ಅಂದಾಜು 30000 ದಿಂದ 40000 ಬಹುಮತದಿಂದ ಕಾಂಗ್ರೇಸ್ ಅಭ್ಯರ್ಥಿ ಮಂಕಾಳ ವೈದ್ಯರ ಗೇಲುವಿನ ನಿರಿಕ್ಷೇ

ಚುನಾವಣಾ ನಂತರದ ಸಮಿಕ್ಷೇಯ ಮಾಹಿತಿ ಬಹಿರಂಗ

ಭಟ್ಕಳ :ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ನಂತರದ ಸಮಿಕ್ಷೇಯ ಪ್ರಕಾರ ಕಾಂಗ್ರೇಸ್ ಅಭ್ಯರ್ಥಿಯಾದ ಮಂಕಾಳ ವೈದ್ಯರು ಅಂದಾಜು 30000 ಸಾವಿರದಿಂದ 40000 ಮತಗಳ ಬಹುಮತಗಳಿಂದ ವಿಜಯಶಾಲಿಯಾಗುವು ಸಾಧ್ಯತೆಗಳಿದ್ದು ಕ್ಷೇತ್ರದಲ್ಲಿ ಕಾರ್ಯಕರ್ತರು ಅಭಿಮಾನಿಗಳು ವಿಜಯೋತ್ಸವಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವ ಬಗ್ಗೆ ತಿಳಿದು ಬಂದಿದೆ ‌.

ಹೌದು ವೀಕ್ಷಕರೆ ಭಟ್ಕಳ ಹೊನ್ನಾವರ ಕ್ಷೇತ್ರದ ವಿಧಾನ ಸಭಾ ಚುನಾವಣೆ ನಡೆದು ಮತ ಪೆಟ್ಟಿಗೆಗಳು ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿ ಇರಿಸಲಾಗಿದ್ದು ಕ್ಷೇತ್ರದಲ್ಲಿ ಒಟ್ಟು 222708 ಮತದಾರರಿದ್ದು ಇವರಲ್ಲಿ 112988 ಪುರುಷ ಮತದಾರರು 109720 ಮಹಿಳಾ ಮತದಾರರಿದ್ದು ಈ ಮತದಾರರಲ್ಲಿ 172414 ಮತದಾರರು ಮತದಾನ ಮಾಡಿದ್ದಾರೆ ಇವರಲ್ಲಿ 85101 ಪುರುಷ ಮತದಾರರು‌ 87313 ಮಹಿಳಾ ಮತದಾರರು ಮತದಾನ ಮಾಡಿದ್ದಾರೆ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 77.42% ದಷ್ಟು ಮತದಾನ ನಡೆದಿದ್ದು ಕ್ಷೇತ್ರದಲ್ಲಿ ಮಹಿಳೆಯರೆ ಅತಿ ಹೆಚ್ಚು ಮತದಾನವನ್ನು ಮಾಡಿರುತ್ತಾರೆ ಪುರುಷರಲ್ಲಿ 85101 ಜನ ಮತದಾನ ನಡೆಸಿದರೆ 87313 ಜನ ಮಹಿಳಾ ಮತದಾರರು ಮತದಾನವನ್ನು ಮಾಡಿದ್ದಾರೆ

ಇನ್ನು ಕ್ಷೇತ್ರದ ಚುನಾವಣೋತ್ತರ ಸಮಿಕ್ಷೇಯ ಪ್ರಕಾರ ಗೆಲುವು ಸಾದಿಸುವ ಅಭ್ಯರ್ಥಿಯ ಬಗ್ಗೆ ಹೇಳಬೇಕು ಎಂದರೆ ಅದು ಕಾಂಗ್ರೇಸ್ ಅಭ್ಯರ್ಥಿಯಾದ ಮಂಕಾಳು ವೈದ್ಯರಾಗಿದ್ದಾರೆ ಎಂದು ತಿಳಿದು ಬಂದಿದೆ ಕಳೆದ ಭಾರಿಯ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಮುಖ್ಯವಾಗಿ ಪರೇಶ ಮೆಸ್ತನ ಕೊಲೆ ಎಂಬ ಅಪಪ್ರಚಾರದ ಅಸ್ತ್ರ ಮಾಗೋಡು ಬಾಲಕಿಯ ಸುಳ್ಳು ಪ್ರಚಾರ ಮಂಕಾಳು ವೈದ್ಯರ ವಿರುದ್ದದ ಹೈಟೇಕ್ ಕಸಾಯಿ ಖಾನೆ ನಿರ್ಮಾಣ ಸುಳ್ಳುವದಂತಿ ಮೊದಿ ಅಲೆ ಈ ಎಲ್ಲಾ ಕಾರಣದಿಂದ ಹಿಂದಿನ ಚುನಾವಣೆಯಲ್ಲಿ ಸುನಿಲ್ ನಾಯ್ಕ ಕ್ಷೇತ್ರದಲ್ಲಿ ಗೆಲುವನ್ನು ಸಾದಿಸಿದ್ದರು ಆದರೆ ಅಂದು ಅಷ್ಟೆಲ್ಲಾ ಅನೂಕೂಲಕರ ಪರಿಸ್ಥಿತಿ ಸುನಿಲ್ ನಾಯ್ಕ ಅವರಿಗಿದ್ದಿದ್ದರು ಅವರು ಕೇವಲ ೫೦೦೦ ಮತಗಳ ಅಂತರದಲ್ಲಿ ಜಯವನ್ನು ಸಾದಿಸಿದ್ದರು ಕಳೆದ ಭಾರಿ ಅಷ್ಟೆಲ್ಲಾ ಅನುಕೂಲತೆ ಇದ್ದರು ಸುನಿಲ್ ನಾಯ್ಕ ಅವರು ಎದೆ ಉಬ್ಬಿಸಿ ಹೆಳುವಂತ ಮಟ್ಟದ ಮತವನ್ನೆನೂ ಪಡೆದಿರಲಿಲ್ಲವಾಗಿತ್ತು ಆದರೆ ಈಗ ಕ್ಷೇತ್ರದ ಸಂಪೂರ್ಣ ಚಿತ್ರಣವೆ ಬದಲಾಗಿದೆ ಕ್ಷೇತ್ರದಲ್ಲಿ ಮೋದಿ ಅಲೆಯ ಮುಗಿದುಹೊಗಿದೆ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಮೋದಿ ಅಂಕೋಲಾದಲ್ಲಿ ನಡೆಸಿದ ಬ್ರಹತ್ ಸಭೆ ಸಂಪೂರ್ಣ ಪ್ಲಾಪ್ ಆಗಿದೆ ಕ್ಷೇತ್ರದಿಂದ ಮೊದಿ ಕಾರ್ಯಕ್ರಮಕ್ಕೆ ಬಿಟ್ಟ ಸರಕಾರಿ ಬಸ್ ಕಾಲಿ ಕಾಲಿ ತೆರಳಿದ್ದು ಎಲ್ಲರಿಗೂ ತಿಳಿದ ಸಂಗತಿ ಹಾಗೆ ಪರೇಶ ಮೆಸ್ತಾ ಕೊಲೆ ಪ್ರಕರಣ ರಾಜಕಿಯ ಷಡ್ಯಂತ್ರ ಎನ್ನುವುದು ಜಗಜ್ಜಾಹಿರವಾಗಿದೆ ಮಂಕಾಳ ವೈದ್ಯರು ಹೈಟೆಕ್ ಖಸಾಯಿ ಖಾನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನುವುದು ಕೂಡ ಸುಳು ಆರೋಪ ಎಂಬುವುದು ಸಾಬಿತಾಗಿದೆ ಮಾಗೋಡು ಪ್ರಕರಣವು ಸತ್ಯಕ್ಕೆ ದೂರವಾದ ಘಟನೆ ಎಂದು ಕ್ಷೇತ್ರದ ಮತದಾರನಿಗೆ ತಿಳಿದು ಹೊಗಿದೆ ಸುನಿಲ್ ನಾಯ್ಕ ಅವರ ವಿರುದ್ದ ಟಿಕೆಟ್ ನೀಡಬಾರದು ಎಂಬ ಅಭಿಯಾನವನ್ನೆ ತಾಲೂಕಿನಲ್ಲಿ ನಡೆಸಲಾಗಿತ್ರು ಟಿಕೆಟ್ ನೀಡಿದ್ದೆ ಆದಲ್ಲಿ ನಾವು ಸುನಿಲ್ ನಾಯ್ಕ ಅವರನ್ನು ಸೊಲಿಸುತ್ತೆವೆ ಎಂದು ಪತ್ರಿಕಾಗೊಷ್ಟಿಯಲ್ಲಿ ಬಹಿರಂಗವಾಗಿ ಹಿಂದೂ ಕಾರ್ಯಕರ್ತರು ಬಿಜೆಪಿ ಮೂಲ ಕಾರ್ಯಕರ್ತರು ಹೇಳಿದ್ದರು ಆದರು ಕೂಡ ಬಿಜೆಪಿ ಮೂರ್ಖನದಿಂದ ಸುನಿಲ್ ನಾಯ್ಕ ಅವರಿಗೆ ಟಿಕೆಟ್ ನೀಡಿತ್ತು ಅದರ ಪಲಿತಾಂಶವೆ ಕ್ಣೇತ್ರದಲ್ಲಿ ಬಿಜೆಪಿ ಮಖಾಡೆ ಮಲಗಿದೆ ಹಿನಾಯವಾಗಿ ಸುನಿಲ್ ನಾಯ್ಕ ಸೊಲನ್ನು ಅನುಭವಿಸುತ್ತಾರೆ ಎಂದು ಕ್ಷೇತ್ರದಲ್ಲಿ ಕೇಳಿಬರುತ್ತಿದೆ ಇನ್ನು ಕ್ಷೇತ್ರದ ಭೂತ್ ಮಟ್ಟದ ಸಮಿಕ್ಷೇ ಹಾಗು ಚುನಾವಣೋತ್ತರ ಸಮಿಕ್ಷೇಯ ಪ್ರಕಾರ ಈ ಭಾರಿ ಮತದಾರರು ಸುನಿಲ್ ನಾಯ್ಕ ಆಡಳಿತ ವೈಖರಿಗೆ ಸಂಪೂರ್ಣ ಬದಲಾಗಿದ್ದು ಕಟ್ಟಾ ಬಿಜೆಪಿ ಬೂತಗಳಲ್ಲಿಯು ಕೂಡ ಮತದಾರರು 10 ರಿಂದ 20 ಶೇಕಡಾ ಮತಗಳನ್ನು ಮಂಕಾಳು ವೈದ್ಯರ ಪರವಾಗಿ ಮಾಡಿರುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ ಸುನಿಲ್ ನಾಯ್ಕ ಅಂದಾಜು 30 ಸಾವಿರದಿಂದ 40 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸುತ್ತಾರೆ ಮಂಕಾಳ ವೈದ್ಯರು 30 ರಿಂದ 40 ಸಾವಿರ ಬಹುಮತದಿಂದ ವಿಜಯವನ್ನು ಸಾದಿಸುತ್ತಾರೆ ಎಂಬುವುದು ತಿಳಿದು ಬಂದಿದೆ

ಕ್ಷೇತ್ರದಲ್ಲಿ ಈಗಾಗಲೆ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಮಂಕಾಳ ವೈದ್ಯರ ಅಭಿಮಾನಿ ಬಳಗದವರು ಮೇ 10 ಕ್ಕೆ ವಿಜಯೋತ್ಸವ ನಡೆಸಲು ಬಾರಿ ಸಿದ್ದತೆಗಳನ್ನು ನಡೆಸಿದ್ದಾರೆ ಎಂಬುವುದು ತಿಳಿದು ಬಂದಿದೆ

WhatsApp
Facebook
Telegram
error: Content is protected !!
Scroll to Top