ಕಲಘಟಗಿ ವಿಧಾನ ಸಭಾ ಕ್ಷೇತ್ರದ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡದಂತೆ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ಆಗ್ರಹ

ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಪ್ರತಿಭಟನೆ: ಭಟ್ಕಳ ಘಟಕದ ಉಪಾಧ್ಯಕ್ಷ ಶಂಕರ್ ನಾಯ್ಕ ಬೆಟ್ಕೂರ್ ಎಚ್ಚರಿಕೆ

ಭಟ್ಕಳ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂ ಕಬಳಿಕೆ ಮಾಡಿರುವ, ಮಾಡುತ್ತಿರುವ ಕಲಘಟಗಿ ವಿಧಾನಸಭಾ ಕ್ಷೇತ್ರದ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡಬಾರದು ಒಂದು ವೇಳೆ ನಿಡಿದ್ದೆ ಆದಲ್ಲಿ ರಾಜ್ಯದಾಧ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುದು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಇದರ ಬೆಳಗಾವಿ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಅರ್ಜುನ್ ಮಲ್ಯ ಹೇಳಿದರು

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಭಟ್ಕಳ ಘಟಕವು ಸರ್ಕಾರಿ ಭೂ ಕಬಳಿಕೆ ಮಾಡಿರುವ, ಮಾಡುತ್ತಿರುವ ಕಲಘಟಗಿ ವಿಧಾನಸಭಾ ಕ್ಷೇತ್ರದ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ತಾಲೂಕ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿತು ಮನವಿಯಲ್ಲಿ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನವರಾದ ಸಂತೋಷ್ ಲಾಡ್ ಅವರು ಹಲವಾರು ರೀತಿಯ ರಾಜಕೀಯ ಅಧಿಕಾರ ಅನುಭವ ಮಾಡಿದ್ದು ಸದರಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣೆಯೂ ಆಗಿದ್ದು, ಆ ಸಂದರ್ಬದಲ್ಲಿ, ತೋರಣಗಲ್ಲು ಹೋಬಳಿ ಮಾಳಾಪುರ ಗ್ರಾಮದ ಸರ್ವೆ ನಂಬರ್ 123 ರಲ್ಲಿ ಸುಮಾರು 50 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ ಯಾವುದೇ ರೀತಿಯ ಮಂಜೂರಾತಿ ಪಡೆಯದಿದ್ದರೂ ಖಾಸಗಿ ವ್ಯಕ್ತಿಯೊಬ್ಬನನ್ನು ಕೈಬರಹದ ಪಹಣಿಯಲ್ಲಿ ಹೆಸರು ನೋಂದಾಯಿಸಿ ನಂತರ ನಿಯಮಗಳನ್ನು ಉಲ್ಲಂಘಿಸಿ ಅವರಿಂದ ಕ್ರಯಕ್ಕೆ ಪಡೆದ ರೀತಿಯಲ್ಲಿ ತಮ್ಮ ಕುಟುಂಬದ ಸದಸ್ಯರುಗಳಿಗೆ ತಲಾ 8 ಎಕ್ಕರೆಯಂತೆ ಸುಮಾರು. ಕೋಟ್ಯಂತರ ರೂಪಾಯಿ ಬೆಲೆಬಾಳುವ 50 ಎಕರೆ ಭೂಮಿಯನ್ನು ಕಬ್ಬಡಿಕೆ ಮಾಡಲು ಸಂಚು ಹೂಡಿದ್ದು ನಂತರ ನಮ್ಮ ವೇದಿಕೆಯ ಹೋರಾಟದಿಂದ ಎಚ್ಚೆತ್ತುಕೊಂಡ ಅಲ್ಲಿನ ಜಿಲ್ಲಾ ಆಡಳಿತ ಎಲ್ಲಾ ನಕಲಿ ಸೃಷ್ಟತ ದಾಖಲೆಗಳನ್ನು ರದ್ದು ಮಾಡಿ ವಾಪಸ್ ಸರ್ಕಾರಕ್ಕೆ ಪಡೆದಿರುತ್ತಾರೆ. ಇದೇ ರೀತಿಯಾಗಿ ಸಂಡೂರು ಸೇರಿದಂತೆ ಬಹಳಷ್ಟು ಕಡೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಆಸ್ತಿಗಳನ್ನು ಕಬಳಿಕೆ ಮಾಡಿರುವುದಾಗಿ ಸ್ಥಳಿಯ ಜಿಲ್ಲಾ ಅಧಿಕಾರಿಗಳು ಸಹ ಮೌಖಿಕವಾಗಿ ತಿಳಿಸಿರುತ್ತಾರ ಈ ಸಂಬಂಧ ಕ್ರಿಮಿನಲ್ಪ ಪ್ರಕರಣ ದಾಖಲು ಮಾಡುವಂತೆ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಮು೦ದೆ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿದ್ದರು. ಈವರೆಗೂ ಯಾವುದೇ ರೀತಿಯಾದಂತಹ ಕ್ರಮ ಕೈಗೊಂಡಿರುವುದಿಲ್ಲಿ. ಇದಕ್ಕೆ ಇವರ ಪ್ರಭಾವ ರಾಜಕಾರಣವೇ ಸಾಕ್ಷಿಯಾಗಿರುತ್ತದೆ. ಆದ್ದರಿಂದ ಮತ್ತೆ ಇವರು ಸಚಿವರಾದರೇ ತಮ್ಮ ಎಲ್ಲಾ ಅಕ್ರಮಗಳನ್ನು ಮುಚ್ಚಿಹಾಕುವ ಸಂಭವವೇ ಹೆಚ್ಚಾಗಿರುತ್ತದೆ. ಆದ್ದರಿಂದ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸಂತೋಷ್ ಹೆಚ್ ಲಾಡ್ ಇವರಿಗೆ ಸಚಿವ ಸ್ಥಾನ ನೀಡಿದೆ ಅವರ ವಿರುದ್ಧ ತನಿಖೆ ನಡೆಸಲು ವಿಶೇಷ ಸಮಿತಿ ಒಂದನ್ನು ರಚಿಸುವಂತೆ ಹಾಗೂ ಅವರ ಮೇಲೆ ಕ್ರಿಮಿನಲ್ಲಿ ಪ್ರಕರಣ ಹೊರಿ ಕಾನೂನು ಕ್ರಮ ಜರುಗಿಸಲು ಕೋರಿ ಮನವಿ ಸಲ್ಲಿಸಲಾಯಿತು

WhatsApp
Facebook
Telegram
error: Content is protected !!
Scroll to Top