ಭಟ್ಕಳ ಹೊನ್ನಾವರ ಕ್ಷೇತ್ರ ಸಾಮಾಜಿಕ ಜಾಲತಾಣದಲ್ಲಿ ಖಸಾಯಿ ಖಾನೆ ಪರವಾನಿಗೆ ಮನವಿ ಪತ್ರ ವೈರಲ್ ?

ಬಿಜೆಪಿ ಚುನಾವಣಾ ಅಭ್ಯರ್ಥಿ ಸುನಿಲ್ ನಾಯ್ಕ  ಯಡಿಯೂರಪ್ಪನವರಿಗೆ ಖಸಾಯಿ ಕಸಾಯಿಖಾನೆಗಾಗಿ  ಮನವಿ ಸಲ್ಲಿಸಿದ್ದರೆ? ಹಿಂದೂ ಕಾರ್ಯಕರ್ತರ ಪ್ರಶ್ನೇ

ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನ ಅವದಿಯ ಮಾಜಿ ಶಾಸಕರೂ ಬಿಜೆಪಿಯ ಚುನಾವಣಾ ಅಭ್ಯರ್ಥಿಗಳಾದ ಸುನಿಲ್ ನಾಯ್ಕ ಅವರು ಖಸಾಯಿ ಖಾನೆ ನಿರ್ಮಾಣ ಮಾಡಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪರವಾನಿಗೆ ನೀಡಲು ನೀಡಿರುವ ಮನವಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಗೋರಕ್ಷಕರು ಮತ್ತು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಬೆಳಕಿಗೆ ಬಂದಿದೆ.

ಕರಾವಳಿ ಕ್ಷೇತ್ರ ಹಿಂದೂತ್ವದ ಹೊರಾಟಕ್ಕೆ ಪ್ರಸಿದ್ದಿಯನ್ನು ಪಡೆದಿರುವ ಕ್ಷೇತ್ರವಾಗಿದೆ ಕಳೆದ ಚುನಾವಣೆಯಲ್ಲಿ ಪರೇಶ್ ಮೇಸ್ತನ ಸಹಜ ಸಾವನ್ನು ಕೊಲೆ ಎಂದು ಬಿಜೆಪಿಯ ಕಾರ್ಯಕರ್ತರು ಬಿಂಬಿಸಿ ಮೆಸ್ತನ ಸಾವನ್ನು ಚುನಾವಣಾ ಅಸ್ತ್ರವಾಗಿ ಉಪಯೋಗಿಸಿಕೊಂಡು ಇಡಿ ಕರಾವಳಿಯಾಧ್ಯಂತ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದರು ಆದರೆ ಈಗ ಇದೆ ಬಿಜೆಪಿ ಮಾಜಿ ಶಾಸಕ ಸುನಿಲ್ ನಾಯ್ಕ ಅವರು ಹೊನ್ನಾವರ ತಾಲೂಕಿನ ಮಂಕಿ ಬಣಸಾಲೆ, ಕಾಸರಗೊಡ, ವಲ್ಕಿಯಲ್ಲಿ ತುಂಬಾ ಜನ ಮುಸ್ಲಿಂ ಸಮುದಾಯ ವಾಸಮಾಡುತ್ತಿದ್ದು ಈಗ ಇರುವ ಖಸಾಯಿ ಖಾನೆಯಿಂದ ಗೋಮಾಂಸ ಒದಗಿಸುಲು ಸಾಧ್ಯವಿಲ್ಲದ ಕಾರಣ ಜನರ ಬೇಡಿಕೆ ಅನುಗುಣವಾಗಿ ಪ್ರತ್ಯೇಕ ಸ್ಥಳಗಳಲ್ಲಿ ಖಸಾಯಿ ಖಾನೆಗೆ ಪರವಾನಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿರುತ್ತಾರೆ. ಈ ಖಸಾಯಿಖಾನೆ ಸುತ್ತಮುತ್ತಲಿನ ಮುಸ್ಲಿಂ ಬಾಂಧವರಿಗೆ ಅಗತ್ಯ ಇರುತ್ತದೆ. ಕಾರಣ ಈ ಸ್ಥಳಗಳಲ್ಲಿ ಖಸಾಯಿಖಾನೆಗೆ ಪರವಾನಿಗೆ ಕೋರಿದೆ. ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲಿಸಿರುವ ಮನವಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದರ ಜೋತೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಗರು ಪರೇಶ ಮೇಸ್ತಾ ಹತ್ಯೆಯನ್ನು ಮಾಡಲು ಆಜಾದ್ ಅಣ್ಣಿಗೇರಿಯೆ ಪ್ರಮುಖ ಆರೋಪಿ ಎಂದು ಹೇಳಿದ್ದರು ಆದರೆ ಇದೆ ಬಿಜೆಪಿ ಶಾಸಕರು ಸುನಿಲ್ ಅಜಾದ್ ಅಣ್ಣಿಗೇರಿ ಎಂಬ ವ್ಯಕ್ತಿ ಕಳೆದ ಭಾರಿ ನಮ್ಮ ಗೆಲುವಿಗೆ ಶ್ರಮಿಸಿದವನು ಹಾಗೂ ಸಾಕಷ್ಟು ಪಾರ್ಟಿ ಫಂಡ್ ನೀಡುವ ಸ್ಥಿತಿವಂತನಾಗಿದ್ದು ಸೌಮ್ಯ ಸಭಾವದವನಾದ ಇವರನ್ನು ಉತ್ತರಕನ್ನಡ ಜಿಲ್ಲಾ ವಕ್ಸ್ ಬೋರ್ಡಗೆ ಉಪಾಧ್ಯಕ್ಷರನಾಗಿ ನೇಮಕ ಮಾಡಿದರೆ ಮುಂದಿನ ಚುನಾವಣೆಯಲ್ಲಿ ನಮಗೆ ಅನೂಕೂಲವಾಗುತ್ತದೆ. ಕಾರಣ ಈ ವ್ಯಕ್ತಿಯನ್ನು ಜಿಲ್ಲಾ ವಕ್ಸ್ ಬೋರ್ಡ್ ಗೆ ಉಪಾಧ್ಯಕ್ಷರನಾಗಿ ನೇಮಕ ಮಾಡುವಂತೆ ಕೊರಿರುವ ಮನವಿ ಪತ್ರ ಹಾಗು

ಜಮಾತುಲ್ ಮುಸ್ಲಿಮೀನ್ ಸಂಶಿ, ಹೊನ್ನಾವರ ಈ ಸಂಸ್ಥೆಯು ನನ್ನ ಮತಕ್ಷೇತ್ರದ ಹೊನ್ನಾವರ ತಾಲೂಕಿನ ಕುದ್ರಗಿ ಪಂಚಾಯತ ವ್ಯಾಪ್ತಿಯಲ್ಲಿ ಬರುತ್ತಿದ್ದು, ಸದ್ರಿ ಸಂಸ್ಥೆಯು ಸಂಶಿ ಗ್ರಾಮದಲ್ಲಿ ಸಾರ್ವಜನಿಕ ಸಮುದಾಯಭವನ) ಶಾದಿ ಮಹಲ್‌’ (Marriage Hall) ವನ್ನು ನಿರ್ಮಿಸಲು ಅಲ್ಪಸಂಖ್ಯಾತ ಇಲಾಖೆಯಿಂದ ಹಣ ಮಂಜೂರುಮಾಡುವಂತೆ ಕೋರಿರುವ ಮನವಿ ಪತ್ತವು ಕೂಡ ವೈರಲ್ ಆಗುತ್ತಿದ್ದೆ

ತಾಲೂಕಿನಲ್ಲಿ ಕಸಾಯಿ ಖಾನೆ ಮತ್ತು ಆಜಾದ ಅಣ್ಣಿಗೇರಿ ವಕ್ಪಬೊರ್ಡಗೆ ನೇಮಕ ಮಾಡುವ ಮನವಿ ಪತ್ರದ ಬಗ್ಗೆ ಆಕ್ರೋಶಗಳು ಕೇಳಿಬರುತ್ತಿದ್ದು ಇದು ಸತ್ಯವೊ ಅಸತ್ಯವೊ ಶಾಸಕರು ಈ ರೀತಿಯ ಮನವಿ ಮಾಡಿಕೊಂಡಿದ್ದರೆ ಎಂಬ ಅನುಮಾನ ತಾಲೂಕಿನಾಧ್ಯಂದ ದಟ್ಟವಾಗುತ್ರಿದೆ ಪ್ರತಿ ಚುನಾವಣೆಯಲ್ಲಿ ಹಿಂದೂ ಅಜೆಂಡಾ ಮುಂದಿಟ್ಟುಕೊಂಡು ಗೇಲುವನ್ನು ಸಾದಿಸುತ್ತಿದ ಬಿಜೆಪಿಗರು ಇಂತಹ ಕೆಲಸವನ್ನು ಮಾಡುತ್ತಿದ್ದಾರಾ ಎಂದು ಹಿಂದೂ ಕಾರ್ಯರ್ತರು ಆಕ್ರೋಶವನ್ನು ವ್ಯಕ್ತಡಿಸುತ್ತಿದ್ದಾರೆ ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಅವರು ಈ ಮನವಿ ಪತ್ರದ ಅಸಲಿಯತ್ತಿನ ಬಗ್ಗೆ ಕೂಡಲೆ ಉತ್ತರಿಸಬೇಕಾದ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಮಾತಾಗಿರುತ್ತದೆ.

ಈ ಮನವಿ ಪತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಕಜ್ಹಾಯದಂತೆ ಹರಿದಾಡುತ್ತಿದ್ದು ಈ ಬಗ್ಗೆ ಸುನಿಲ್ ನಾಯ್ಕ ಅವರೆ ಇದು ಸತ್ಯವೋ ಅಥವಾ ಸತ್ಯಕ್ಕೆ ದೂರವಾದದ್ದೋ ಎಂದು ಸ್ಪಷ್ಟನೆ ಕೊಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top