ವಿಧಾನ ಸಭಾ ಚುನಾವಣೆಯಲ್ಲಿ ಮಂಕಾಳ ವೈದ್ಯರಿಗೆ ಐತಿಹಾಸಿಕ ಗೆಲುವು

ಮುಸ್ಲಿಂ  ಯುವಕನಿಂದ ಹಿಂದೂ ಭಾಗ್ವಾ ದ್ವಜ ಮುಗಿಲೆತ್ತರಕ್ಕೆ

ಜೈ ಶ್ರೀ ರಾಮ್ ಡಿ ಜೆ ಸೌಂಡಿಗೆ ಸ್ಟೇಪ್ ಹಾಕಿದ ಮುಸ್ಲೀಮರು

ವೈದ್ಯರ ವಿಜಯೋತ್ಸದಲ್ಲಿ ಹಿಂದೂ ಮುಸ್ಲಿಂ ಭಾವೈಕ್ತೆಗೆ    ಸಾಕ್ಷಿಯಾದ  ಭಟ್ಕಳ ಹೊನ್ನಾವರ ಕ್ಷೇತ್ರ

ಭಟ್ಕಳ: ಹೊನ್ನಾವರ ವಿಧಾಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾದ ಮಂಕಾಳು ವೈದ್ಯರು ಐತಿಹಾಸಿಕ ಜಯಗಳನ್ನು ಗಳಿಸಿರುತ್ತಾರೆ. ನಿನ್ನೆ ನಡೆದ ವೈದ್ಯರ ವಿಜಯೋತ್ಸದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂಗಳ ಪವಿತ್ರ ದ್ವಜವಾದ ಬಾಗ್ವಾ ದ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದ್ದು ಹಿಂದೂ ಮುಸ್ಲೀ ಭಾವೈಕ್ಯತೆಗೆ ಭಟ್ಕಳ ಹೊನ್ನಾವರ ಕ್ಷೇತ್ರ ಸಾಕ್ಷಿಯಾಗಿ ನಿಂತಿದೆ

ಹೌದು ವೀಕ್ಷಕರೆ ಹಿಂದೆಂದೂ ಕೇಳರಿಯದ ಐತಿಹಾಸಿಕ ಜಯವನ್ನು ಮಂಕಾಳು ವೈದ್ಯರು ಪಡೆದುಕೊಂಡಿದ್ದಾರೆ ಮಂಕಾಳು ವೈದ್ಯರು 100442 ಬಹುಮತಗಳನ್ನು ಪಡೆದು 32,671  ಮತಗಳ ಅಂತರದಲ್ಲಿ ಸುನಿಲ್ ನಾಯ್ಕ ಅವರನ್ನು ತೀವೃತರದಲ್ಲಿ ಸೋಲಿಸುವ ಮೂಲಕ ಜಯ ಬೇರಿಯನ್ನು ಬಾರಿಸಿದ್ದಾರೆ. ಇವರ ಈ ಜಯಕ್ಕೆ ಯಾವುದೇ ಒಂದು ಧರ್ಮ ಯಾವುದೆ ಒಂದು ಜಾತಿ ಸಮೂದಾಯ ಎಂಬ ಬೇದಬಾವವಿಲ್ಲದೆ ಪ್ರತಿಯೊಬ್ಬರು ಪಾಲ್ಗೋಂಡಿದ್ದರು ಮುಖ್ಯವಾಗಿ ಪಕ್ಷಾತೀತವಾಗಿ ಇವರ ಜಯಕ್ಕಾಗಿ ಸಮರೋಪಾದಿಯಲ್ಲಿ ಕೆಲಸವನ್ನು ಮಾಡಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲಾ ಇದು ಜಯದ ಮೊದಲ ಮಾತಾಗಿದ್ದರೆ ಇವರ ವಿಜಯದ ನಂತರ ವಿಜಯೋತ್ಸವದಲ್ಲಿ ಧರ್ಮ ಜಾತಿ ಸಮೂದಾಯ ಎಂಬ ಯಾವಬೇದ ಬಾವವೂ ಇಲ್ಲದೆ ಪ್ರತಿಯೊಬ್ಬರು ಇವರ ವಿಜಯೋತ್ಸವದಲ್ಲಿ ಪಾಲ್ಗೋಂಡಿದ್ದರು ಮುಖ್ಯವಾಗಿ ವಿಜಯೊತ್ಸವದಲ್ಲಿ ಹಿಂದೂ ಮುಸ್ಲಿಂ ಎಂಬ ಯಾವುದೇ ಬೇದ ಭಾವ ಇಲ್ಲದೇ ಎಲ್ಲರು ಸೌಹಾರ್ದಯುತವಾಗಿ ಬಾವೈಕ್ಯತೆಯಲ್ಲಿ ಪಾಲ್ಗೋಂಡಿದ್ದರು . ಮುಸ್ಲೀಂ ಯುವಕನೊಬ್ಬ ಹಿಂದೂಗಳ ಪವಿತ್ರ ಭಾಗ್ವಾ ದ್ವಜವನ್ನು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಬಾಂದವತೆಯನ್ನು ಸಾರಿದನು ವೈದ್ಯರ ವಿಜಯೋತ್ಸವ ಐತಿಹಾಸಿಕ ಸಾಲನ್ನು ಸೇರಿಕೊಂಡಿತು ಎಂದರೆ ತಪ್ಪಾಗಲಿಕ್ಕಿಲ್ಲಾ. ಆದರೆ ಮೊಸರಲ್ಲಿ ಕಲ್ಲು ಹುಡುಕಿದರು ಎನ್ನುವಂತೆ ಕೆಲವು ಕಿಡಿಗೇಡಿಗಳು ವಿಜಯೋತ್ಸವದಲ್ಲಿ ಪಾಕಿಸ್ತಾನದ ದ್ವಜವನ್ನು ಹಾರಿಸಲಾಯಿತು ಎಂಬ ಸುಳ್ಳು ಪ್ರಚಾರವನ್ನು ನಡೆದಿದರು ಆದರೆ ಅಸಲಿಯತ್ತೆ ಬೇರೆ ಹೇಗೆ ಕಾಂಗ್ರೇಸ್ ದ್ವಜವನ್ನು ಹಾರಿಸಲಾಯಿತೊ ಹೇಗೆ ಬಾಗ್ವಾ ದ್ವಜವನ್ಬು ಹಾರಿಸಲಾಯಿತೋ ಹಾಗೆ ವಿಜಯೊತ್ಸವದಲ್ಲಿ ಮುಸ್ಲೀಂ ದ್ವಜವನ್ನು ಕೂಡ ಹಾರಿಸಲಾಯಿತು ಭಟ್ಕಳದಲ್ಲಿ ಮುಸ್ಲಿಂ ದ್ವಜ ಹಾರಿಸುವುದೆನು ಹೊಸದಲ್ಲಾ ಆದರೆ ಕೆಲವು ಕಿಡಿಗೇಡಿಗಳು ಅದನ್ನು ಪಾಕಿಸ್ತಾನದ ದ್ವಜ ಎಂದು ಹೇಳುವುದರ ಮೂಲಕ ಭಟ್ಕಳದಲ್ಲಿ ಕೊಮು ಬೆಂಕಿ ಹಚ್ಚುವ ಪ್ರಯತ್ನ ನಡೆಸಲಾಯಿತು ಆದರೆ ಇದ್ಯಾವುದಕ್ಕೂ ಜನ ಸಾಮಾನ್ಯ ಕಿವಿಗೋಡದೆ ಮಂಕಾಳು ವೈದ್ಯರ ವಿಜಯೋತ್ಸವದಲ್ಲಿ ಪಾಲ್ಗೋಂಡಿದ್ದರು

ಈ ದ್ವಜದ ಗೊಂದಲದ ಬಗ್ಗೆ ಉತ್ತರ ಕನ್ನಡ ಎಸ್ ಪಿ ಅವರು ಅದು ಪಾಕಿಸ್ತಾನ ದ್ವಜವಲ್ಲ ಮುಸ್ಲಿಂ ದ್ವಜ ಎಂಬ ಸ್ಪಷ್ಟಿಕರಣವನ್ನು ಕೊಟ್ಟಿದ್ದಾರೆ

ಒಟ್ಟಾರೆ ಮಂಕಾಳು ವೈದ್ಯರ ವಿಜಯ ಕರ್ನಾಟಕ ರಾಜ್ಯದಲ್ಲಿ ಇತಿಹಾಸವನ್ನೆ ಸೃಷ್ಟಿಸಿತು ಎಂದರೆ ತಪ್ಪಾಗಲಿಕ್ಕಿಲ್ಲಾ

WhatsApp
Facebook
Telegram
error: Content is protected !!
Scroll to Top