ಭಟ್ಕಳ‌‌ ಪಿ ಎಲ್ ಡಿ ಭ್ಯಾಂಕ್ ಸುಪರ್ ಸೀಡ್

ಪಿ ಎಲ್ ಡಿ ಬ್ಯಾಂಕ್ ನ ಕಾನೂನು ಬಾಹಿರ 24 ಸಿಬ್ಬಂದಿ ನೇಮಕಾತಿ ವಿರುದ್ದ ಮಾಹಿತಿ ಹಕ್ಕು ಸಂಘಟನೆಯ ಭಟ್ಕಳ ಘಟಕದ ತಾಲೂಕ ಉಪಾಧ್ಯಕ್ಷ ಶಂಕರ್ ನಾಯ್ಕ ಬೆಟ್ಕೂರ್ ಅವರಿಂದ ನಿರಂತರ ಹೊರಾಟ

ಹೊರಾಟದ ಫಲವಾಗ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಸುನಿಲ್ ನಾಯ್ಕ ಒಳಗೊಂಡಂತೆ ಸರ್ವ ಸದಸ್ಯರು ಅನರ್ಹ

ಭಟ್ಕಳ: ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ಪಿಎಲ್‌ಡಿ) ಯಲ್ಲಿ ಅಕ್ರಮವಾಗಿ ೨೪ ಸಿಬ್ಬಂದಿ ನೇಮಕಾತಿ ನಡೆಸಿರುವ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಭಟ್ಕಳ ತಾಲೂಕ ಉಪಾಧ್ಯಕ್ಷರಾದ ಶಂಕರ್ ನಾಯ್ಕ ಬೆಟ್ಕೂರ್ ಅವರು ಹೊರಾಟಕ್ಕಿಳಿದ್ದಿದ್ದರು ಈ ಹೊರಾಟದ‌ ಕಾರಣ ಸಿಬ್ಬಂದಿ ನೇಮಕಾತಿಯಲ್ಲಿ ಕರ್ನಾಟಕ ಸಹಕಾರ ಸಂಘಗಳ ನಿಯಮ ಉಲ್ಲಂಘನೆ ಸ್ಪಷ್ಟವಾಗಿ ಕಂಡು ಬಂದ ಹಿನ್ನಲೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರು ಪಿಎಲ್‌ಡಿ ಬ್ಯಾಂಕಿನ ಎಲ್ಲಾ ಸದಸ್ಯರುಗಳನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.


ಸರ್ಕಾರದ ಸುತ್ತೋಲೆಯಂತೆ ಪಟ್ಟಣದ ಪಿಎಲ್‌ಡಿ ಬ್ಯಾಂಕ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ವ್ಯತಿರಿಕ್ತವಾಗಿ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಶಂಕರ ನಾಯ್ಕ ಡಿ.ಆರ್ ಕೋರ್ಟಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಸಹಕಾರಿ ಅಭಿವೃದ್ಧಿ ಅಧಿಕಾರಿ ಸಹಕಾರ ಸಂಘಗಳ ನಿಯಮ ೧೭ ಹಾಗೂ ೧೮ರ ನೇರ ಉಲ್ಲಂಘನೆ ಕಂಡು ಬಂದಿದೆ. ೨೪ ಸಿಬ್ಬಂದಿ ನೇಮಕ ಕಾನೂನು ಬಾಹಿರ ಇದರಿಂದಾಗಿ ಕರ್ನಾಟಕ ಸಹಕಾರ ಸಂಘಗಳ ನಿಯಮ ೨೯ಸಿ ಅಡಿ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲು ಪರೀಶೀಲನೆ ನಡೆಸಬೇಕು, ನೇರವಾಗಿ ನೇಮಕಾತಿ ಮಾಡಿದ ೨೪ಸಿಬ್ಬಂದಿಯನ್ನು ವಜಾಗೊಳಿಸಬೇಕು ಎಂದು ವರದಿ ನೀಡಿದ್ದರು. ವರದಿ ಆದರಿಸಿ ಅಂದಿನ ಡಿಆರ್ ಸಿಬ್ಬಂದಿ ನೇಮಕಾತಿ ರದ್ದುಗೊಳಿಸುವಂತೆ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸುನೀಲ ನಾಯ್ಕ ಹೈಕೋರ್ಟ ಮೋರೆ ಹೋಗಿದ್ದರು. ಬಳಿಕ ಹೈಕೋರ್ಟ ದ್ವಿಸದಸ್ಯ ಪೀಠವು ಕಾರವಾರ ಡಿಆರ್ ನೀಡಿದ ತೀರ್ಪನ್ನೆ ಎತ್ತಿ ಹಿಡಿದಿದ್ದು ಇದರಿಂದ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಸುನೀಲ ನಾಯ್ಕ ಮುಖಭಂಗ ಎದುರಿಸಿದ್ದರು. ಮಾಜಿ ಶಾಸಕ ಸುನೀಲ ನಾಯ್ಕ ತನ್ನ ಅಧಿಕಾರದ ಪ್ರಭಾವ ಬಳಸಿ ಅನರ್ಹಗೊಳಿಸದಂತೆ ತಡೆ ಹಿಡಿದಿದ್ದರು ಎನ್ನಲಾಗಿದೆ.
ಮೇಲ್ಕಂಡ ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಅವಲೋಕಿಸಿದಾಗ ಎದುರು ಅರ್ಜಿದಾರರುಗಳು ದಿನಗೂಲಿ ನೌಕರರನ್ನು ಖಾಯಂಗೊಳಿಸಿದ್ದಾರೆ. ನೇಮಕಾತಿ ಸಮಿತಿ ರಚಿಸಿಕೊಳ್ಳದೇ, ಸಹಕಾರ ಸ೦ಘಗಳ ನಿಬಂಧಕರ ಪ್ರತಿನಿಧಿಯನ್ನು ನಿಯೋಜಿಸಿಕೊಳ್ಳದೇ, ನೇರನೇಮಕಾತಿಗೆ ಅರ್ಜಿ ಕರೆಯದೇ, ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ ನಡೆಸದೇ ದಿನಗೂಲಿ ನೌಕರರನ್ನು ಖಾಯಂಗೊಳಿಸಿ ನೇಮಕ ಮಾಡಿದ್ದು ನಿಯಮದ ಉಲ್ಲಂಘನೆ ಆಗಿದೆ. ಮಾಜಿ ಶಾಸಕ ಸುನೀಲ್ ಬಿಳಿಯಾ ನಾಯ್ಕ, ಗಾಯತ್ರಿ ವಿಜಯಕುಮಾರ ನಾಯ್ಕ, ಮಂಜಪ್ಪ ನಾಯ್ಕ, ಸಂತೋಷ ಮಾದೇವ ನಾಯ್ಕ, ಮೋಹನ ಕೊರ್ಗಪ್ಪ ನಾಯ್ಕ, ಹರೀಶ ವೆಂಕಟೇಶ ನಾಯ್ಕ, ನವನೀತ ಗಣೇಶ ನಾಯ್ಕ, ಈರಪ್ಪ ಮಂಜಪ್ಪ ಗರ್ಡಿಕರ, ಈಶ್ವರ ಮಂಜುನಾಥ ನಾಯ್ಕ, ಕಮಲಾ ರಾಮಚಂದ್ರ ನಾಯ್ಕ, ನಾಗಯ್ಯ ಮಾಸಿ ಗೊಂಡ, ಈಶ್ವರ ನಾರಾಯಣ ನಾಯ್ಕ, ಮಂಜು ಮೊಗೇರ, ಸುರೇಶ ಜಟ್ಟಯ್ಯ ನಾಯ್ಕ ಮತ್ತು ಮಂಜುನಾಥ ನಾಯ್ಕ, ಇವರುಗಳನ್ನು ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದಿಂದ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ ಪ್ರಕರಣ ೨೯-ಸಿ ರನ್ವಯ ಅನರ್ಹಗೊಳಿಸಿದೆ.
ವಿಶೇಷ ಆಡಳಿತ ಅಧಿಕಾರಿ ನೇಮಕ
ಬ್ಯಾಂಕಿನ ಎಲ್ಲಾ ಆಡಳಿತ ಮಂಡಳಿಯ ಸದ್ಸಯರುಗಳನ್ನು ಅನರ್ಹಗೊಳಿಸಿದ ಬಳಿಕ ಶೂನ್ಯತೆ ಕಂಡು ಬಂದಿದೆ. ಬ್ಯಾಂಕಿನ ದೈನಂದಿನ ವ್ಯವಹಾರ ಸುಗಮವಾಗಿ ನಡೆಯಲು ಕುಮಟಾ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಮುಂದಿನ ೬ ತಿಂಗಳಿಗೆ ವಿಶೇಷ ಅದಿಕಾರಿಯನ್ನಾಗಿ ನೇಮಿಸಿದೆ. ವಿಶೇಷ ಅಧಿಕಾರಿಯೂ ಕೂಡಲೆ ಬ್ಯಾಂಕಿನ ಪ್ರಭಾರವನ್ನು ಪಡೆದು ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಮಂಜುನಾಥ ಆರ್ ಆದೇಶ ನೀಡಿದ್ದಾರೆ.
ಈ ಬಗ್ಗೆ ಈಶ್ವರ ನಾಯ್ಕ, ಭಟ್ಕಳ ಮಾತನಾಡಿ
ಸುನೀಲ ನಾಯ್ಕ ಅವರ ಸರ್ವಾಧಿಕಾರ ಧೋರಣೆಯಿಂದ ಬೇಸತ್ತು ತಾನು ಈಗಾಗಲೆ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top