Mandya: ಶಾಲೆಗೆ ಮೊಬೈಲ್ ತಂದ ತಪ್ಪಿಗೆ ಬಾಲಕಿಯ ಬಟ್ಟೆ ಬಿಚ್ಚಿಸಿದ ಮುಖ್ಯ ಶಿಕ್ಷಕಿ?

ಸರ್ಕಾರಿ ಶಾಲೆಯ ಎಂಟನೇ ತರಗತಿ ಓದುತ್ತಿರುವ ಬಾಲಕಿ ಕಳೆದ ಹದಿನೈದು ದಿನಗಳ ಹಿಂದೆ ಶಾಲೆಗೆ ಮೊಬೈಲ್ ಒಂದನ್ನ ತೆಗೆದುಕೊಂಡು ಹೋಗಿದ್ದಳಂತೆ. ಇದೇ ಕಾರಣಕ್ಕೆ ಶಿಕ್ಷಕಿ ವಿದ್ಯಾರ್ಥಿನಿ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಗಂಭೀರ ಆರೋಪಗಳು ಕೇಳಿ ಬಂದಿವೆ.

ಮ್ಮ ದೇಶದಲ್ಲಿ ಗುರುಗಳಿಗೆ (Teachers) ದೈವದ ಸ್ಥಾನವನ್ನ ಕೊಡಲಾಗತ್ತೆ. ಆದ್ರೆ ಕೆಲವೊಬ್ಬರು ಆ ಸ್ಥಾನಕ್ಕೆ ಕಳಂಕ ತರುವ ರೀತಿ ನಡೆದುಕೊಳ್ಳುವ ಮೂಲಕ ದಾನವರಾಗಿಬಿಡ್ತಾರೆ. ಅಂತಾದ್ದೊಂದು ಪೈಶಾಚಿಕ ಕೃತ್ಯ ಮಂಡ್ಯದಲ್ಲಿ (Mandya) ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ಶಾಲೆಗೆ (School) ವಿದ್ಯಾರ್ಥಿನಿಯೊಬ್ಬಳು (Girl Student) ಮೊಬೈಲ್  (Mobile)ತಂದಿದ್ಲು ಅನ್ನುವ ಒಂದೇ ಕಾರಣಕ್ಕೆ ಶಿಕ್ಷಕಿಯೊಬ್ಬಳು ಆಕೆಯನ್ನ ಬೆತ್ತಲೆಗೊಳಿಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಹೌದು, .ಇಂತಾದ್ದೋಂದು ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ ಎನ್ನಲಾಗ್ತಿದೆ.

ಸರ್ಕಾರಿ ಶಾಲೆಯ ಎಂಟನೇ ತರಗತಿ ಓದುತ್ತಿರುವ ಬಾಲಕಿ ಕಳೆದ ಹದಿನೈದು ದಿನಗಳ ಹಿಂದೆ ಶಾಲೆಗೆ ಮೊಬೈಲ್ ಒಂದನ್ನ ತೆಗೆದುಕೊಂಡು ಹೋಗಿದ್ದಳಂತೆ. ಇದೇ ಕಾರಣಕ್ಕೆ ಶಿಕ್ಷಕಿ ವಿದ್ಯಾರ್ಥಿನಿ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಗಂಭೀರ ಆರೋಪಗಳು ಕೇಳಿ ಬಂದಿವೆ.

ತಹಶೀಲ್ದಾರ್ ಗೆ ಪೋಷಕರು ದೂರು

ಹೀಗಾಗಿ ಇದನ್ನ ಗಮನಿಸಿದ ಶಾಲಾ ಮುಖ್ಯ ಶಿಕ್ಷಕಿ ಸ್ನೇಹಲತಾ ಬಾಲಕಿಯನ್ನ ಕೊಠಡಿಯೊಳಗೆ ಕರೆದುಕೊಂಡು ಹೋಗಿ ವಿವಸ್ತ್ರಗೊಳಿಸಿ ಕೂಡಿ ಹಾಕಿದ್ದರಂತೆ. ಇದ್ರಿಂದ ದೌರ್ಜನ್ಯಕ್ಕೊಳಗಾದ ಬಾಲಕಿ ಈ ವಿಚಾರವನ್ನ ಪೋಷಕರಿಗೆ ತಿಳಿಸಿದ್ದು, ನಂತರ ಶಿಕ್ಷಕಿ ಸ್ನೇಹಲತಾ ವಿರುದ್ದ  ಕ್ಷೇತ್ರದ ಶಿಕ್ಷಣ ಅಧಿಕಾರಿ ಹಾಗೂ ಶ್ರೀರಂಗಪಟ್ಟಣದ ತಹಶೀಲ್ದಾರ್ ಗೆ ಪೋಷಕರು ದೂರು ನೀಡಿದ್ದಾರೆ.

ತಹಶೀಲ್ದಾರ್ ಶ್ವೇತ ಹಾಗೂ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿ ಶಾಲೆಗೆ ತೆರಳಿ ಶಿಕ್ಷಕಿಯನ್ನ ವಿಚಾರಣೆಗೆ ಒಳಪಡಿಸಿ ಬಳಿಕ ಮಂಡ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಅವರಿಗೆ ಪ್ರಥಮಿಕ ವರದಿ ನೀಡಿದ್ದಾರೆ.

ಶಿಕ್ಷಕಿಯ ಅಮಾನತು ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಫಾರಸ್ಸು.

ಇನ್ನು ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿಯ ಪ್ರಥಮಿಕ ವರದಿ ಬಂದ ಬಳಿಕ ವಿದ್ಯಾರ್ಥಿಗಳು, ಪೊಷಕರು ಮತ್ತು ಎಸ್‌ಡಿ‌ಎಂ‌ಸಿ ಸದಸ್ಯರ ಹೇಳಿಕೆಯನ್ನ ಆಧರಿಸಿ ಅದರಂತೆ ಮುಖ್ಯ ಶಿಕ್ಷಕಿ ಸ್ನೇಹಲತಾ ರನ್ನ ಅಮಾನತ್ತು ಮಾಡುವಂತೆ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮಂಡ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಶಿಫಾರಸ್ಸು ಮಾಡಿದ್ದಾರೆ.

ಘಟನೆಗೆ ಗ್ರಾಮಸ್ಥರ ಆಕ್ರೋಶ

ಇನ್ನು ಈ ಘಟನೆ ಕುರಿತು ಗ್ರಾಮಸ್ಥರು ಹಾಗೂ ಪೊಷಕರು ಆಕ್ರೋಶ ಹೊರ ಹಾಕಿದ್ದಾರೆ. ಶಿಕ್ಷಕಿ ಕೂಡ ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣಿಗೆ ಈ ರೀತಿ ಮಾಡೋದು ಎಷ್ಟು ಸರಿ..? ಶಿಕ್ಷಕರನ್ನ ದೇವರ ಸ್ಥಾನದಲ್ಲಿ ನೋಡಲಾಗತ್ತೆ ಆದ್ರೆ ಅಂತ ಶಿಕ್ಷಕರು ಈ ರೀತಿ ವಿಕೃತಿ ತೋರಿಸಿದ್ರೆ ಅಂತವರನ್ನ ಏನೆಂದು ಕರೆಯಬೇಕು ಅಂತ ಪ್ರಶ್ನಿಸಿದ್ದಾರೆ.

ಮುಖ್ಯ ಶಿಕ್ಷಕಿ ಮತ್ತು ಸಹ ಶಿಕ್ಷಕಿ ನಡುವೆ ಕಿತ್ತಾಟ

ಇನ್ನು ಈ ಹಿಂದೆ ಮುಖ್ಯ ಶಿಕ್ಷಕಿ ಸ್ನೇಹಲತಾ ಮತ್ತು ಸಹ ಶಿಕ್ಷಕಿ ನಡುವೆ ಕಿತ್ತಾಟ ನಡೆದು ಈ ವಿಚಾರ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರ ಗಮನಕ್ಕೆ ಕೂಡ ಹೋಗಿತ್ತು. ಇದಾದ ಬಳಿಕ ಸ್ವತಃ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ಜವರೇಗೌಡ ಸ್ಥಳಕ್ಕೆ ಹೋಗಿದ್ದರು. ಇಬ್ಬರಿಗೂ ಈ ರೀತಿ ಬೇಜಾವಾಬ್ದಾರಿಯಿಂದ ನಡೆದುಕೊಳ್ಳದಂತೆ ಸೂಚನೆ ನೀಡಿದ್ದರು ಅಂತ ಹೇಳಲಾಗ್ತಿದೆ.

ಇದಾದ ಬಳಿಕ ಕೂಡ ಮುಖ್ಯ ಶಿಕ್ಷಕಿ ಎಚ್ಚೆತ್ತುಕೊಳ್ಳದೆ ಮೇಲಿಂದ ಮೇಲೆ ಈ ರೀತಿ ದುರ್ನಡತೆ ತೋರಿದ್ದಾರೆ ಅಂತ ಆರೋಪಿಸಲಾಗಿದೆ. ಸದ್ಯ ಅದೇನೆ ಆಗಲಿ ಶಿಕ್ಷಕಿ ಸ್ನೇಹಲತಾ ಈ ರೀತಿ ಬಾಲಕಿಯನ್ನ ವಿವಸ್ತ್ರಗೊಳಿಸಿದ್ದಕ್ಕೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗ್ತಿದ್ದು, ಆಕೆಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿ ಬರ್ತಿದೆ.

WhatsApp
Facebook
Telegram
error: Content is protected !!
Scroll to Top