಲು ವಾರಂತ್ಯ ಕರ್ಫ್ಯೂ(Weekend Curfew) ಜಾರಿ ಮಾಡಿದೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಜನರ ಓಡಾಟ ಹೆಚ್ಚಳವಾಗಿರುವುದರಿಂದ ಒಮಿಕ್ರೋನ್(Omicron) ಹಾಗೂ ಕರೋನಾ(Corona) ಸೋಂಕು ಹೆಚ್ಚಾಗದಂತೆ ತಡೆಯಲು ಇಂದು ರಾತ್ರಿಯಿಂದಲೇ ಸಾಕಷ್ಟು ಭದ್ರತೆಯನ್ನು ಮಾಡಲಾಗುತ್ತಿದೆ.. ಇದರ ನಡುವೆ ಮದ್ಯಪ್ರಿಯರಿಗೆ ಶಾಕ್ ನೀಡಿರುವ ಸರ್ಕಾರ ಇಂದು ರಾತ್ರಿಯಿಂದಲೇ ಮಧ್ಯಮಾರಾಟ ಬಂದ್ ಮಾಡಲಿದೆ.

ಇಂದು 8 ಗಂಟೆಯಿಂದಲೇ ಮದ್ಯಮಾರಾಟ ಬಂದ್

ವೀಕೆಂಡ್ ಕರ್ಫ್ಯೂ ವೇಳೆ ಜನ ದಟ್ಟಣೆ ತಪ್ಪಿಸಲು ಅದರಲ್ಲೂ ಮದ್ಯಪ್ರಿಯರು ಹಾವಳಿ ಕಡಿಮೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಇಂದು 8 ಗಂಟೆಯಿಂದ ಮದ್ಯ ಮಾರಾಟ ಬಂದ್ ಆಗಲಿದೆ. ಅಲ್ಲದೆ ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಪಾರ್ಸೆಲ್ ಗೂ ಅನುಮತಿ ಇಲ್ಲ. ಕದ್ದು ಮುಚ್ಚಿ ಮಾರಾಟ ಮಾಡುವ ಬಾರ್ ಗಳಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಸಜ್ಜಾಗಿದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಆದೇಶ ಮಾಡಿದ್ದಾರೆ.ಇನ್ನು ವೀಕೆಂಡ್ ಕರ್ಫ್ಯೂ ವೇಳೆ ಕದ್ದುಮುಚ್ಚಿ ಮದ್ಯ ಮಾರಾಟ ಮಾಡಲು ಮುಂದಾದರೆ ಅಂತಹ ಬಾರ್ ಗಳ ಲೈಸೆನ್ಸ್ ರದ್ದು ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಸೋಮವಾರ ಮುಂಜಾನೆವರೆಗೂ ಎಲ್ಲವೂ ಬಂದ್

ಇನ್ನು ಸೋಮವಾರ ಮುಂಜಾನೆವರೆಗೂ ಬಾರ್, ರೆಸ್ಟೋರೆಂಟ್, ಎಂಎಸ್ ಐಎಲ್ ಎಲ್ಲಾವೂ ಬಂದ್ ಆಗಿರುತ್ತವೆ. ಸೋಮವಾರದ ಬಳಿಕ ಬಾರ್ ಪಬ್, ರೆಸ್ಟೋರೆಂಟ್ಗಳಲ್ಲಿ ಸಿಟ್ಟಿಂಗ್ ಕೆಪಾಸಿಟಿ ಮೈಂಟೇನ್ ಮಾಡಬೇಕು. ಜೊತೆಗೆ ಬಾರ್, ಪಬ್ ಸಿಬ್ಬಂದಿಗೆ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿರುತ್ತದೆ.

ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ ಗೋಪಾಲಯ್ಯ

ಇನ್ನು ವೀಕೆಂಡ್ ಕರ್ಫ್ಯೂ ವೇಳೆಯಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅನೇಕ ಗೊಂದಲಗಳು ಇತ್ತು. ಹೀಗಾಗಿಯೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಚಿವರಾದ ಗೋಪಾಲಯ್ಯ
ಇಂದು ರಾತ್ರಿ ಎಂಟು ಗಂಟೆಯಿಂದ ಸೋಮವಾರ ಬೆಳಗಿನವರೆಗೆ ಯಾವುದೇ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬಾರ್ ಮಾಲಿಕರು ಮನವಿ ಮಾಡಿದರು. ಆದರೆ ಅನಿವಾರ್ಯವಾಗಿ ಜನರ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಇಂದು ರಾತ್ರಿ 8 ಗಂಟೆಯಿಂದ ಸಂಪೂರ್ಣವಾಗಿ ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್​ ಮಾಡಲಾಗುತ್ತದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ.

ಉಳಿದ ದಿನಗಳಲ್ಲಿ ಬಾರ್ ನಲ್ಲಿ ಶೇ. 50 ರಷ್ಟು ಮಂದಿಗೆ ಮಾತ್ರ ಅವಕಾಶ

ಇನ್ನು ಉಳಿದ ದಿನಗಳಲ್ಲಿ ಬಾರ್ ಗಳಲ್ಲಿ ಕುಳಿತುಕೊಳ್ಳುವ ಸ್ಥಳಗಳಲ್ಲಿ ಶೇ 50 ಮಾತ್ರ ಅವಕಾಶವಿದೆ. 6 ಅಡಿ ಅಂತರ ಕಾಪಾಡಿಕೊಳ್ಳಬೇಕು.ನೌಕರರು ಕಡ್ಡಾಯವಾಗಿ ಮಾಸ್ಕ್ ಹಾಗು ಗ್ಲೌಸ್ ಹಾಕಿಕೊಳ್ಳಬೇಕು.ಹೋಟೆಲ್ ಗಳಲ್ಲಿ ಪಾರ್ಸೆಲ್ ಮತ್ತು ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ

ಈ ಹಿಂದಿನ ಆದೇಶ ಮಾರ್ಪಾಡು ಮಾಡಿದ ಸರ್ಕಾರ

ಇನ್ನು ವೀಕೆಂಡ್ ಕರ್ಫ್ಯೂ ವೇಳೆ ಮದ್ಯ ಮಾರಾಟ ಮಾಡುವ ವಿಚಾರದಲ್ಲಿ ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಪ್ರಿಯರಿಗೆ ಎಣ್ಣೆ ಸಿಗಲ್ಲ ಎಂದು ಸರ್ಕಾರ ಹೇಳಿತ್ತು. ಎಣ್ಣೆ ಅಂಗಡಿ ಬಂದ್ ಮಾಡುವಂತೆ ಅಬಕಾರಿ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಆದರೆ ಬಳಿಕ Weekend Curfew ವೇಳೆ ಶನಿವಾರ ಭಾನುವಾರ ಮದ್ಯ ಮಾರಾಟ ಜಿಲ್ಲಾಧಿಕಾರಿ ವಿವೇಚನೆಗೆ ಬಿಟ್ಟಿದ್ದು ಎಂದು ಸರ್ಕಾರ ಹೇಳಿತ್ತು.. ಆದರೆ ಈಗ ಕುದ್ದು ಅಬಕಾರಿ ಸಚಿವರು ವಿಕೆಟ್ ಕಳಿಸು ವೇಳೆ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top